ದವನ್‌ ಕಾಲೇಜಿನಿಂದ ಬೀದಿ ನಾಟಕ ಪ್ರದರ್ಶನ

ದವನ್‌ ಕಾಲೇಜಿನಿಂದ ಬೀದಿ ನಾಟಕ ಪ್ರದರ್ಶನ

ದಾವಣಗೆರೆ, ಮೇ 30 – ನಗರದ ಶಿವಾಜಿ ವೃತ್ತದ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಮುಂದೆ ದವನ್‌ ಕಾಲೇಜಿನ ವಿದ್ಯಾ ರ್ಥಿಗಳು ನುಕ್ಕಡ್ ನಾಟಕ ಪ್ರದರ್ಶಿಸಿದರು. 

ಇಂಟರ್‌ನೆಟ್ ಹ್ಯಾಕರ್‌ಗಳು, ದುರ್ಬಲತೆಗಳನ್ನು ಬಳಸಿಕೊಳ್ಳುವಲ್ಲಿ ಪ್ರವೀಣರು, ಡಿಜಿಟಲ್ ಯುಗದಲ್ಲಿ ಗಮನಾರ್ಹ ಬೆದರಿಕೆಯನ್ನು ಒಡ್ಡುತ್ತಾರೆ. ವಿವಿಧ ಅಂಶಗಳಿಂದ ಪ್ರೇರೇಪಿಸಲ್ಪಟ್ಟ ಅವರು ನೆಟ್‌ವರ್ಕ್‌ಗಳನ್ನು ನುಸುಳಲು, ಡೇಟಾವನ್ನು ಕದಿಯಲು ಮತ್ತು ಸೇವೆಗಳನ್ನು ಅಡ್ಡಿಪಡಿಸಲು ವೈವಿಧ್ಯಮಯ ತಂತ್ರಗಳನ್ನು ಬಳಸುತ್ತಾರೆ. ಅವರ ವಿಧಾನಗಳು ಮತ್ತು ಪ್ರೇರಣೆಗಳ ಆಳವಾದ ತಿಳುವಳಿಕೆ ಅಗತ್ಯ. ಆದ್ದರಿಂದ ಈ ಇಂಟರ್‌ನೆಟ್ ಹ್ಯಾಕರ್‌ನ ಕುರಿತು ಜಾಗೃತಿ ಮೂಡಿಸಾಲು ದವನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಮ್ಯಾನೇಜ್‌ಮೆಂಟ್ ಅಧ್ಯಯನದ ವಿದ್ಯಾರ್ಥಿಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಬಿ.ಕಾಂ ಆಕಾಶ್ ಎ. ಯು, ಸಿ. ಜೆ ಧೀರಜ್, ಗೌರಿ.ಎಂ, ಐಶ್ವರ್ಯ ಎಂ. ಮತ್ತು ಇತರರು  ನಾಟಕ ಪ್ರದರ್ಶಿಸಿದರು.

error: Content is protected !!