ದಾವಣಗೆರೆ, ಏ. 17- ಅಧಿಕಾರದ ಆಸೆಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪಕ್ಷ ವಿರೋಧಿ ನೀತಿ ಖಂಡಿಸಿ, ಅವರ ಭಾವಚಿತ್ರವನ್ನು ಪಕ್ಷದ ಕಚೇರಿಯಿಂದ ತೆಗೆದು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಗುಜರಾತಿನ ಮಾಜಿ ಅಧ್ಯಕ್ಷರಾದ ಶ್ರೀಜಿತು ವಗನೀಯಾ, ಸಚಿವ ಕಾಂತಿಯಲಾಲ್ ಅಮೃತಿಯಾಯ ಅವರು ಸಹ ಜಗದೀಶ್ ಶೆಟ್ಟರ್ ನಡೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಶಿವಾನಂದ, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಉತ್ತರ ಮಂಡಳ ಅಧ್ಯಕ್ಷ ಸಂಗನಗೌಡ್ರು, ಚುನಾವಣಾ ಪ್ರಭಾರಿ ಹೆಚ್.ಎನ್. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಬಸವರಾಜಯ್ಯ, ರಾಜು ಶಾಮನೂರು, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಕೊಟ್ರೇಶ ಗೌಡ ಮತ್ತಿತರರು ಉಪಸ್ಥಿತರಿದ್ದರು.