ದಾವಣಗೆರೆ, ಜೂ. 23- ನಗರದ ಡಿ. ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮೊನ್ನೆ ನಡೆದ ಸರಳ ಸಮಾರಂಭದಲ್ಲಿ ನೂತನ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ತುಲಾಭಾರ ಕಾರ್ಯಕ್ರಮ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಮಡಿಲಕ್ಕಿ ಕಾರ್ಯಕ್ರಮ, ವಿಶೇಷ ಪೂಜೆಯೊಂದಿಗೆ ಅಮ್ಮನವರ ಆಶೀರ್ವಾದ ಕಾರ್ಯಕ್ರಮವೂ ನಡೆಯಿತು. ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ಅಧ್ಯಕ್ಷ ಪ್ರಕಾಶ್ ಪಾಟೀಲ್, ಕಾರ್ಯದರ್ಶಿ ವೀರಭದ್ರರಾವ್, ಉಪಾಧ್ಯಕ್ಷ ವೆಂಕಟಾಚಲಪತಿ ಶ್ರೇಷ್ಠಿ, ಶ್ರೀಮತಿ ಪ್ರಭಾ ರವೀಂದ್ರ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ಮುಖಂಡರಾದ ನಟರಾಜ್, ಉಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
December 26, 2024