ಮಲೇಬೆನ್ನೂರು ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಏಕಲವ್ಯ ಯುವಕ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯನ್ನು ಸೋಮವಾರ ಎತ್ತಿನ ಬಂಡಿಯಲ್ಲಿ ಇಟ್ಟು, ಭಜನೆ, ಬ್ಯಾಂಡ್, ಹಲಗೆ ಮೇಳಗಳ ಮೂಲಕ ಮೆರವಣಿಗೆ ಮಾಡಿ ನಂದಿಗುಡಿ ಬಳಿಯ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು. ಡಿಜೆ ಸದ್ದಿನ ಆರ್ಭಟದಲ್ಲಿಯೇ ವಿಸರ್ಜನೆ ನಡೆಯುವ ದಿನಗಳಲ್ಲಿ ಈ ಮೆರವಣಿಗೆ ವಿಶೇಷವಾಗಿತ್ತು.
December 26, 2024