Category: ರಾಣೇಬೆನ್ನೂರು

Home ರಾಣೇಬೆನ್ನೂರು

ಕೂನಬೇವು ರಸ್ತೆ ಸಮಸ್ಯೆ : ಶಾಸಕರ ತೀರ್ಮಾನಕ್ಕೆ ಹೋರಾಟಗಾರರ ಸಹಮತ

ರಾಣೇಬೆನ್ನೂರು : ಪಟ್ಟಣದ ಹೊರವಲಯ ದಲ್ಲಿ ಕೂನಬೇವು ರಸ್ತೆಗೆ    ಸುಸಜ್ಜಿತ ಅಂಡರ್‍ಬ್ರಿಡ್ಜ್ ಆಗಬೇಕು. ಇಲ್ಲವೇ 150 ಅಡಿ ರಿಂಗ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿ, ಪ್ರತಿಭಟನೆ ಮಾಡುತ್ತಿರುವ  ಕೂನಬೇವು ಗ್ರಾಮಸ್ಥರು ಮತ್ತು ರೆಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯವರು  ಶಾಸಕರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ. 

`ಗ್ಯಾರಂಟಿ’ಯಿಂದ ರಾಜ್ಯ ದಿವಾಳಿ

ರಾಣೇಬೆನ್ನೂರು : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯವು ಆರ್ಥಿಕ ದಿವಾಳಿಯತ್ತ ಸಾಗುವಂತಾಗಿದೆ. ಇದನ್ನರಿತ ಮತದಾರರು ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ

ಮೂಷ್ಟೂರು ಗ್ರಾಮದಲ್ಲಿ ಇಂದಿನಿಂದ ಆಂಜನೇಯ ದೇವರ ಮೂರ್ತಿ ಪ್ರತಿಷ್ಠಾಪನೆ

ರಾಣೇಬೆನ್ನೂರು  ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಇಂದಿನಿಂದ ಇದೇ ದಿನಾಂಕ 9 ರವರೆಗೆ ಶ್ರೀ ಆಂಜನೇಯ ಸ್ವಾಮಿಯ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಶ್ರೀ ಆಂಜನೇಯ ಸ್ವಾಮಿ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಭರಮ ದೇವರ ಕಳಸಾರೋಹಣ ಕಾರ್ಯಕ್ರಮಗಳು ಜರುಗಲಿವೆ.

ಜನರ ಸ್ವಾವಲಂಬನೆಗೆ ಧರ್ಮಸ್ಥಳ ಯೋಜನೆ ಸಹಕಾರಿ

ರಾಣೇಬೆನ್ನೂರು : ಗ್ರಾಮೀಣ ಜನರು ಸ್ವಾವಲಂಬನೆ ಜೀವನ ಸಾಗಿಸಲು ಆರ್ಥಿಕವಾಗಿ, ಶೈಕ್ಷಣಿಕವಾಗಿ ತಿಳುವಳಿಕೆ ದೃಷ್ಟಿಯಿಂದಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು ಪ್ರಯೋಜನಕಾರಿ ಯಾಗಿವೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಬಸವರಾಜ ಹುಲ್ಲತ್ತಿ ಹೇಳಿದರು.

ರಾಣೇಬೆನ್ನೂರು ರೋಟರಿಗೆ ಪ್ರಶಸ್ತಿಗಳು

ರಾಣೇಬೆನ್ನೂರು : ಇಲ್ಲಿನ ರೋಟರಿ ಕ್ಲಬ್ 2023-24ನೇ ಸಾಲಿನ ಕ್ಲಬ್ ಹಾಗೂ ವೈಯಕ್ತಿಕ ಪ್ರಶಸ್ತಿಗಳನ್ನ ಪಡೆದಿದ್ದು ನಿನ್ನೆ ಕೊಲ್ಲಾಪುರದಲ್ಲಿ ನಡೆದ ಸಮಾರಂಭದಲ್ಲಿ 3170 ರ ಜಿಲ್ಲಾ ರಾಜ್ಯಪಾಲ ನಾಸಿರ್ ಸಾಬ್ ಬೋರ್ಸೋಡೋವಾಲ್ ಅವರು  ಕ್ಲಬ್ ಅಧ್ಯಕ್ಷ ಸುಜೀತ್ ಜಂಬಗಿ ಅವರಿಗೆ  ನೀಡಿ ಗೌರವಿಸಿದರು.

