ಕಾದಂಬರಿಕಾರ ಹಾಗೂ ಪದಬಂಧಕಾರ ಅಜ್ಜಿಮನೆ ಗೊಡಬನಾಳ್ ನಾಗರಾಜ್ ಅವರು ಇಂದು ಮಧ್ಯಾಹ್ನ 3.30ರ ಸಮಯದಲ್ಲಿ ಚಿತ್ರ ದುರ್ಗ ತಾಲ್ಲೂಕಿನ ಗೊಡಬನಾಳ್ ಗ್ರಾಮದಲ್ಲಿ ರುವ ಅವರ ನಿವಾಸದಲ್ಲಿ ನಿಧನರಾದರು. ಮೃತರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ನಾಳೆ ದಿನಾಂಕ 24ರ ಶನಿವಾರ ಸಂಜೆ 4 ಗಂಟೆಗೆ ಗೊಡಬನಾಳ್ ಗ್ರಾಮದಲ್ಲಿರುವ ಅವರ ಸ್ವಂತ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024