ನಗರದ ಅಕ್ಕಮಹಾದೇವಿ ಸಮಾಜದ ನೇತ್ರದಾನ ಪ್ರೇರಣ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ಸರೋಜಮ್ಮ ಮಹಾಲಿಂಗಪ್ಪ ಮುಂಡಾಸ್ ಅವರು ಇಂದು ಸಂಜೆ 6 ಗಂಟೆಗೆ ನಿಧನರಾದರು. ಮೃತರಿಗೆ ಸುಮಾರು 89 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರಾದ ವರ್ತಕ ಎಂ. ರವೀಂದ್ರನಾಥ, ಎಂ. ಶಶಿಶೇಖರ್, ಓರ್ವ ಪುತ್ರಿ – ತರಳಬಾಳು ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಗೌರಾಂಬಿಕ, ಮೊಮ್ಮಕ್ಕಳು, ಹಾಗೂ ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ. ಸರೋಜಮ್ಮ ಅವರ ಪಾರ್ಥಿವ ಶರೀರವನ್ನು ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ 4ನೇ ಮೇನ್, 6ನೇ ಕ್ರಾಸ್ ಗುಂಡಿ ಶಾಲೆಯ ಹಿಂಭಾಗದಲ್ಲಿರುವ ಅವರ ಸ್ವಗೃಹದಲ್ಲಿ ಇರಿಸಲಾಗಿದ್ದು, ನಾಳೆ ಬುಧವಾರ ಮಧ್ಯಾಹ್ನ 1 ಗಂಟೆಗೆ ಶಾಮನೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 23, 2024