ಚನ್ನಗಿರಿ ತಾಲ್ಲೂಕು ಚಿಕ್ಕುಡ ಧಾರ್ಮಿಕ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳು
ಚನ್ನಗಿರಿ, ನ. 14- ಅಧರ್ಮದ ಕವಚ ಹೊತ್ತ ವಿಚಾರಗಳು ಬಹಳ ಕಾಲ ಉಳಿಯುವುದಿಲ್ಲ. ನಿಜವಾದ ಧರ್ಮದ ಉಳಿವು, ಅಳಿವು ನಮ್ಮ ಆಚರಣೆಯಲ್ಲಿವೆ ಎಂಬುದನ್ನು ಯಾರೂ ಮರೆಯಬಾರ ದೆಂದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ತಾಲ್ಲೂಕಿನ ಚಿಕ್ಕುಡ ಗ್ರಾಮದಲ್ಲಿ ಇಂದು ಏರ್ಪಾಡಾಗಿದ್ದ ಶ್ರೀ ವೀರಭದ್ರೇ ಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ಈಶ್ವರ ದೇವಾಲಯದ ಉದ್ಘಾಟನೆ ಪ್ರಾಣ ಪ್ರತಿಷ್ಠಾಪನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗು ರುಗಳ ುಆಶೀರ್ವಚನ ನೀಡಿದರು.
ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ವಿನಾ ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿ ಮತ್ತು ಅತೃಪ್ತಿಗಳಿಗೆ ಕಾರಣವೆಂದರೆ ತಪ್ಪಾಗದು. ಮನುಷ್ಯ ಜೀವನದಲ್ಲಿ ಧರ್ಮ ಯಶಸ್ಸು ನೀತಿ ದಕ್ಷತೆ ಮತ್ತು ಒಳ್ಳೆಯ ಮಾತು ಅಳವಡಿಸಿಕೊಂಡು ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯರು, ತಾವರೆಕೆರೆ ಶಿಲಾ ಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾ ರ್ಯರು, ಚನ್ನಗಿರಿ ವಿರಕ್ತಮಠದ ಬಸವ ಜಯಚಂದ್ರ ಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತ ನೀಡಿದರು.
ಧರ್ಮ ಸಮಾರಂಭದ ಉದ್ಘಾಟನೆ ಮಾಡಿದ ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ, ಸುಖದ ಬದುಕಿಗೆ, ನೆಮ್ಮದಿಯ ಜೀವನಕ್ಕೆ ಧರ್ಮ ನಮ್ಮೆಲ್ಲರಿಗೂ ಬೇಕಾಗಿದೆ. ತಾವು ಶಾಸಕರಾಗಿದ್ದಾಗ ಈಶ್ವರ ದೇವಸ್ಥಾನ ನಿರ್ಮಾಣಕ್ಕೆ ಕೊಟ್ಟ 3 ಲಕ್ಷ ರೂ.ಗಳ ಅನು ದಾನವನ್ನು ಸದುಪಯೋಗಪಡಿಸಿಕೊಂಡಿದ್ದು ತಮಗೆ ತೃಪ್ತಿ ತಂದಿದೆ ಎಂದು ಹೇಳಿದರು.
ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ಇವತ್ತಿನ ದಿನಮಾನಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬರುವಲ್ಲಿ ಮನುಷ್ಯ ವಿಫಲನಾಗಿದ್ದಾನೆ. ಧಾರ್ಮಿಕ ಸಂಸ್ಕಾರ, ಸಹಯೋಗದಿಂದ ಮಾತ್ರ ಆದರ್ಶ ಸಮಾಜವನ್ನು ಕಟ್ಟಲು ಸಾಧ್ಯವೆಂದರು.
ತುಮ್‌ಕೋಸ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹೆಚ್.ಎಸ್.ಶಿವಕುಮಾರ್ ಯುಗ ಧರ್ಮ ರಾಮಣ್ಣರ ಪದ್ಯಗಳ ಕವನ ಸಂಕಲನ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳಾಗಿ ವಡ್ನಾಳ್ ಜಗದೀಶ್, ನಿಂಬಾಪುರ ಪರಮೇಶ್ವರಪ್ಪ, ಹೊದಿಗೆರೆ ರಮೇಶ್, ಗ್ರಾಮ ಪಂಚಾ ಯತಿ ಅಧ್ಯಕ್ಷೆ ಚಂದ್ರಮ್ಮ, ಯುಗಧರ್ಮ ರಾಮಣ್ಣ ಹಾಗೂ ಗ್ರಾಮದ ಹಿರಿಯ ಸದಸ್ಯರಿಗೆ ಶ್ರೀ ರಂಭಾಪುರಿ ಜಗದ್ಗುರು ಗಳು ಗುರುರಕ್ಷೆಯಿತ್ತು ಶುಭ ಹಾರೈಸಿ ದರು. ಶಿಕ್ಷಕ ಸಿ.ಹೆಚ್.ನಾಗರಾಜ್ ಸ್ವಾಗತಿಸಿದರು. ಶಿಕ್ಷಕ ಜಿ.ಡಿ.ದ್ಯಾಮೇಶ್ ಕುಮಾರ್ ನಿರೂಪಿಸಿದರು.