ದಾವಣಗೆರೆಯ ಹಿರಿಯ ವಕೀಲರಾದ ಶ್ರೀ ಬಿ.ಜಿ. ಪ್ರಕಾಶ್ ಅವರು ದಿನಾಂಕ 23.11.2021ರ ಮಂಗಳವಾರ ಮಧ್ಯಾಹ್ನ 3.10ಕ್ಕೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು. ಶ್ರೀ ಪ್ರಕಾಶ್ ಅವರು, ಮಾಜಿ ಶಾಸಕರೂ, ಹೆಸರಾಂತ ಹಿರಿಯ ವಕೀಲರೂ ಆಗಿದ್ದ ಲಿಂ. ಬಿ.ಜಿ.ಕೊಟ್ರಪ್ಪ ಅವರ ಪುತ್ರರು. ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಿನಾಂಕ 24.11.2021ರ ಬುಧವಾರ ಬೆಳಿಗ್ಗೆ 11 ರವರೆಗೆ ಅವರ ಸ್ವಗೃಹ ದಾವಣಗೆರೆ ವಿದ್ಯಾನಗರ 14ನೇ ತಿರುವಿನ ಮನೆ ನಂ. 1959/5 ರಲ್ಲಿ ಇಡಲಾಗುವುದು. ನಂತರ ಅದೇ ದಿನ ಮಧ್ಯಾಹ್ನ 2 ಗಂಟೆಗೆ ಅವರ ಹುಟ್ಟೂರಾದ ಹರಿಹರ ತಾಲ್ಲೂಕಿನ ಬಿಳಸನೂರು ಗ್ರಾಮದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.
January 8, 2025