ದಾವಣಗೆರೆ ಹಳೇಪೇಟೆ, ಹಗೇದಿಬ್ಬ ಸರ್ಕಲ್, ಹಿರೇಮಠದ ವಾಸಿ ದಿ. ಸ್ವಾಮಿ ವಿರಜಾನಂದ ಹೆಚ್.ಎಸ್. ಇವರ ಧರ್ಮಪತ್ನಿ ಹಾಗೂ ಬಾಪೂಜಿ ಎಂಬಿಎ ಕಾಲೇಜಿನ ನಿರ್ದೇಶಕರಾದ ಸ್ವಾಮಿ ತ್ರಿಭುವಾನಂದ ಹೆಚ್.ವಿ. ಇವರ ತಾಯಿ ಹೆಚ್. ವಿ. ಶೋಭಾ ಇವರು ದಿನಾಂಕ 01.10.2024ರ ಮಂಗಳವಾರ ರಾತ್ರಿ 9.17ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 71 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಿನಾಂಕ 2.10.2024ರ ಬುಧವಾರ ಮೃತರ ಸ್ವಗೃಹ ಹಳೇಪೇಟೆ ಹಗೇದಿಬ್ಬ ಸರ್ಕಲ್ ಹಿರೇಮಠದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಅಂತ್ಯಕ್ರಿಯೆಯನ್ನು ಸಂಜೆ 4 ಗಂಟೆಗೆ ಬೂದಾಳ್ ರಸ್ತೆಯ ವೀರಶೈವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 22, 2025