ವೈಚಾರಿಕತೆ ಹೆಸರಿನಲ್ಲಿ ಸಂಸ್ಕೃತಿ ಕಲುಷಿತ

ವೈಚಾರಿಕತೆ ಹೆಸರಿನಲ್ಲಿ ಸಂಸ್ಕೃತಿ ಕಲುಷಿತ

ಹರಿಹರದ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳ ಅಸಮಾಧಾನ 

ಹರಿಹರ, ಜು.9-  ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಮತ್ತು ವೈಚಾ ರಿಕತೆಯ ಹೆಸರಿನಲ್ಲಿ  ಭಾರತೀಯ ಸಂಸ್ಕೃತಿಯನ್ನು ಕಲುಷಿತಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ರಂಭಾಪುರಿ  ಜಗದ್ಗುರು ಶ್ರೀ ವೀರ ಸೋಮೇಶ್ವರ ಮಹಾಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ದೇವಸ್ಥಾನ ರಸ್ತೆಯಲ್ಲಿ ರುವ ಶ್ರೀ ರೇಣುಕಾ ಮಂದಿರದಲ್ಲಿ ನಡೆದ ಆಷಾಢ ಮಾಸದ ಇಷ್ಟಲಿಂಗ ಮಹಾ ಪೂಜೆಯ ನಂತರ, ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.

ಇಷ್ಟಲಿಂಗ ಪೂಜೆ ಮಾಡುವುದ ರಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿ, ಸದೃಢ ಆರೋಗ್ಯ ಹಾಗೂ ಸಮಚಿತ್ತ ಪ್ರಾಪ್ತಿ ಆಗುತ್ತದೆ.  ಮನು ಷ್ಯರು ಅಧಿಕಾರ ಮತ್ತು ಹಣದ ಬೆನ್ನು ಹತ್ತಿ, ಧಾರ್ಮಿಕ ಆಚಾರ-ವಿಚಾರ ಗಳು ಬೇಡ ಎಂಬ ಪರಿಸ್ಥಿತಿಗೆ ಬಂದಿದ್ದಾರೆ. ಹಣ ಮತ್ತು ಅಧಿಕಾರದ ಹಿಂದೆ ಹೋದರೆ ಸುಖವಾಗಿ ಇರುವುದಿಲ್ಲ. ಜೊತೆಗೆ ಮಾನಸಿಕ ಶಾಂತಿ, ನೆಮ್ಮದಿ ಮರೀಚಿಕೆಯಾಗು ತ್ತದೆ. ಮನುಷ್ಯನಿಗೆ ಸಮಾಧಾನ, ಸಂತೃಪ್ತಿ ಪ್ರಾಪ್ತವಾಗಬೇಕಾದರೆ ಧರ್ಮ, ಸಂಸ್ಕೃತಿ ಮತ್ತು ಅದರ ಪರಿಪೂರ್ಣತೆಯನ್ನು ಅರಿತು ಗಟ್ಟಿ ಹೆಜ್ಜೆಗಳನ್ನು ಇಡುವಂತಾಗಬೇಕು ಎಂದು ಎಂದರು.

