ರೈತರನ್ನು ಗೌರವಿಸಿ, ಪ್ರೋತ್ಸಾಹಿಸಿ…
ಬೆಂಗಳೂರು ಮೆಟ್ರೋದಲ್ಲಿ ಬಟ್ಟೆ ಕೊಳಕಾಗಿವೆ ಎಂಬ ಕಾರಣಕ್ಕೆ ರೈತರಿಬ್ಬರಿಗೆ ಮೆಟ್ರೋ ಪ್ರವೇಶ ನಿರಾಕರಿಸಿದ್ದ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರ ಆಕ್ರೋಶಕ್ಕೂ ತುತ್ತಾಗಿತ್ತು. ಅದರಂತೆಯೇ ಇನ್ನೊಂದು ವಿಡಿಯೋದಲ್ಲಿ, ಒಬ್ಬ ಮುಗ್ಧ ರೈತರೊಬ್ಬರಿಗೆ ಇ-ಕೆವೈಸಿ ಮಾಡಿಸಲು ಆಧಾರ್ ಲಿಂಕ್ ಇರೋ ಫೋನ್ ತಗೊಂಡು ಬಾ ಎಂದರೆ ಲ್ಯಾಂಡ್ ಲೈನ್ ಫೋನ್ ತಂದ ವಿಡಿಯೋ ಕೂಡ ವೈರಲ್ ಆಗಿತ್ತು.