ದಾವಣಗೆರೆ, ಏ. 21- ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಅಭ್ಯರ್ಥಿಗಳ ಪ್ರಚಾರದ ಕಾವು ಏರುತಲಿದ್ದರೆ, ಮತ್ತೊಂದೆಡೆ ಜಿಲ್ಲಾಡಳಿತ ಮತದಾನ ಹೆಚ್ಚಿಸಲು ವಿಭಿನ್ನ ಪ್ರಯತ್ನಗಳನ್ನು ನಡೆಸುತ್ತಿದೆ.
ಒಟ್ಟಾರೆ ಜಿಲ್ಲೆಯಲ್ಲಿ 7 ಸಖಿ ಮತಗಟ್ಟೆ, 7 ಪಿಡಬ್ಲ್ಯೂಡಿ, 1 ಎತ್ನಿಕ್, 2 ಥೀಮ್, 1 ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.
ಮಹಿಳಾ ಮತದಾರರನ್ನು ಆಕರ್ಷಿಸಲು `ಸಖಿ’: ಕಳೆದವರ್ಷದಂತೆ ಈ ವರ್ಷವೂ ಸಹ ಮಹಿಳಾ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಸಖಿ ಮತಗಟ್ಟೆ ತೆರೆಯಲಾಗಿದೆ. ಇಲ್ಲಿ ಚುನಾವಣಾ ಸಿಬ್ಬಂದಿ, ಪೊಲೀಸ್ ಪೇದೆ ಎಲ್ಲರೂ ಮಹಿಳೆಯರೇ ಇರುತ್ತಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಸಖಿ ಮತಗಟ್ಟೆಯ ಉದ್ದೇಶ.
ಕಳೆದ ಬಾರಿಯ ಪಿಂಕ್ ಮತಗಟ್ಟೆಯ ಪರಿವರ್ತಿತ ರೂಪವಾಗಿ ಬಂದಿರುವ ಸಖಿ ಮತಗಟ್ಟೆಯನ್ನು ಜಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿದ್ದು, 586 ಪುರುಷರು, 627 ಮಹಿಳೆಯರು ಸೇರಿ ಒಟ್ಟು 1213 ಮತದಾರರಿದ್ದಾರೆ.
ಹರಿಹರ ಕ್ಷೇತ್ರದ ಬೆಳ್ಳೂಡಿ ಗ್ರಾಮದಲ್ಲಿ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿನ ಮತಗಟ್ಟೆಯಲ್ಲಿ ಒಟ್ಟು 795 ಮತದಾರರಲ್ಲಿ 415 ಪುರುಷರು, 380 ಮಹಿಳಾ ಮತದಾರರಿದ್ದಾರೆ.
ದಾವಣಗೆರೆ ಉತ್ತರ ವಲಯದ ನಿಟುವಳ್ಳಿಯಲ್ಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 445 ಪುರುಷರು, 501 ಮಹಿಳೆಯರು ಸೇರಿ ಒಟ್ಟು 963 ಮತದಾರರಿಗೆ ಅವಕಾಶ ಕಲ್ಪಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಪಿ.ಬಿ. ರಸ್ತೆಯಲ್ಲಿ ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಎಜುಕೇಷನಲ್ ಟ್ರಸ್ಟ್‌ನ ರೂಂ.ನಂ. 2ರಲ್ಲಿ ಮತದಾನಕ್ಕೆ ಅವಕಾಶವಿದ್ದು, 378 ಪುರುಷರು, 391 ಮಹಿಳಾ ಮತದಾರರು ಒಟ್ಟು 770 ಮತದಾರರು ಮತದಾನ ಮಾಡಬಹುದಾಗಿದೆ.
ಮಾಯಕೊಂಡ ಕ್ಷೇತ್ರದ ಆನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಬಹುದಾಗಿದ್ದು, ಒಟ್ಟು 1180 ಮತದಾರರಲ್ಲಿ 571 ಪುರುಷರು, 609 ಮಹಿಳಾ ಮತದಾರರಿದ್ದಾರೆ.
ಚನ್ನಗಿರಿ ಕ್ಷೇತ್ರದ ಸಂತೇಬೆನ್ನೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು 734 ಮತದಾರರಿಗೆ ಮತ ಚಲಾಯಿಸಲು ಅವಕಾಶವಿದ್ದು, 351 ಪುರುಷರು ಹಾಗೂ 383 ಮಹಿಳಾ ಮತದಾರರಿದ್ದಾರೆ.
ಹೊನ್ನಾಳಿ ಕ್ಷೇತ್ರದಲ್ಲಿ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿನ ಮತಗಟ್ಟೆಯಲ್ಲಿ 292 ಪುರುಷರು, 292 ಮಹಿಳೆಯರು ಸೇರಿ ಒಟ್ಟು 584 ಮತದಾರಿದ್ದಾರೆ.
ಪಿಡಬ್ಲ್ಯೂಡಿ : ಮತದಾರರನ್ನು ಕರೆತರಲು ವಾಹನಗಳು ಮತ್ತು ಮತದಾನ ಕೇಂದ್ರಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆಯನ್ನು ಹೊಂದಿರುವ ಪಿಡಬ್ಲ್ಯೂಡಿ ಮತಗಟ್ಟೆಗಳು ಜಿಲ್ಲೆಯ 7 ಕಡೆ ಸ್ಥಾಪಿಸಲಾಗುತ್ತಿದೆ.
