ದಾವಣಗೆರೆ ಎಂಸಿಸಿ `ಎ’ ಬ್ಲಾಕ್ 12ನೇ ಮೇನ್, 3ನೇ ಕ್ರಾಸ್ ವಾಸಿ, ದಿ|| ಮಡಿವಾಳರ ನಿಂಗಪ್ಪ ಅವರ ಪತ್ನಿ – ಹಾಲಿನ ವ್ಯಾಪಾರಿ ಶ್ರೀಮತಿ ಗಂಗಮ್ಮ ಅವರು ದಿನಾಂಕ 12.10.2020ರ ಸೋಮವಾರ ಸಂಜೆ 7.55 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಗಂಗಮ್ಮ, ಮಡಿವಾಳ ಸಮಾಜದ ಮಾಜಿ ಅಧ್ಯಕ್ಷರಾದ ದಿ|| ಸತೀಶ್ ಅವರ ತಾಯಿ. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 13.10.2020ರ ಮಂಗಳವಾರ ಮಧ್ಯಾಹ್ನ 12.30ಕ್ಕೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದ ಕುಟುಂಬದವರು ತಿಳಿಸಿದ್ದಾರೆ.
January 10, 2025