ದಾವಣಗೆರೆ, ಜೂ.16- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರೂ, ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳೂ ಆದ ಡಾ. ಶಾಮನೂರು ಶಿವಶಂಕರಪ್ಪ ಅವರು ಇಂದು 93 ವರ್ಷಗಳನ್ನು ಪೂರೈಸಿ 94ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂತು.
ಎಸ್ಸೆಸ್ ಮಕ್ಕಳಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್. ಗಣೇಶ್, ಶ್ರೀಮತಿ ಸುಧಾ ರಾಜೇಂದ್ರ ಪಾಟೀಲ್, ಶ್ರೀಮತಿ ಮಂಜುಳಾ ಶಿವಶಂಕರ್, ಶ್ರೀಮತಿ ಶೈಲಜಾ ಭಟ್ಟಾಚಾರ್ಯ ಮತ್ತು ಶ್ರೀಮತಿ ಮೀನಾ ಪಾಟೀಲ್ ಹಾಗೂ ಸೊಸೆಯಂದಿರಾದ ಶ್ರೀಮತಿ ಪ್ರೀತಿ ಬಕ್ಕೇಶ್, ಶ್ರೀಮತಿ ರೇಖಾ ಗಣೇಶ್, ಶ್ರೀಮತಿ ಡಾ.ಪ್ರಭಾ ಮಲ್ಲಿಕಾ ರ್ಜುನ್ ಮತ್ತು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಕೇಕ್ ಕತ್ತರಿಸುವ ಮೂಲಕ ಶುಭ ಕೋರಿದರು. ವಿದೇಶ ಪ್ರವಾಸದಲ್ಲಿ ರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದೂರವಾಣಿ ಮೂಲಕ ತಮ್ಮ ತಂದೆಗೆ ಶುಭಾಶಯ ಹೇಳಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ `ಶಿವ – ಪಾರ್ವತಿ’ ನಿವಾಸಕ್ಕೆ ತಂಡೋಪತಂಡವಾಗಿ ಆಗಮಿಸಿದ ಸಾರ್ವ ಜನಿಕರು ಎಸ್ಸೆಸ್ ಅವರಿಗೆ ಪುಷ್ಪಮಾಲೆ ಅರ್ಪಿಸಿ ಶುಭಾಶಯ ಸಲ್ಲಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಬಸಪ್ಪ ಅವರು 94 ಕೆ.ಜಿ. ಕೇಕ್ ಮಾಡಿಸುವ ಮೂಲಕ ಅಭಿಮಾನ ತೋರಿದರು.
ಶಾಸಕರುಗಳಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ರೇಣುಕ ಪ್ರಸನ್ನ, ಗುರುಮೂರ್ತಿ ಸೇರಿದಂತೆ ಮಹಾಸಭಾದ ಅನೇಕ ಪದಾಧಿಕಾರಿಗಳು, ಸಮಾಜ ಬಾಂಧ ವರು, ಆಂಧ್ರ ಪ್ರದೇಶ ಯಲ್ಲೂರು ಸಂಸದ ಮಹೇಶ್ ಕುಮಾರ್ ಯಾದವ್, ಹುಮನಾ ಬಾದ್‍ನ ಕಾಂಗ್ರೆಸ್ ಮುಖಂಡ ಅಭಿಷೇಕ್ ಮತ್ತಿತರರು ಶಿವಶಂಕರಪ್ಪ ಅವರ ನಿವಾಸಕ್ಕೆ ಆಗಮಿಸಿ, ಶುಭಾಶಯ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಸಂತೋಷ್, ಮಂಜುನಾಥ, ಅಪರ ಜಿಲ್ಲಾಧಿಕಾರಿ ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಉಪ ವಿಭಾಗಾಧಿಕಾರಿ ಶ್ರೀಮತಿ ಎನ್. ದುರ್ಗಾಶ್ರೀ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಎಸ್ಸೆಸ್ ಅವರನ್ನು ಭೇಟಿ ಮಾಡಿ ಶುಭಾಶಯ ಸಲ್ಲಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ಎಲ್. ರಮಾನಂದ್, ಖಜಾಂಚಿ ನಿರಂಜನ್ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು, ವಿದ್ಯಾಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ತಮ್ಮ ಸಿಬ್ಬಂದಿಗಳೊಂದಿಗೆ ಆಗಮಿಸಿ ಶುಭ ಕೋರಿದರು.
ಎಸ್ಸೆಸ್ ಅವರಿಗೆ ಶುಭಾಶಯ ಸಲ್ಲಿಸಲು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಬೀಳ್ಕೊಡುವಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್.ಕೆ.ಶೆಟ್ಟಿ, ಎಸ್.ಮಲ್ಲಿಕಾರ್ಜುನ್ ಮತ್ತಿತರರು ಮುತುವರ್ಜಿ ವಹಿಸಿದ್ದರು.