ಸಮಾಜ ಪರಿವರ್ತನೆಗೆ ಸಾಹಿತ್ಯದ ಮೂಲಕ ಕೊಡುಗೆ ನೀಡಿದ ಮಹಾನ್ ಸಂತ ಕುವೆಂಪು

ಸಮಾಜ ಪರಿವರ್ತನೆಗೆ ಸಾಹಿತ್ಯದ ಮೂಲಕ ಕೊಡುಗೆ ನೀಡಿದ ಮಹಾನ್ ಸಂತ ಕುವೆಂಪು

ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ

ದಾವಣಗೆರೆ, ಡಿ. 29- ಕುವೆಂಪು ಸಾಮಾಜಿಕ ಪರಿವರ್ತನೆಗೆ ಸಾಹಿತ್ಯದ ಮೂಲಕ  ಉತ್ಕೃಷ್ಟ ಕೊಡುಗೆ ನೀಡಿದ ಮಹಾನ್ ಸಂತರಾಗಿದ್ದರು ಎಂದು   ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಅಭಿಪ್ರಾಯಪಟ್ಟರು. 

ಜಿಲ್ಲಾ ಕನ್ನಡ, ಸಾಹಿತ್ಯ ಪರಿಷತ್ತಿನ ವತಿಯಿಂದ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು‌.

ಕುವೆಂಪು ಬರಹಗಳು ಕರ್ನಾಟಕದ ಸಾಂಸ್ಕೃತಿಕ ಬದುಕನ್ನು ಪ್ರಭಾವಿಸಿವೆ. ಅವರ ಬದುಕು, ಬರಹ, ಚಿಂತನೆಗಳು ಹಾಗೂ ಸಂದೇಶಗಳು ಯುವ ಜನತೆಯಲ್ಲಿ ಸ್ಪೂರ್ತಿಯ ಸೆಲೆಯನ್ನು ಉಕ್ಕಿಸುವ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು.

ಕುವೆಂಪು ಕುರಿತ ಉಪನ್ಯಾಸಗಳು, ವಿಚಾರ ಸಂಕಿರಣಗಳು ಹೆಚ್ಚು ಹೆಚ್ಚು ನಡೆಯುವ ಮೂಲಕ ಮೌಲ್ಯಯುತ ಸಾಹಿತ್ಯ ಮತ್ತು ವೈಚಾರಿಕತೆಯ ಬಿತ್ತನೆ ನಡೆಯಬೇಕು. ಪರಸ್ಪರ ಬಂಧುತ್ವ ಬೆಸೆಯುವಿಕೆಯೇ ವಿಶ್ವ ಮಾನವ ಕುವೆಂಪು ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಜಾನಪದ ಅಕಾಡೆಮಿಯ ಮಾಜಿ ಸದಸ್ಯೆ ಹಾಗೂ ಕಲಾವಿದೆ ರುದ್ರಾಕ್ಷಿ ಬಾಯಿಯವರು ಕುವೆಂಪು ರಚಿತ ಗೀತಗಳ ಗೀತಗಾಯನ ಮಾಡಿದರು.

ಲೇಖಕ ಡಾ.ಗಂಗಾಧರಯ್ಯ ಹಿರೇಮಠ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್.ಎಂ.ಮಲ್ಲಮ್ಮ,  ಎಂ.ಎ.ಸುದರ್ಶನ್, ತಾಲೂಕು ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಷಡಕ್ಷರಪ್ಪ ಬೇತೂರು, ರಟ್ಟಿಹಳ್ಳಿ ಶಿವಕುಮಾರ್, ಲೇಖಕಿಯರ ಸಂಘದ ವೀಣಾ ಕೃಷ್ಣಮೂರ್ತಿ, ಕೊಮಾರಪ್ಪ, ಹಾಲಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!