ಆಸ್ಪತ್ರೆಯಿಂದ ಗುಣವಾಗಿ ಹಿಂದಿರುಗಿದ ಎಸ್ಸೆಸ್

ಆಸ್ಪತ್ರೆಯಿಂದ ಗುಣವಾಗಿ ಹಿಂದಿರುಗಿದ ಎಸ್ಸೆಸ್

ದಾವಣಗೆರೆ, ಜೂ.3- ಆಯಾಸದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇಂದು ನಗರಕ್ಕೆ ಆಗಮಿಸಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಎಂದಿನಂತೆ ಚೌಕಿಪೇಟೆಯಲ್ಲಿರುವ ಶ್ರೀ ಕಲ್ಲೇಶ್ವರ ಟ್ರೇಡರ್ಸ್‌ ಅಂಗಡಿಯಲ್ಲಿ ಧಾನ್ಯಗಳ ಪರಿಶೀಲನೆ ಹಾಗೂ ವ್ಯಾಪಾರಿಗಳನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು.

ಎಸ್ಸೆಸ್ ಅವರ ಜೊತೆ ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಸೇರಿದಂತೆ ಮತ್ತಿತರರಿದ್ದರು.

error: Content is protected !!