ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ
ದಾವಣಗೆರೆ, ಸೆ.18- ಇತ್ತೀಚೆಗೆ ಹಿಂದೂ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್, ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವುದು. ನಗರದ ಗಾಂಧಿ ವೃತ್ತದಲ್ಲಿ ಪಾಲೆಸ್ತೇನ್ ಬರಹದ ಟೀ ಶರ್ಟ್ ಧರಿಸುವುದು ಖಂಡನೀಯ. ಇದೇ ರೀತಿ ಹಿಂದೂ ವಿರೋಧಿ ಚಟುವಟಿಕೆಗಳು ನಡೆದರೆ ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪೊಲೀಸ್ ಇಲಾಖೆ ಸಹ ರಾಷ್ಟ್ರವಿರೋಧಿ ಘಟನೆಗಳು ನಡೆದಾಗ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಕಾರ್ಲ್‌ಮಾರ್ಕ್ಸ್ ನಗರದ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿದ್ದು ಕೂಡಲೇ ಪೊಲೀಸರು ಆರೋಪಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ವೀರೇಶ್.ಎಂ, ಅನಿಲ್, ಮಲ್ಲಿಕಾರ್ಜುನ್, ಅಣ್ಣಪ್ಪ, ಶ್ರೀನಿವಾಸ್, ಶಿವಾಜಿ ರಾವ್, ವಿನಾಯಕ ರಾನಡೆ, ಶಂಭು ಲಿಂಗಪ್ಪ, ವೀರೇಶ್ ಗೌಳಿ, ಪುನೀತ್, ರಾಜ ಶೇಖರ್.ಎನ್, ಲೋಕಿಕೆರೆ ನಾಗರಾಜ್, ಶಿವ ಕುಮಾರ್ ರಾಜನಹಳ್ಳಿ, ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್, ಶಿವಾನಂದ್, ವಿಶ್ವಾಸ್, ಯೋಗೇಶ್, ಜೊಳ್ಳಿ ಗುರು, ನಾಗರಾಜ್ ಸುರ್ವೆ, ಕೊಟ್ರೇಶ್, ನವೀನ್ , ಕಲ್ಲೇಶ್, ಅರುಣ್, ಬಸವ ರಾಜ್, ಸಿದ್ದೇಶ್, ಕಿರಣ್, ಕಡ್ಲೆ ಬಾಳು ಧನಂಜಯ, ಚೇತನ, ಭಾಗ್ಯ ಪಿಸಾಳೆ, ಸಹನಾ ಮಂಜುನಾಥ್, ಗೌರಿ ಸತೀಶ್ ಮುಂತಾದವರು ಇದ್ದರು.