ಸದ್ಗುಣಗಳ ಪ್ರಾಪ್ತಿಗೆ ದುರ್ಬುದ್ಧಿಯನ್ನು ತ್ಯಜಿಸಿ

ಸದ್ಗುಣಗಳ ಪ್ರಾಪ್ತಿಗೆ ದುರ್ಬುದ್ಧಿಯನ್ನು ತ್ಯಜಿಸಿ

ಆಂಜನೇಯ ಸ್ವಾಮಿ ದೇಗುಲದ ಕಳಸಾರೋಣ ಕಾರ್ಯಕ್ರಮದಲ್ಲಿ ಡಾ. ಗುರುಬಸವ ಸ್ವಾಮೀಜಿ 

ಹರಿಹರ, ಫೆ.2- ಸದ್ಗುಣಗಳ ಪ್ರಾಪ್ತಿಗಾಗಿ ಮಾನವ ದುರ್ಬುದ್ಧಿ ಹಾಗೂ ಕೆಟ್ಟ ಗುಣಗಳನ್ನು ತೊರೆದು ಜೀವನ ನಡೆಸಬೇಕು ಎಂದು ಪಾಂಡೋಮಟ್ಟಿ ವೀರಕ್ತಮಠದ ಡಾ. ಗುರುಬಸವ ಮಹಾಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದ ಅಮರಾವತಿ ಗ್ರಾಮದಲ್ಲಿ ಬೆಟ್ಟದ ಮಲ್ಲಿಕಾರ್ಜುನ ಮತ್ತು ಆಂಜನೇಯಸ್ವಾಮಿ ದೇಗುಲದ  ಕಳಸಾರೋಹಣ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪಾಲಕರು, ಮಕ್ಕಳಿಗೆ ಶಿಸ್ತು-ಸಂಯಮ ಹಾಗೂ ಸಂಸ್ಕೃತಿ-ಸಂಸ್ಕಾರದ ಅರಿವು ನೀಡುವ ಜತೆಗೆ ಅಧ್ಯಾತ್ಮಿಕ ತಳಹದಿಯ ಮೇಲೆ ಜೀವನ ರೂಪಿಸಿಕೊಳ್ಳುವ ಸನ್ಮಾರ್ಗವನ್ನು ಒದಗಿಸಬೇಕು ಎಂದು ಹೇಳಿದರು.

ದೇವನೊಬ್ಬ ನಾಮ ಹಲವು’ ಆದ್ದರಿಂದ ದೇವರ ವಿಚಾರದಲ್ಲಿ ಪಕ್ಷಪಾತ ಮಾಡದೇ ಎಲ್ಲ ದೇವರನ್ನು ಏಕತೆಿಯಿಂದ ಕಾಣಬೇಕು. ಈ ನಿಟ್ಟಿನಲ್ಲಿ ಭಗವಂತನ ಮೇಲೆ ನಂಬಿಕೆ ಇಟ್ಟು, ಅವನ ಸೇವೆಯನ್ನು ಭಕ್ತಿಯಿಂದ ಮಾಡಿದರೆ, ನೆಮ್ಮದಿಯ ಬದುಕು ನಡೆಸಬಹುದು ಎಂದು ಹೇಳಿದರು.

ಮನಸ್ಸನ್ನು ದೇವಾಲಯದಂತೆ ಶುಚಿಗೊಳಿಸಿ, ಮಡಿವಂತಿಕೆಯಿಂದ ಕಾಣಬೇಕು. ಈ ದೃಷ್ಟಿಯಲ್ಲಿ ಮನಸ್ಸಿನ ಶುದ್ಧತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಯುವಕರು ಧರ್ಮದ ಹಾದಿಯಲ್ಲಿ ನಡೆಯಬೇಕು. ಗುರು-ಹಿರಿಯರು ಹಾಗೂ ತಂದೆ-ತಾಯಿಯರನ್ನು ಗೌರವ ಭಾವದಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು.

