ಜಾಗತಿಕ ಒಳಿತಿಗಾಗಿ ಯೋಗ ಪ್ರಮುಖ ಮಾರ್ಗ : ಪ್ರಧಾನಿ ಮೋದಿ

ಜಾಗತಿಕ ಒಳಿತಿಗಾಗಿ ಯೋಗ  ಪ್ರಮುಖ ಮಾರ್ಗ : ಪ್ರಧಾನಿ ಮೋದಿ

ಶ್ರೀಗನರ, ಜೂ. 21 – ಜಾಗತಿಕ ಒಳಿತಿಗಾಗಿ ಯೋಗ ಪ್ರಮುಖ ಮಾರ್ಗ ಎಂದು ವಿಶ್ವ ಭಾವಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಾಲ್ ಲೇಕ್ ದಂಡೆಯ ಮೇಲೆ ಆಯೋಜಿಸಲಾಗಿದ್ದ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಯೋಗ ಕೇವಲ ಜ್ಞಾನವಷ್ಟೇ ಅಲ್ಲ, ಅದು ವಿಜ್ಞಾನವೂ ಆಗಿದೆ. ಇದು ಕೇವಲ ದೇವರ ಕಡೆಗಿನ ಅಧ್ಯಾತ್ಮಿಕ ಯಾತ್ರೆಯಷ್ಟೇ ಅಲ್ಲ. ಯೋಗ ವೈಯಕ್ತಿಕ ಬೆಳವಣಿಗೆಯ ಭಾಗವೂ ಆಗಿದೆ ಎಂದು ಮೋದಿ ಹೇಳಿದರು.

ಬಯಲು ಪ್ರದೇಶದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು ಆದರೆ, ಬೆಳಿಗ್ಗೆ ಮಳೆ ಸುರಿದ ಕಾರಣ, ಕಾರ್ಯಕ್ರಮವನ್ನು ಒಳಾಂಗಣಕ್ಕೆ ಬದಲಿಸಲಾಯಿತು. ಮಳೆಯ ನಡುವೆಯೇ ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಸನಗಳನ್ನು ಪ್ರದರ್ಶಿಸಿದರು.

error: Content is protected !!