ದಾವಣಗೆರೆ ಸಿಟಿ, 117 `ಎ’ ಬ್ಲಾಕ್, 8ನೇ ಕ್ರಾಸ್, ದೇವರಾಜ ಅರಸು ಬಡಾವಣೆ ವಾಸಿ ದಿ. ಭೀಮದಾಸ್ ಕೆ.ಪಿ. ಅವರ ಧರ್ಮಪತ್ನಿ ಶ್ರೀಮತಿ ಸಾವಿತ್ರಮ್ಮ ಇವರು ದಿನಾಂಕ : 01.03.2025ರ ಶನಿವಾರ ಸಂಜೆ ದೈವಾಧೀನರಾದರು. ಮೃತರಿಗೆ 91 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಮೃತರ ಸ್ವಗೃಹದಲ್ಲಿ 9 ಗಂಟೆಯ ವರೆಗೆ ಇರಿಸಲಾಗುವುದು ಅಂತ್ಯಕ್ರಿಯೆಯನ್ನು ದಿನಾಂಕ : 03.03.2025ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಪಿ.ಬಿ. ರಸ್ತೆಯ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಸಾವಿತ್ರಮ್ಮ ಭೀಮದಾಸ್ ಕೋಲ್ಕುಂಟೆ
