ಜಿಲ್ಲಾಡಳಿತದಿಂದ ವಿಶ್ವಮಾನವ ದಿನಾಚರಣೆ ಸರಳ ಆಚರಣೆ

ಜಿಲ್ಲಾಡಳಿತದಿಂದ ವಿಶ್ವಮಾನವ ದಿನಾಚರಣೆ ಸರಳ ಆಚರಣೆ

ದಾವಣಗೆರೆ, ಡಿ. 29- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನರಾಗಿದ್ದು, ಶೋಕಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು. 

ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ರವಿಚಂದ್ರ, ಬಿ.ವಾಮದೇವಪ್ಪ, ರುದ್ರಮುನಿ, ಗೋಪಿನಾಥ್, ಪತ್ರಕರ್ತ ಪ್ರಕಾಶ್, ಡಾ.ಗಂಗಾಧರಯ್ಯ ಹಿರೇಮಠ, ಜಗದೀಶ್ ಕೂಲಂಬಿ, ಆವರಗೆರೆ ರುದ್ರಮುನಿ, ದಿಳ್ಯೆಪ್ಪ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!