ಯುಗಾದಿ ಎಂದರೆ ಶಾವಿಗೆ ಯಾವಾಗ? ಹೋಳಿಗೆ ಯಾವಾಗ? ಎಂದು ಸ್ಥಳೀಯವಾಗಿ ಚರ್ಚೆ ನಡೆಯುವುದುಂಟು. ಹೊಸ ವರ್ಷದ ಪ್ರಥಮ ದಿನ ಶಾವಿಗೆ ಖಾದ್ಯ ತಯಾರಿಸಲಾಗುತ್ತದೆ. ಹೀಗಾಗಿ ಹಬ್ಬಕ್ಕೂ ಮೊದಲು ಶಾವಿಗೆಗೆ ಬೇಡಿಕೆ ಹೆಚ್ಚು. ದಾವಣಗೆರೆಯ ಕೆ.ಟಿ. ಜಂಬಣ್ಣ ನಗರದಲ್ಲಿ ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ಈ ಶಾವಿಗೆ ತಯಾರಿಸುತ್ತಲೇ ಜೀವನ ಕಟ್ಟಿಕೊಂಡಿವೆ. ಅಂದ ಹಾಗೆ ಈ ಕುಟುಂಬದವರು ವಾಸಿಸುವ ಓಣಿಗೆ ಶಾವಿಗೆ ಓಣಿ ಎಂದೇ ಕರೆಯಲಾಗುತ್ತದೆ. ನೂರಾರು ಜನರು ಬಂದು ಇಲ್ಲಿ ಶಾವಿಗೆ ಖರೀದಿಸುತ್ತಾರೆ. ಇಲ್ಲಿನ ಶಾವಿಗೆ ವಿದೇಶಗಳಲ್ಲೂ ಫೇಮಸ್ ಆಗಿರುವುದು ವಿಶೇಷ.
January 15, 2025