ಎಫ್‌ಎಆರ್‌ ಹೆಚ್ಚಳಕ್ಕೆ ಮುಂದಾದ ಮಹಾನಗರ ಪಾಲಿಕೆ

ಎಫ್‌ಎಆರ್‌ ಹೆಚ್ಚಳಕ್ಕೆ ಮುಂದಾದ ಮಹಾನಗರ ಪಾಲಿಕೆ

ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ

ದಾವಣಗೆರೆ: ಬಹಳ ವರ್ಷಗಳ ನಂತರ, 2023ರಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಎಫ್‌ಎಆರ್ ಅನುಪಾತ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಎಫ್‌ಎಆರ್ (ಫ್ಲೋರ್ ಏರಿಯಾ ರೇಷಿಯೋ) ಹೆಚ್ಚಳಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. 

ಎಫ್‌ಎಆರ್ ಹೆಚ್ಚಳಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಒಲವು ತೋರಿದ್ದೇ ಆದಲ್ಲಿ, ಇಷ್ಟು ದಿನ ಕೃಷಿ ಭೂಮಿಯನ್ನು ನುಂಗಿ ಬೆಳೆಯುತ್ತಿದ್ದ ನಗರ ಮುಂದಿನ ದಿನಗಳಲ್ಲಿ ಮೇಲ್ಮುಖವಾಗಿ (ಲಂಬ)ಯೂ ಬೆಳೆಯಲಿದೆ.

ಕಟ್ಟಡಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆಯಿಂದ ಮಹಡಿ ಪ್ರದೇಶ ಅನುಪಾತ (ಎಪ್‌ಎಆರ್)ದ ಮೇಲೆ ಅನುಮತಿ ನೀಡಲಾಗುತ್ತದೆ. ಎಫ್‌ಎಆರ್ ಅನುಪಾತ ಹೆಚ್ಚಿಸಿ, ನಿವೇಶನದ ವಿಸ್ತೀರ್ಣಕ್ಕೆ ತಕ್ಕಂತೆ ಮಹಡಿ ಎತ್ತರಿಸಲು ಅವಕಾಶ ನೀಡುವುದರಿಂದ ಅಪಾರ್ಟ್‌ಮೆಂಟ್ ವ್ಯವಸ್ಥೆ ಚಾಲ್ತಿಗೆ ಬಂದು, ವಸತಿ ಸಮಸ್ಯೆ ಪರಿಹಾರವಾಗುತ್ತದೆ. ದಾವಣಗೆರೆ ಎಫ್‌ಎಆರ್ ಅನುಪಾತ 3  ಮಾತ್ರ. ಇದು ನಿವೇಶನದ ಮುಂಭಾಗದಲ್ಲಿನ ರಸ್ತೆಗಳ ವಿಸ್ತರ್ಣದ ಮೇಲೆ ಅವಲಂಬಿತವಾಗುತ್ತದೆ.

ನಗರದಲ್ಲಿ ಎಫ್‌ಎಆರ್ ಕಡಿಮೆ ಇದ್ದ ಕಾರಣ ಹೆಚ್ಚು ಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ಇರಲಿಲ್ಲ. ನಿಯಮ ಮೀರಿ ಮಹಡಿ ನಿರ್ಮಿಸಿದವರಿಗೆ ಮಹಾನಗರ ಪಾಲಿಕೆ ದುಪ್ಪಟ್ಟು ದಂಡ ವಿಧಿಸುತ್ತಿತ್ತು. ಒಂದು ವೇಳೆ ದಂಡ ಕಟ್ಟದೇ ಇದ್ದರೆ

ಬೆಂಗಳೂರು ಮಾದರಿಯಲ್ಲಿಯೇ ದಾವಣಗೆರೆ ನಗರವೂ ಅತಿ ವೇಗದಲ್ಲಿ ಬೆಳೆಯುತ್ತಿದೆ. ಎಫ್‌ಎಆರ್ ದರ ಹೆಚ್ಚಳವಾದರೆ ನಗರ ಲಂಬವಾಗಿ ಬೆಳೆಯಲು ಸಾಧ್ಯವಾಗುತ್ತದೆ.

