ಶ್ರೀ ಸೀತಾರಾಮ ಕಲ್ಯಾಣೋತ್ಸವ …

ಶ್ರೀ ಸೀತಾರಾಮ ಕಲ್ಯಾಣೋತ್ಸವ …

ದಾವಣಗೆರೆ: ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ವೈಭವದಿಂದ ಜರುಗಿತು. ಆರಂಭದಲ್ಲಿ ರಾಮಸೀತಾ ವಿಗ್ರಹಗಳನ್ನು ಒಡ್ಡೋಲಗದಲ್ಲಿ  ಮೆರವಣಿಗೆ ನಡೆಸಿದ ಭಕ್ತರು, ಬಳಿಕ ರಾಮಚಂದ್ರ ಸ್ವಾಮಿ ವಿಜಯೋತ್ಸವ ಮಂಟಪದಲ್ಲಿ ಪ್ರತಿಷ್ಠಾಪಿಸಿದರು.

ವಿವಿಧ ವಾದ್ಯಘೋಷಗಳೊಂದಿಗೆ ದಿಬ್ಬಣ ಎದುರುಗೊಳ್ಳುವಿಕೆ, ವಧು ನಿರೀಕ್ಷಣೆ, ಅರಿಶಿಣ ಕುಂಕುಮ ಸಮರ್ಪಣೆ, ತಾಳಿ ಕಟ್ಟುವುದು, ಧಾರೆ ಎರೆಯುವುದು, ಚಿನ್ನಾಭರಣ ಮತ್ತು ಕಪ್ಪ ಕಾಣಿಕೆ ಸಮರ್ಪಣೆ, ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

error: Content is protected !!