22ಕ್ಕೆ ಸರ್‌.ಎಂ.ವಿ ವೈಭವ

22ಕ್ಕೆ ಸರ್‌.ಎಂ.ವಿ ವೈಭವ

ತರಳಬಾಳು ಹುಣ್ಣಿಮೆ 7ನೇ ದಿನದದಲ್ಲಿ ತರಳಬಾಳು ಜಗದ್ಗುರುಗಳು

ದಾವಣಗೆರೆ, ಫೆ. 10-ವೈಜ್ಞಾನಿಕವಾಗಿ ಒಂದು ಯಂತ್ರವಾಗಿರುವ ಮೊಬೈಲ್ ಬಳಕೆ ಹಾಗೂ ಮಾಧ್ಯಮಗಳು ಜನಹಿತಕ್ಕಾಗಿ ಇರಲಿ. ಅದನ್ನು ದುರುಪಯೋಗ ಮಾಡಿಕೊಂಡು ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳದಿರಿ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸದ ಏಳನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಮೊಬೈಲ್ ಬಳಕೆ ಕೆಟ್ಟದ್ದು ಎನ್ನುವುದಕ್ಕಿಂತ ಅದನ್ನು ಬಳಸುವವರು ಯಾವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಮೊಬೈಲ್ ಸೇರಿದಂತೆ, ಸಾಮಾಜಿಕ ಮಾಧ್ಯಮದಿಂದ ಎಷ್ಟು ಸಂಸಾರಗಳು, ದಾಂಪತ್ಯಗಳು ಹಾಳಾಗಿರುವ ಉದಾಹರಣೆಗಳಿವೆ. ವೈಜ್ಞಾನಿಕ ಯಂತ್ರವಾಗಿರುವ ಮೊಬೈಲ್ ಬಳಕೆ ಮಾಡಿಕೊಳ್ಳುವುದರ ಮೇಲೆ ಒಳ್ಳೆಯದು, ಕೆಟ್ಟದ್ದು ನಿರ್ಧಾರವಾಗುತ್ತದೆ ಎಂದರು.

ಮಾಧ್ಯಮ ಎಷ್ಟೇ ಮುಂದುವರೆದರೂ, ಮನೆಯಲ್ಲಿಯೇ ಕುಳಿತು ಅಥವಾ ತಮ್ಮ ಅಂಗೈಯಲ್ಲಿಯೇ ತರಳಬಾಳು ಹುಣ್ಣಿಮೆ ವೀಕ್ಷಣೆ ಮಾಡಲು ಅವಕಾಶವಿದ್ದರೂ ಸಹ, ನೇರವಾಗಿ ಗುರುಗಳ ದರ್ಶನ ಮಾಡಬೇಕು. ಅನೇಕ ದಿಗ್ಗಜ್ಜರು, ಕಲಾವಿದರನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬಹುದು ಮತ್ತು ಗುರುಗಳ ಮೇಲಿನ ಅಪಾರ ಭಕ್ತಿ ತಮ್ಮನ್ನು ಇಲ್ಲಿಗೆ ಬರಮಾಡಿಕೊಂಡಿದೆ ಎಂದು ಅಪಾರ ಸಂಖ್ಯೆಯ ಭಕ್ತರನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

ಯಾರ ಮನಸ್ಸು ಒಳ್ಳೆಯದೋ ಅದು ಒಳ್ಳೆಯದರ ಬಗ್ಗೆ ಚಿಂತನೆ ಮಾಡುತ್ತದೆ. ಪರಸ್ಪರ ವಿಶ್ವಾಸವಿಲ್ಲದಂತಾಗಿದೆ. ಯಾರು ಎಲ್ಲಿದ್ದಾರೆ ಎಂದು ಜಿಪಿಎಸ್ ಮೂಲಕ ಕಂಡುಹಿಡಿಯವ ಕಾಲ ಇದೆ. ಅನುಮಾನವೇ ಹೆಚ್ಚಾಗಿರುವ ಸಂದರ್ಭದಲ್ಲಿ ನಂಬಿಕೆ ಇದ್ದರೆ ಸಾಂಸಾರಿಕೆ ಜೀವನ ಸುಗಮವಾಗಿ ನಡೆಯುತ್ತದೆ ಎಂದರು.

ಮದುವೆ ಕೇವಲ ದೈಹಿಕ ಆಕರ್ಷಣೆ  ಆಗಬಾರದು. ಅದೊಂದು ಆತ್ಮದ ಆಕರ್ಷಣೆಯಾಗಬೇಕು. ಪ್ರೀತಿ-ವಿಶ್ವಾಸ, ಪರಸ್ಪರ ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು. ಮೊಬೈಲ್ ನಂತಹ ಯಂತ್ರಗಳ ದುರ್ಬಳಕೆಯಿಂದ ಸಂಸಾರ ಹಾಳು ಮಾಡಿಕೊಳ್ಳದಿರಿ. ಯಂತ್ರಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಬೆಳೆ ನಷ್ಟ ಪರಿಹಾರ ನೀಡುವ ತಂತ್ರಾಂಶ ರೂಪಿಸುವಲ್ಲಿ ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿ, ಅವರಿಗೆ ಸಹಕಾರ ನೀಡಿದ್ದರಿಂದಲೇ ಭೂಮಿ ಆನ್‌ಲೈನ್ ಯೋಜನೆ ಮೂಲಕ ರೈತರ ಖಾತೆ ನೇರವಾಗಿ 1630 ಕೋಟಿ ರೂ. ಪರಿಹಾರ ಹಣ ಜಮೆ ಆಗಲು ಸಾಧ್ಯವಾಯಿತು ಎಂದು ಹೇಳಿದರು.

error: Content is protected !!