ಚನ್ನಗಿರಿಯಲ್ಲಿ ಶೇ.10 ಮಳೆ ಕೊರತೆ

ಚನ್ನಗಿರಿಯಲ್ಲಿ ಶೇ.10 ಮಳೆ ಕೊರತೆ

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.29ರಷ್ಟು ಹೆಚ್ಚು ಮಳೆ

ದಾವಣಗೆರೆ, ಸೆ. 30 – ಮಳೆಗಾಲದಲ್ಲಿ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದರೂ ಸಹ, ಚನ್ನಗಿರಿಯಲ್ಲಿ ಮಾತ್ರ ಶೇ.10ರಷ್ಟು ಮಳೆಯ ಕೊರತೆಯಾಗಿದೆ.

ಮಳೆಗಾಲದ ಅವಧಿಯಾದ ಜೂನ್ 1ರಿಂದ ಸೆಪ್ಟೆಂಬರ್ 30ರ ನಡುವೆ ಚನ್ನಗಿರಿಯಲ್ಲಿ ವಾಡಿಕೆಯ ಮಳೆಯ ಪ್ರಮಾಣ 533 ಮಿ.ಮೀ. ಆಗಿದ್ದರೆ, ವಾಸ್ತವಿಕವಾಗಿ 479 ಮಿ.ಮೀ. ಮಾತ್ರ ಮಳೆ ಸುರಿದಿದೆ.

ಉಳಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿದೆ. ಜಗಳೂರಿನಲ್ಲಿ ವಾಡಿಕೆಗಿಂತ ಶೇ.80ರಷ್ಟು ಹೆಚ್ಚು ಮಳೆಯಾಗಿದೆ.

ದಾವಣಗೆರೆಯಲ್ಲಿ 373 ಮಿ.ಮೀ. ವಾಡಿಕೆ ಮಳೆಯಾಗಿದ್ದರೆ, ವಾಸ್ತವಿಕವಾಗಿ 534 ಮಿ.ಮೀ. ಮಳೆಯಾಗಿದೆ. ಮಳೆ ಪ್ರಮಾಣ ಶೇ.43ರಷ್ಟು ಹೆಚ್ಚಾಗಿದೆ. ಹರಿಹರದಲ್ಲಿ 347 ಮಿ.ಮೀ. ವಾಡಿಕೆ ಮಳೆ ಇದ್ದರೆ, ವಾಸ್ತವಿಕವಾಗಿ 448 ಮಳೆಯಾಗಿದೆ. ಮಳೆ ಪ್ರಮಾಣ ಶೇ.29ರಷ್ಟು ಹೆಚ್ಚಾಗಿದೆ.

ಹೊನ್ನಾಳಿಯಲ್ಲಿ 366 ಮಿ.ಮೀ. ವಾಡಿಕೆ ಮಳೆ ಇದ್ದರೆ, ವಾಸ್ತವಿಕವಾಗಿ 502 ಮಿ.ಮೀ. ಮಳೆಯಾಗಿದೆ. ಶೇ.37ರಷ್ಟು ಮಳೆ ಹೆಚ್ಚಾಗಿದೆ. ಜಗಳೂರಿನಲ್ಲಿ ವಾಡಿಕೆ ಮಳೆ 287 ಮಿ.ಮೀ. ಆಗಿದ್ದರೆ, ವಾಸ್ತವಿಕವಾಗಿ 517 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.80ರಷ್ಟು ಹೆಚ್ಚು ಮಳೆಯಾಗಿದೆ.

ನ್ಯಾಮತಿಯಲ್ಲಿ ವಾಡಿಕೆ ಮಳೆ ಪ್ರಮಾಣ 535 ಮಿ.ಮೀ. ಆಗಿದ್ದರೆ, ವಾಸ್ತವಿಕವಾಗಿ 572 ಮಿ.ಮೀ. ಮಳೆಯಾಗಿದೆ. ಶೇ.7ರಷ್ಟು ಮಳೆ ಹೆಚ್ಚಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 393 ಮಿ.ಮೀ. ಆಗಿದ್ದರೆ, ವಾಸ್ತವಿಕವಾಗಿ 506 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಮಳೆ ಪ್ರಮಾಣ ಶೇ.29ರಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸೆಪ್ಟೆಂಬರ್‌ನಲ್ಲಿ 29ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 93.6 ಮಿ.ಮೀ. ಆಗಿದ್ದರೆ, ವಾಸ್ತವಿಕವಾಗಿ 33.2 ಮಿ.ಮೀ. ಮಾತ್ರ ಮಳೆಯಾಗಿದೆ. ಮಳೆಯ ಕೊರತೆ ಶೇ.65ರಷ್ಟಿದೆ.

error: Content is protected !!