ದಾವಣಗೆರೆ ಸಿಟಿ ಕೆ.ಬಿ. ಬಡಾವಣೆ, ಕಿರುವಾಡಿ ಲೇಔಟ್ ವಾಸಿ ಶ್ರೀಮತಿ ಪಾರ್ವತಮ್ಮನವರು ದಿನಾಂಕ 16.9.2024ರ ಸೋಮವಾರ ರಾತ್ರಿ 9 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ : 17.9.2024ರ ಮಂಗಳವಾರ ಬೆಳಿಗ್ಗೆ 10 ಗಂಟೆಯವರೆಗೆ ದಾವಣಗೆರೆ ಕಿರುವಾಡಿ ಲೇಔಟ್ನ ಮೃತರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗುವುದು. ತದನಂತರ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆಯನ್ನು ದಾವಣಗೆರೆ ತಾಲ್ಲೂಕು ಕಬ್ಬೂರು ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 21, 2024