ಜಗಳೂರು ತಾಲ್ಲೂಕಿನ ಉದ್ದಗಟ್ಟ ಗ್ರಾಮದ ಮುಖಂಡರೂ, ದಾವಣಗೆರೆಯ ಹೆಸರಾಂತ ವರ್ತಕರೂ, ಸಮಾಜ ಸೇವಕರೂ ಆಗಿದ್ದ ಶ್ರೀ ಕಿತ್ತೂರು ಜಯಣ್ಣ ಅವರು ದಿನಾಂಕ : 01.03.2024ರ ಶುಕ್ರವಾರ ಮುಂಜಾನೆ 7.10ಕ್ಕೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 02.03.2024ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಜಗಳೂರು ತಾಲ್ಲೂಕಿನ ಉದ್ದಗಟ್ಟ ಗ್ರಾಮದಲ್ಲಿರುವ ಅವರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕಿತ್ತೂರು ಜಯಣ್ಣ
