ಅಭಿವೃದ್ಧಿಯ ಹರಿಕಾರ ಅಟಲ್ ಬಿಹಾರಿ ವಾಜಪೇಯಿ

ಅಭಿವೃದ್ಧಿಯ ಹರಿಕಾರ ಅಟಲ್ ಬಿಹಾರಿ ವಾಜಪೇಯಿ

ದಾವಣಗೆರೆ, ಡಿ. 25- ಭಾರತ ರತ್ನ, ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಅಂಗವಾಗಿ ಇಂದು ದಾವಣಗೆರೆ ಹೊರ ವಲಯದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಜಿಲ್ಲಾ ಬಿಜೆಿಯಿಂದ ಬುಧವಾರ ‘ಸುಶಾಸನ ದಿನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಹರಿಹರ ಶಾಸಕ ಬಿ.ಪಿ. ಹರೀಶ್, ಈ ದೇಶದ ಮೂಲೆ ಮೂಲೆಯಲ್ಲಿರುವ ಹಳ್ಳಿಗಳಿಗೂ ಸಂಪರ್ಕ ಕಲ್ಪಿಸಬೇಕು ಎನ್ನುವುದು ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ ಅದನ್ನು ನನಸು ಮಾಡಿದ್ದಾರೆ
ಎಂದರು.

ಇಂದು ಅನೇಕರು ಬದುಕಿದ್ದಾಗಲೇ ಮಾಡಿದ ಕೆಲಸಗಳಿಗೆ ತಮ್ಮ ಹೆಸರಿಟ್ಟುಕೊಳ್ಳುತ್ತಾರೆ. ಆದರೆ ವಾಜಪೇಯಿ ಆರೀತಿ ಮಾಡದೆ ಗ್ರಾಮೀಣ ಸಡಕ್ ಯೋಜನೆಗೆ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಎಂಬ ಹೆಸರು ನೀಡಿದರು. ಅವರ ದೇಶದ ಅಭಿವೃದ್ಧಿಯ ಹರಿಕಾರ. ಅಂತಹ ಮಹಾನ್ ನಾಯಕರು ಹುಟ್ಟುಹಬ್ಬವನ್ನು  ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ಸಿಹಿ ಹಂಚುವ ಮೂಲಕ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳು, ಅನಿಲ್ ಕುಮಾರ್ ನಾಯಕ್, ಐರಣಿ ಅಣ್ಣೇಶ್, ಮುಖಂಡರುಗಳಾದ ಎಸ್.ಎಂ. ವೀರೇಶ್ ಹನಗವಾಡಿ, ಬಸವರಾಜ ನಾಯ್ಕ, ಕೆ.ಎಂ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್, ಚಂದ್ರಶೇಖರ್ ಪೂಜಾರ್, ಹೆಚ್.ಎನ್. ಶಿವಕುಮಾರ್, ಶಿವರಾಜ್ ಪಟೇಲ್, ಸಿದ್ದೇಶ್, ವಿಶ್ವಾಸ ಹೆಚ್.ಪಿ, ಎನ್. ಹೆಚ್ ಹಾಲೇಶ್, ಹನುಮಂತಪ್ಪ, ಬಸವರಾಜ್, ಕಿಶೋರ್ ಕುಮಾರ್, ಶಾಮನೂರು ರಾಜು, ಹರೀಶ್, ಪಂಜು, ಪ್ರವೀಣ್, ನವೀನ್, ಗುರು ಸೋಗಿ ಇತರರು ಭಾಗವಹಿಸಿದ್ದರು.

error: Content is protected !!