ಧರ್ಮದ ರಕ್ಷಣೆ, ನಮ್ಮನ್ನು ಕಾಪಾಡಲಿದೆ. ಈ ಧ್ಯೇಯದೊಂದಿಗೆ ಅಮರಾವತಿ ಗ್ರಾಮಸ್ಥರು ಮಾಡಿದ ದೇವಸ್ಥಾನದ ಜೀರ್ಣೋದ್ಧಾರ ಸೇವೆ ಅವರಲ್ಲಿನ ಧಾರ್ಮಿಕ ಭಕ್ತಿಗೆ ಸಾಕ್ಷಿಯಾಗಿದೆ ಎಂದು ಶ್ಲ್ಯಾಘಿಸಿದರು. ಇದಕ್ಕೂ ಮೊದಲು ಬ್ರಾಹ್ಮೀ ಮುಹೂರ್ತದಲ್ಲಿ ಆಂಜನೇಯ ಸ್ವಾಮಿಯ ಶಿಲಾ ಮೂರ್ತಿಗೆ ವಿಶೇಷ ರುದ್ರಾಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆದ ತರುವಾಯ ಉಭಯ ಪೂಜ್ಯರ ಹಸ್ತದಿಂದ ಪ್ರಾಣ ಪ್ರತಿಷ್ಠಾಪನೆ, ಕಳಸರೋಹಣ ಮಾಡಲಾಯಿತು.

ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀಗಳು, ಸಾಧು ವೀರಶೈವ ಸಮಾಜದ ಅಧ್ಯಕ್ಷ ಮಹಾದೇವಪ್ಪ ಗೌಡ್ರು, ಓಂ ಶಾಂತಿ ಯಶೋಧಮ್ಮ, ಸುಖಮನಿ ಸ್ವಾಮಿಗಳು ಮಾತನಾಡಿದರು.

ಇದೇ ವೇಳೆ ಬಸವರಾಜಪ್ಪ ಪೂಜಾರ್, ರಾಮಪ್ಪ ಪೂಜಾರ್, ಶಿವಯೋಗಿಸ್ವಾಮಿ, ವೀರಾಚಾರ್,  ವೈ. ಮಲ್ಲೇಶ್, ಎಂ. ಚಿದಾನಂದ ಕಂಚಿಕೇರಿ ಅವರು ಶ್ರೀಗಳಿಂದ ಗುರು ರಕ್ಷೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾಶಿನಾಥಯ್ಯ ಸ್ವಾಮಿಗಳು, ಎ.ಬಿ. ವಿಜಯಕುಮಾರ್, ಭೋಗೇಶಪ್ಪ ಬಣಕಾರ, ಪಾಲಾಕ್ಷಪ್ಪ, ಹೆಚ್.ಬಿ‌ ನಾಗರಾಜ್, ಎ.ಬಿ.ಸಿ ಬಸವರಾಜ್, ಲಿಂಗರಾಜ್, ಹೆಚ್.ಎಂ. ಸುರೇಶ್, ಕರಿಬಸಪ್ಪ, ಎ. ಪರಮೇಶ್ವರಪ್ಪ, ಹೆಚ್.ಸಿ. ನಾಗರಾಜ್, ಯೋಗೀಶ್, ಹೆಚ್. ರಾಜು, ಹನುಮಂತ ಗೌಡ್ರು, ಕಂಚಿಕೇರಿ ಮಹೇಶ್ವರಪ್ಪ, ಎ.ಎಂ.ಸಿ. ಹನುಮಂತಪ್ಪ, ಬೆಟ್ಟಪ್ಪರ ಮಲ್ಲೇಶಪ್ಪ, ಗೌಡ್ರು ಶೇಖರಪ್ಪ, ಕರೂರು ಹಾಲಪ್ಪ, ಹಿರಿಬಿದರಿ ಸಿದ್ದಪ್ಪ, ಜಟ್ಟೆಪ್ಪ, ಬಾಳೆಮರದ ಬಸವರಾಜ್, ಚಳಗೇರಿ ಹನುಮಂತಪ್ಪ, ಚಂದ್ರಪ್ಪ, ಬಲ್ಲೂರು ಹಾಲಪ್ಪ, ಹನುಮಂತಪ್ಪ, ಹೊನ್ನಪ್ಪ, ಹರೀಶ್ ಇದ್ದರು.

error: Content is protected !!