ದಾವಣಗೆರೆ, ಮೇ 21- ಸೂರ್ಯನ ಪ್ರಖರ ಕಿರಣಗಳಿಂದಾಗಿ ಕಾದ ಕಬ್ಬಿಣದಂತಾಗಿದ್ದ ಇಳೆಯು ಭಾನುವಾರ ರಾತ್ರಿ ವರುಣ ಕೃಪೆಯಿಂದ ಸುರಿದ ವರ್ಷಧಾರೆಯಿಂದಾಗಿ ತಂಪಾಗಿ, ನಗರದ ಜನತೆಗೆ ಆಹ್ಲಾದಕರ ಅನುಭವ ಉಂಟಾಯಿತು. ರಾತ್ರಿ ಸುಮಾರು 9.45ಕ್ಕೆ ಪ್ರಾರಂಭವಾದ ಮಳೆಯು, ಮಿಂಚು, ಸಿಡಿಲು, ಗುಡುಗಿನೊಂದಿಗೆ ಸುಮಾರು ರಾತ್ರಿ 10.30ರ ತನಕ ಸುರಿಯಿತು. ದಿಢೀರ್ ಸುರಿದ ಮಳೆಯಿಂದಾಗಿ ಜನತೆಗೆ ಸ್ವಲ್ಪ ಅಡಚಣೆಯಾಯಿತಾ ದರೂ, ಭೂಮಿ ತಂಪಾಗಿ ತಂಗಾಳಿ ಬೀಸಲಾರಂಭಿ ಸದಾಗ ಬಿಸಿಲಿನ ಝಳದಿಂಧ ಕಂಗಾಲಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
December 26, 2024