ಒಂಟಿ ಪೋಷಕರ ಮಕ್ಕಳಿಗೆ ಹಣಕಾಸು ನೆರವು ಎಂಬುದು ಸುಳ್ಳು ಸುದ್ದಿ : ಡಿಸಿ

ಒಂಟಿ ಪೋಷಕರ ಮಕ್ಕಳಿಗೆ ಹಣಕಾಸು ನೆರವು ಎಂಬುದು ಸುಳ್ಳು ಸುದ್ದಿ : ಡಿಸಿ

ದಾವಣಗೆರೆ, ಸೆ. 12 – ಒಂಟಿ ಪೋಷಕರಿರುವ ಮಕ್ಕಳಿಗೆ ಸರ್ಕಾರದಿಂದ ಹಣಕಾಸಿನ ನೆರವು ಸಿಗುತ್ತದೆ ಎಂಬ ಸುಳ್ಳು ಮಾಹಿತಿಯನ್ನು ಇತ್ತೀಚೆಗೆ ಜಿಲ್ಲೆಯಲ್ಲಿ ವೈರಲ್ ಮಾಡಲಾಗಿದೆ. ಆ ರೀತಿಯ ಯಾವುದೇ ಯೋಜನೆಯನ್ನು ಸರ್ಕಾರ ರೂಪಿಸಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ನೆರವಾಗಲು ಪ್ರಾಯೋಜಕತ್ವ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಅನ್ವಯ ತಿಂಗಳಿಗೆ 4 ಸಾವಿರ ರೂ.ಗಳಂತೆ ಒಂದು ವರ್ಷದ ಅವಧಿಗೆ ಮಾತ್ರ ನೆರವು ನೀಡಲಾಗುತ್ತದೆ ಎಂದವರು ಹೇಳಿದರು.

ಈ ಯೋಜನೆಯ ಅನ್ವಯ 2021-22ರಲ್ಲಿ 401 ಮಕ್ಕಳು ಹಾಗೂ 2022-23ರಲ್ಲಿ 210 ಮಕ್ಕಳಿಗೆ ನೆರವು ನೀಡಲಾಗಿದೆ. 2023-24ರಲ್ಲಿ 96 ಮಕ್ಕಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ನಗರದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು, ಇಲ್ಲವೇ ದೂರವಾಣಿ : 08192 – 222701 ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

error: Content is protected !!