ದಾವಣಗೆರೆ, ಫೆ. 16- ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ವಿಜ್ಞಾನ, ತಂತ್ರಜ್ಞಾನ ನಿರೀಕ್ಷೆ ಮೀರಿ ಬೆಳೆಯುತ್ತಿರುವುದರಿಂದ ಮಾರುಕಟ್ಟೆ ಸಂಸ್ಕೃತಿ ವಿಸ್ತಾರಗೊಳ್ಳುತ್ತಿರುವುದರಿಂದ ವಾಹನ ತಯಾರಿಕಾ ಉದ್ಯಮ ಕ್ಷೇತ್ರದಲ್ಲಿ ತೀವ್ರತರ ಸ್ಪರ್ಧೆ ಇದೆ. ಅದೇ ತರಹ ನಿರೀಕ್ಷೆಗಳು, ಬಯಕೆಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಇವೆ ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ತಿಳಿಸಿದರು.
ಮಹಾಂತ ಮೋಟಾರ್ಸ್‌ನ ಮೆಗಾ ಸರ್ವೀಸ್ ಕ್ಯಾಂಪ್ ಎಮ್ ಪ್ಲಸ್‌ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನತೆ ಸುರಕ್ಷತೆ ಮತ್ತು ಪ್ರಾಮಾಣಿಕ ಸೇವೆ ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾವೆಲ್ಲರೂ ನಿಷ್ಠೆ, ಬದ್ಧತೆ, ಪ್ರಾಮಾಣಿಕತೆಯಿಂದ ಕಾಲ ವ್ಯಯ ಮಾಡದೇ ಸೇವೆ ಸಲ್ಲಿಸಬೇಕು ಎಂದು ಕೆಲಸಗಾರರಿಗೆ ಕರೆ ನೀಡಿದರು.
ಸರ್ವೀಸ್ ಮ್ಯಾನೇಜರ್ ಮಾರುತಿ ನಿಕ್ಕಮ್ ಸ್ವಾಗತಿಸಿದರು. ಜನರಲ್ ಮ್ಯಾನೇಜರ್ ಎ. ಕಿರಣ್, ಕಸ್ಟಮರ್ ಕೇರ್ ಮ್ಯಾನೇಜರ್ ಸಂತೋಷ್ ವಿ. ಬಳ್ಳಾರಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.