ಭಾರೀ ಮಳೆಗೆ ಸಂಪರ್ಕ ಸೇತುವೆ ಜಲಾವೃತ

ಭಾರೀ ಮಳೆಗೆ ಸಂಪರ್ಕ ಸೇತುವೆ ಜಲಾವೃತ

ಮಲೇಬೆನ್ನೂರು, ಅ. 9 – ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು, ಕಾಲುವೆಗಳು, ತುಂಬಿ ಹರಿಯುತ್ತಿವೆ.  ಇದರಿಂದಾಗಿ ತಗ್ಗು ಪ್ರದೇಶಗಳಲ್ಲಿರುವ ಭತ್ತದ ಗದ್ದೆಗಳು, ತೋಟಗಳು, ಜಲಾವೃತಗೊಂಡಿವೆ.

ಭಾರೀ ಮಳೆಯಿಂದಾಗಿ ಗುಳದಹಳ್ಳಿ-ಸಂಕ್ಲೀಪುರ ಸಂಪರ್ಕಿಸುವ ಹಳ್ಳದ ಸೇತುವೆ ತುಂಬಿ ಹರಿಯುತ್ತಿದ್ದು, ಎರಡೂ ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಬಂದ್‌ ಆಗಿದೆ. ಅಲ್ಲದೆ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಹಳ್ಳದ ಅಕ್ಕ-ಪಕ್ಕದಲ್ಲಿರುವ ಭತ್ತದ ಗದ್ದೆಗಳು, ತೋಟಗಳು ಜಲಾವೃತಗೊಂಡಿವೆ.

ಸಂಕ್ಲೀಪುರ, ಮಲ್ಲನಾಯಕನಹಳ್ಳಿ ಮತ್ತು ಇಂಗಳಗೊಂದಿ ಗ್ರಾಮಗಳಲ್ಲಿ 3 ಮನೆಗಳು ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಉಪತಹಶೀಲ್ದಾರ್‌ ಆರ್‌.ರವಿ ತಿಳಿಸಿ ದರು. ಈ ವೇಳೆ ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ ಹಾಜರಿದ್ದರು. 

ಮಳೆ ಪ್ರಮಾಣ : ಮಲೇಬೆನ್ನೂರಿನಲ್ಲಿ 47.8 ಮೀ.ಮೀ ಹೊಳೆಸಿರಿಗೆರೆಯಲ್ಲಿ 26.8 ಮೀ.ಮೀ. ಕೊಂಡಜ್ಜಿಯಲ್ಲಿ 29.4 ಮೀ.ಮೀ ಮತ್ತು ಹರಿಹರದಲ್ಲಿ 23.2 ಮೀ.ಮೀ ಮಳೆ ಆಗಿದೆ.

error: Content is protected !!