– ಕೆ.ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕ.


ಎಫ್‌ಎಆರ್ ಹೆಚ್ಚಿಸಿ ಸರ್ಕಾರದಿಂದ ಅನುಮತಿ ದೊರೆತಿದೆ. ರಸ್ತೆಯ ಅಗಲ, ಸೆಟ್‌ ಬ್ಯಾಕ್ ಪರಿಶೀಲಿಸಿ ಗರಿಷ್ಟ 6 ಫ್ಲೋರ್ ಕಟ್ಟಲು ಪರವಾನಗಿ ನೀಡಲಾಗುವುದು.

– ಕೆ.ಚಮನ್ ಸಾಬ್, ಮೇಯರ್, ಮಹಾನಗರ ಪಾಲಿಕೆ.


ಶೇ.2ರಷ್ಟು ಬಡ್ಡಿ ಬೀಳುತ್ತಿತ್ತು. ಇದೀಗ ಎಫ್‌ಎಆರ್ ಅನುಪಾತ ಮತ್ತಷ್ಟು ಹೆಚ್ಚಳವಾದರೆ ಮಹಡಿ ಕಟ್ಟಡಗಳ ಸಂಖ್ಯೆ ಅಧಿಕೃತವಾಗಿಯೇ ಹೆಚ್ಚಾಗಲಿದೆ. 

ದಾವಣಗೆರೆಯಲ್ಲೇನು ದೊಡ್ಡ ಕೈಗಾರಿಕೆಗಳು, ಐಟಿಬಿಟಿ ಕಂಪನಿಗಳಿಲ್ಲ. ಇರುವುದು ಬಹುತೇಕ  ಅಂದರೆ ಶೇ.70ರಷ್ಟು ಮಧ್ಯಮ ವರ್ಗದ ಜನರೇ. ಸಾಲ ಮಾಡಿ ಮನೆ ಕಟ್ಟುವ ಮೂಲಕ ಜೀವನದ ಬಹುದೊಡ್ಡ ಆಸೆಯೊಂದನ್ನು ಪೂರೈಸಿಕೊಳ್ಳುವವರೇ ಹೆಚ್ಚು. ಮನೆ ಕಟ್ಟುವವರು ಎರಡು ಅಥವಾ ಮೂರು ಅಂತಸ್ಥಿನ ಮನೆ ಕಟ್ಟಿ, ಅದರಿಂದ ಬಾಡಿಗೆ ನಿರೀಕ್ಷಿಸುತ್ತಾರೆ. ಅದರಿಂದ ಸಾಲ ತೀರಿಸಬಹುದೆಂಬ ಅಥವಾ ಆದಾಯ ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿರುತ್ತಾರೆ. ಆದರೆ ಎಫ್‌ಎಆರ್ ಅನುಪಾತ ಕಡಿಮೆ ಇರುವುದರಿಂದ ಎತ್ತರಕ್ಕೆ ಕಟ್ಟಿದಷ್ಟೂ ಅದು ಅಕ್ರಮವಾಗುತ್ತದೆ. ಅದಕ್ಕೆ ಪಾಲಿಕೆಗೆ ದುಪ್ಪಟ್ಟು ತೆರಿಗೆ ನೀಡಬೇಕಾಗುತ್ತದೆ.

ದುಪ್ಪಟ್ಟು ತೆರಿಗೆ ಲೂಟಿ ಮಾಡುವ ಬದಲು ಎಫ್‌ಎಅರ್ ಅನುಪಾತ ಹೆಚ್ಚಿಸಿ ಕಾನೂನು ಪ್ರಕಾರ ಕಂದಾಯ ವಸೂಲಿ ಮಾಡುವುದು ಸೂಕ್ತ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿತ್ತು.

error: Content is protected !!