ಹೆಲ್ಮೆಟ್ ಬೇಡ ಎನ್ನುವುದು ಸರಿಯಲ್ಲ !
ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸುವ ಸವಾರರನ್ನು ತಡೆಹಿಡಿದು, ಪೂರ್ತಿ ಹೆಲ್ಮೆಟ್ ಧರಿಸಬೇಕೆಂದು ಟ್ರಾಫಿಕ್ ಪೊಲೀಸರು ಜನತೆಗೆ ತಿಳಿ ಹೇಳುತ್ತಿದ್ದಾರೆ.
ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸುವ ಸವಾರರನ್ನು ತಡೆಹಿಡಿದು, ಪೂರ್ತಿ ಹೆಲ್ಮೆಟ್ ಧರಿಸಬೇಕೆಂದು ಟ್ರಾಫಿಕ್ ಪೊಲೀಸರು ಜನತೆಗೆ ತಿಳಿ ಹೇಳುತ್ತಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದಾದ ಶ್ರೀ ಗುರು ಬಸವೇಶ್ವರರ ರಥೋತ್ಸವಕ್ಕೆ ಪಾದಯಾತ್ರೆಯ ಮೂಲಕ ಕೊಟ್ಟೂರು ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ, ಕೊಂಚ ಗಲಿಬಿಲಿಗೊಂಡಿದ್ದಂತೂ ನಿಜ.
ಬೇಸಿಗೆಯ ತಾಪ ಪ್ರಜ್ವಲಿಸುವ ಈ ಸಮಯದಲ್ಲಿ ಅರ್ಧ ಹೆಲ್ಮೆಟ್ ನಿಷೇಧ ಎಷ್ಟು ಸರಿ? ಈ ಹಿಂದೆ ಜಿಲ್ಲೆಯಲ್ಲಿ ಬೇಸಿಗೆ ಸಮಯಕ್ಕೆ ಹೆಲ್ಮೆಟ್ ಕಡ್ಡಾಯ ರಿಯಾಯಿತಿ ನೀಡಿದ ಉದಾಹರಣೆ ಇದೆ. ಆದರೆ ಈ ಬಾರಿ ಅರ್ಧ ಹೆಲ್ಮೆಟ್ ನಿಷೇಧ ಸರಿಯೇ.
ಐ.ಎಸ್.ಐ ಮಾರ್ಕ್ ಇಲ್ಲದ ಮತ್ತು ಅರ್ಧ ಪ್ಲಾಸ್ಟಿಕ್ ಹೆಲ್ಮೆಟ್ ಧರಿಸಿರುವ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುವುದಾಗಿ ಎಸ್.ಪಿ. ಉಮಾ ಪ್ರಶಾಂತ್ ಅವರು ಎಚ್ಚರಿಸಿದ್ದಾರೆ. ಸ್ವಾಗತಾರ್ಹ.
ಅವರವರ ಧಾರ್ಮಿಕ ಆಚರಣೆ ಮತ್ತು ನಂಬಿಕೆ ಅವರಿಗೆ ಸಂಬಂಧಿಸಿದವು ಇವುಗಳನ್ನು ನಿಂದಿಸುವುದು ಸರಿಯಲ್ಲ ಎನ್ನುತ್ತಾ ಸುಮ್ಮನಾದರೆ ಜನರಲ್ಲಿ ಬರೀ ಮೌಢ್ಯಗಳೇ ಬೆಳೆಯುತ್ತವೆ. ಜನರು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಮಾನವೀಯತೆಯಿಂದ ಯೋಚಿಸುವುದನ್ನೇ ಮರೆಯುತ್ತಾರೆ.
ರೆಡ್ ಸಿಗ್ನಲ್ ಜಂಪ್ ಮಾಡಿದ ಸವಾರರಿಗೆ ಕೇವಲ ಒಂದೇ ಗಂಟೆಯಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ದಂಡವನ್ನು ವಿಧಿಸಿದ್ದು, ಉತ್ತಮವಾದ ಸಂಗತಿಯಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯೂ ನಗರದಲ್ಲಿ ಹೆಚ್ಚುತ್ತಲೇ ಇದೆ.
ಇಲ್ಲಿನ ಮಹಾನಗರ ಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದ ಬಳಿ ಮುಜುಗರ ತರಿಸುವ ಮೂತ್ರಾಲಯ ನಿರ್ಮಾಣವಾಗಿದೆ.
ದಾವಣಗೆರೆಯ ಸರಸ್ವತಿ ನಗರದ ‘ಎ’ ಬ್ಲಾಕ್, 3ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆಯಲ್ಲಿ ರಸ್ತೆ ದೀಪ ಇರದೇ ಇಡೀ ರಸ್ತೆಯು ಕತ್ತಲೆಯಿಂದ ತುಂಬಿದೆ. ಇದೇ ಸ್ಥಳದಲ್ಲಿ ಖಾಲಿ ನಿವೇಶನವಿದ್ದು, ಇಲ್ಲಿ ಆರರಿಂದ ಏಳು ಹಾವುಗಳು ಕಂಡು ಬಂದಿರುತ್ತವೆ.
ಶ್ರಮಿಕ ವರ್ಗದಲ್ಲಿ ಹುಟ್ಟಿದ ಎಲ್ಲಾ ಜಾತಿಯ ಶರಣರು ತಮ್ಮ ಅನುಭಾವದ ಮೂಲಕ ಮೌಢ್ಯ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸಿದ ವಚನಗಳು ಜನಗಳನ್ನ ವೈಜ್ಞಾನಿಕ, ವೈಚಾರಿಕ ಚಿಂತನೆಗೆ ಹಚ್ಚಬಲ್ಲವು ಎಂದುಕೊಂಡಿದ್ದೇನೆ.
ಈಚೆಗೆ ಜಗಳೂರಿನಲ್ಲಿ ನೆರವೇರಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ನೋಡಿದೆ, ಕೇಳಿದೆ, ಚೆನ್ನಾಗಿ ನೆರವೇರಿತು. ಆದರೆ, ಇದಕ್ಕೆಲ್ಲಾ ಕಪ್ಪು ಚುಕ್ಕೆಯಂತೆ ಇತ್ತು ಸಂಜೆ ನೆರವೇರಿದ ಹಾಸ್ಯ ಕಾರ್ಯಕ್ರಮ.
ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ವಿವಿಧ ಖಾಲಿ ಹುದ್ದೆಗಳಿಗೆ ಭರ್ತಿ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳು ಇತ್ತೀಚೆಗೆ ಲೋಪ ದೋಷಗಳಿಂದ ಕೂಡಿರುವುದು ಅತ್ಯಂತ ಬೇಸರದ ಸಂಗತಿ.
ನಗರದ ಸ್ವಚ್ಛತೆಗಾಗಿ ದೊಡ್ಡ ಮಟ್ಟದಲ್ಲಿ ಪೌರ ಕಾರ್ಮಿಕ ಸಿಬ್ಬಂದಿ ನಿತ್ಯವೂ ಶ್ರಮಿಸುತ್ತಿದ್ದಾರೆ. ನಗರದ ದಶಕದ ಹಿಂದಿನ ದಿನಗಳನ್ನು ಕಂಡಿದ್ದವರಿಗೆ ಇಂದು ದಾವಣಗೆರೆ ನಗರ ಮಾದರಿ ನಗರವಾಗಿ ರೂಪುಗೊಳ್ಳಲು ಹೆಜ್ಜೆ ಇಡುತ್ತಿದೆ ಎಂಬುದು ಅರ್ಥವಾಗುತ್ತದೆ.