ವೀರಶೈವ ಧರ್ಮದಲ್ಲಿ ಗುರು ಕೊಟ್ಟಂತಹ ಇಷ್ಟಲಿಂಗ ಪೂಜೆ, ಧಾರ್ಮಿಕ ಸಂಸ್ಕಾರಕ್ಕೆ ಬಹಳಷ್ಟು ಮಹತ್ವವಿದೆ. ಸಂಸ್ಕಾರದಿಂದ ಮಾನವ ಜೀವನ ಉಜ್ವಲವಾಗಿ ಶ್ರೇಯಸ್ಸು ಕಾಣುವಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದಲೇ ಇಂದು ಎಷ್ಟೋ ಜನರು ಸಂಸ್ಕಾರ ಇಲ್ಲದ ಕಾರಣ, ಸಣ್ಣ ಸಣ್ಣ ಸಮಸ್ಯೆಗಳನ್ನು ಎದುರಿಸಲಾಗದೇ ಆತ್ಮಹತ್ಯೆಗೆ ಒಳಗಾಗುವಂತಹ ಅನೇಕ ಘಟನೆಗಳನ್ನು ಕಾಣುತ್ತಿದ್ದೇವೆ. ಆದ್ದರಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿ ಮತ್ತು ಸದೃಢ ಆರೋಗ್ಯ, ಸಮಚಿತ್ತದ ಮನಸ್ಸು ಲಭಿಸಬೇಕಾದರೆ ಇಷ್ಟಲಿಂಗ ಪೂಜೆಯನ್ನು ಮಾಡುವುದನ್ನು ರೂಢಿಸಿಕೊಂಡು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಆಚಾರ-ವಿಚಾರಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಹರಿಹರ ನಗರದಲ್ಲಿ ಹಿಂದಿನಿಂದಲೂ ಜಗದ್ಗುರುಗಳಾದ ರಂಭಾಪುರಿ ಪೀಠದ ಶ್ರೀ ವೀರಗಂಗಾಧರ ಸ್ವಾಮಿಗಳು, ಶ್ರೀ ರುದ್ರಮುನಿ ಶಿವಾಚಾರ್ಯ  ಸ್ವಾಮಿಗಳು, ಶ್ರೀಶೈಲ ಪೀಠದ ಜಗದ್ಗುರು ಶ್ರೀ ವಾಗೀಶ ಪಂಡಿತಾರಾಧ್ಯ ಸ್ವಾಮಿಗಳು ಹಾಗೂ ಶ್ರೀ ಉಮಾಪತಿ ಪಂಡಿತಾರಾಧ್ಯ ಸ್ವಾಮಿಗಳು ವಿಶೇಷ ಪೂಜಾ ಕಾರ್ಯಗಳನ್ನು ಮಾಡುತ್ತಾ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಜೊತೆಗೆ ಆಷಾಢ ಮಾಸದಲ್ಲಿ ನಡೆಯುವ ಕಾರ್ಯಗಳಿಗೆ ಇಲ್ಲಿನ ಅನೇಕ ಹಿರಿಯರು ಮತ್ತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ  ಭಕ್ತರೂ ಸಹಕಾರ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.  

ಪೂಜೆಯ ನೇತೃತ್ವವನ್ನು ಮಳಲಿ ಸಂಸ್ಥಾನ ಮಠದ ಶ್ರೀ ಡಾ. ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳ ವಹಿಸಿದ್ದರು. ಈ ಸಂದರ್ಭದಲ್ಲಿ ವಜ್ರೇಶ್, ಪಂಚಾಕ್ಷರಿ, ಎನ್.ಇ ಸುರೇಶ್, ಕೊಟ್ರೇಶಪ್ಪ ಹಿರೇಬಿದರೆ, ಮಹೇಶ್ವರಪ್ಪ ಕೆ.ಜಿ. ಧೂಳೆಹೊಳೆ, ಮಹೇಶ್ವರಪ್ಪ, ಚಂದ್ರಪ್ಪ ಸಮಾಳ , ಅಣ್ಣಪ್ಪ ಪೂಜಾರ್ ಹೊಸಪೇಟೆ, ಹೊಳಬಸಯ್ಯ, ಕರಿಬಸಪ್ಪ ಕುಂಬಾರ, ಷಣ್ಮುಖಪ್ಪ, ಬಿಳೆಬಾಳ ಚಂದ್ರಶೇಖರ್, ತೋಟಪ್ಪ, ಶಿವಯೋಗಿ ಸ್ವಾಮಿ ಕತ್ತಲಗೇರಿ, ಸಿದ್ದಲಿಂಗಸ್ವಾಮಿ, ಕುಮಾರಸ್ವಾಮಿ, ಹಾಲಸ್ವಾಮಿ, ಹಿರೇಮಠ ಸ್ವಾಮಿ, ಹೊಸಪೇಟೆ ಕುಂಬಾರ ಮಹೇಶ್ ಇತರರು ಹಾಜರಿದ್ದರು

error: Content is protected !!