ದಾವಣಗೆರೆ ವಾಸಿ ಕಾಸಲ್ ವಿ. ರವಿಕುಮಾರ್ ಮತ್ತು ಕಾಸಲ್ ವಿ. ಮಂಜುನಾಥ್ ಇವರ ಮಾತೃಶ್ರೀ ಶ್ರೀಮತಿ ಕಾಂತಲಕ್ಷ್ಮಮ್ಮ ಕಾಸಲ್ ವಿಶ್ವನಾಥ ಶೆಟ್ಟಿ ಇವರು, ದಿನಾಂಕ 27.11.2023ರ ಮಧ್ಯಾಹ್ನ 2.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 87 ವರ್ಷ ವಯಸ್ಸಾಗಿದ್ದು, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕಾಸಲ್ ಕುಟುಂಬದವರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ಸ್ವಗೃಹ `ವಿಶ್ವ ಕಾಂತಿ’ ಎಂ.ಸಿ.ಸಿ. `ಬಿ’ ಬ್ಲಾಕ್, 4ನೇ ಮುಖ್ಯರಸ್ತೆ, ದಾವಣಗೆರೆಯಲ್ಲಿ ಇರಿಸಲಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ದಿನಾಂಕ 28.11.2023ರ ಮಂಗಳವಾರ ಬೆಳಿಗ್ಗೆ 10.30 ಕ್ಕೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕಾಂತಲಕ್ಷ್ಮಮ್ಮ ಕಾಸಲ್ ವಿಶ್ವನಾಥ ಶೆಟ್ಟಿ
![kantha lakshmamma ಕಾಂತಲಕ್ಷ್ಮಮ್ಮ ಕಾಸಲ್ ವಿಶ್ವನಾಥ ಶೆಟ್ಟಿ](https://janathavani.com/wp-content/uploads/2023/11/kantha-lakshmamma-.jpg)