ಜಗಳೂರು ಹೊರಕೆರೆ ರಸ್ತೆಯಲ್ಲಿನ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ 243 ಪುರುಷರು, 231 ಮಹಿಳೆಯರು ಸೇರಿ ಒಟ್ಟು 474 ಮತದಾರರಿಗೆ ಅವಕಾಶ ಕಲ್ಪಿಸಲಾಗುವುದು.
ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ 552 ಪುರುಷರು, 541 ಮಹಿಳೆಯರಿದ್ದು, ಒಟ್ಟು 1093 ಮತದಾರರಿದ್ದಾರೆ.
ದಾವಣಗೆರೆ ಉತ್ತರ ವಲಯದ ನಿಟುವಳ್ಳಿಯಲ್ಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 299 ಪುರುಷರು, 284 ಮಹಿಳೆಯರು ಸೇರಿ ಒಟ್ಟು 583 ಮತದಾರಿರಗೆ ಅವಕಾಶ ಕಲ್ಪಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಿ.ಬಿ. ರಸ್ತೆಯಲ್ಲಿ ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಎಜುಕೇಷನಲ್ ಟ್ರಸ್ಟ್‌ನ ರೂಂ.ನಂ. 1ರಲ್ಲಿ ಇಲ್ಲಿ 381 ಪುರುಷರು, 348 ಮಹಿಳಾ ಮತದಾರರು ಒಟ್ಟು 729 ಮತದಾರರು ಮತದಾನ ಮಾಡಬಹುದಾಗಿದೆ.
ಮಾಯಕೊಂಡ ಕ್ಷೇತ್ರದ ಆನಗೋಡಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೂಂ. ನಂ. 2ರಲ್ಲಿ ಮತದಾನ ಮಾಡಬಹುದಾಗಿದ್ದು, ಒಟ್ಟು 1211 ಮತದಾರರಲ್ಲಿ 607 ಪುರುಷರು, 604 ಮಹಿಳಾ ಮತದಾರರಿದ್ದಾರೆ.
ಚನ್ನಗಿರಿ ಕ್ಷೇತ್ರದಲ್ಲಿ ಸಂತೇಬೆನ್ನೂರಿನ ಎಸ್‌ಜೆವಿಪಿ ಕಾಲೇಜಿನಲ್ಲಿ ಒಟ್ಟು 823 ಮತದಾರರಿಗೆ ಮತ ಚಲಾಯಿಸಲು ಅವಕಾಶವಿದ್ದು, 418 ಪುರುಷರು ಹಾಗೂ 405 ಮಹಿಳಾ ಮತದಾರರಿದ್ದಾರೆ.
ಹೊನ್ನಾಳಿ ಕ್ಷೇತ್ರದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿನ ಮತಗಟ್ಟೆಯಲ್ಲಿ 267 ಪುರುಷರು, 297 ಮಹಿಳೆಯರು ಸೇರಿ ಒಟ್ಟು 564 ಮತದಾ
ರಿದ್ದಾರೆ.
ಎತ್ನಿಕ್ ಬೂತ್ : ಬೂತ್‌ಗಳ ಸ್ಥಳ, ನೋಟ ಮತ್ತು ಭಾವನೆ ವಿಭಿನ್ನವಾಗಿರುವ ಎತ್ನಿಕ್ ಮತಗಟ್ಟೆಯನ್ನು ಹೊನ್ನಾಳಿ ಕ್ಷೇತ್ರದ ತಾಲ್ಲೂಕಿನ ಆಂಜನೇಯಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದು, ಒಟ್ಟು 573 ಮತದಾರರಲ್ಲಿ 301 ಪುರುಷರು, 272 ಮಹಿಳಾ ಮತದಾರರಿದ್ದಾರೆ.
ಥೀಮ್ ಬೂತ್ : ಥೀಮ್ ಮತಗಟ್ಟೆಯು ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಪಾಂಡೋಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದು, 375 ಪುರುಷ ಮತದಾರರು, 318 ಮಹಿಳಾ ಮತದಾರರು ಸೇರಿ ಒಟ್ಟು 693 ಮತದಾರರಿದ್ದಾರೆ.
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಒಟ್ಟು 700 ಮತದಾರರಿದ್ದು, 348 ಪುರುಷರು, 352 ಮಹಿಳಾ ಮತದಾರರಿದ್ದಾರೆ.
ಯುವ ಬೂತ್ : ಯುವ ಮತದಾರರನ್ನು ಪ್ರೇರೇಪಿಸಲು ನಗರದ ಪಿ.ಬಿ. ರಸ್ತೆಯಲ್ಲಿರುವ ಧರ್ಮ ಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಎಜುಕೇಷನ್ ಟ್ರಸ್ಟ್‌ನಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಇಲ್ಲಿ 611 ಪುರುಷರು, 576 ಮಹಿಳೆಯರು ಸೇರಿ ಒಟ್ಟು 1187 ಮತದಾರರಿದ್ದಾರೆ.