ದಾವಣಗೆರೆ, ಡಿ. 29 – ಹಿರಿಯ ರಾಜಕೀಯ ಮುತ್ಸದ್ಧಿ ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಸ್ವತಃ ವಿಡಿಯೋ ಸಂದೇಶದ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಡಿನ ಜನತೆಗೆ 2025ನೇ ವರ್ಷದ ಶುಭಾಶಯಗಳನ್ನು ತಿಳಿಸಿರುವ ಎಸ್ಸೆಸ್, ಮತದಾರರ ಆಶೀರ್ವಾದ ದಿಂದ ತಾನು ಆರೋಗ್ಯವಾಗಿದ್ದೇನೆ. ನಿಮ್ಮೊಂದಿಗೆ 2025ರ ಹೊಸ ವರ್ಷ ವನ್ನು ಆಚರಿಸುವೆ ಎಂದು ತಿಳಿಸಿದ್ದಾರೆ.