ದುಶ್ಚಟಗಳಿಂದ ದೂರವಿರಲು ನಿರಂಜನಾನಂದ ಶ್ರೀಗಳ ಕರೆ

ರಾಣೇಬೆನ್ನೂರು : ಕುರುಬ ಸಮಾಜ ಬಾಂಧವರು ದುಶ್ಚಟಗಳಿಂದ ದೂರ ವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ತಮ್ಮ ಮನೆಗಳನ್ನು ಉದ್ಧಾರ ಮಾಡಿಕೊಳ್ಳುವುದರ ಜೊತೆಗೆ ಸಮಾಜದ ಬಲವರ್ಧನೆಗೆ  ಮುಂದಾಗ ಬೇಕು

ಬ್ಯಾಡಗಿಯಲ್ಲಿ ಕೊಪ್ಪಳ ಶ್ರೀಗಳ ಪ್ರವಚನ

ರಾಣೇಬೆನ್ನೂರು : ತಾಲ್ಲೂಕಿನ ಬ್ಯಾಡಗಿ ಎಸ್.ಜೆ.ಜೆ.ಎಂ ಕಾಲೇಜು ಕ್ರೀಡಾಂಗಣದಲ್ಲಿ ಬರುವ ನವೆಂಬರ್ 13 ರಿಂದ 24 ರವರೆಗೆ 12 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರಿಂದ ಪ್ರವಚನ ನಡೆಯಲಿದೆ.

ನಾಳೆ ಲಿಂ. ರಂಭಾಪುರಿ ಜಗದ್ಗುರುಗಳ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ

ರಂಭಾಪುರಿ ಲಿಂಗೈಕ್ಯ ಜಗದ್ಗುರು ಶ್ರೀ ವೀರಗಂಗಾಧರ ಭಗವತ್ಪಾದರ‌ 36 ಅಡಿ ಎತ್ತರದ ಸಿಮೆಂಟ್ ಮೂರ್ತಿ ಹಾಗೂ ತುಂಗಭದ್ರಾ ನದಿಗೆ ತಡೆ ಗೋಡೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮವು ನಾಡಿದ್ದು ದಿನಾಂಕ 24 ರ ಗುರುವಾರ ನಡೆಯಲಿದೆ

ದಲಿತ ಮುಖ್ಯಮಂತ್ರಿ ತಡೆಯಲು ಒಡೆದಾಳುವ ಷಡ್ಯಂತ್ರ; ಸರ್ದಾರ್ ಸೇವಾಲಾಲ್ ಶ್ರೀ ಆರೋಪ

ರಾಣೇಬೆನ್ನೂರು : ದಲಿತ ಮುಖ್ಯಮಂತ್ರಿ ಬೇಡಿಕೆ ಮುನ್ನೆಲೆಗೆ ಬರಬಹುದು ಎನ್ನುವ ಹೆದರಿಕೆಯಿಂದ ಕೆನೆಪದರ, ಒಳಪದರ ಮುಂತಾದವುಗಳಿಂದ ಒಂದಾಗಿರುವ ದಲಿತರನ್ನು ಒಡೆದಾಳುವ ಹುನ್ನಾರ ನಡೆಯುತ್ತಿದೆ.

ಯುವ ಜನತೆಗೆ ಹಬ್ಬಗಳ ವೈಜ್ಞಾನಿಕ ಆಚರಣೆ ಹಿನ್ನೆಲೆ ತಿಳಿಸಿ

ರಾಣೇಬೆನ್ನೂರು : ಇಂದಿನ ಯುವ ಜನತೆಗೆ ನಮ್ಮ  ಹಬ್ಬಗಳ ವೈಜ್ಞಾನಿಕ ಆಚರಣೆಯ  ಹಿನ್ನೆಲೆ  ಬಗ್ಗೆ ತಿಳುವಳಿಕೆ ನೀಡುವುದು ಅವಶ್ಯಕವಾಗಿದೆ ಎಂದು ರಾಜ್ಯ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ಉಪಾಧ್ಯಕ್ಷರಾದ ವಸಂತಾ ಬಿ. ಹುಲ್ಲತ್ತಿ ಹೇಳಿದರು.

ಮಳೆ : ಬೆಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದ ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು : ಇನ್ನೂ ಕೆಲ ದಿನಗಳ ಕಾಲ  ಗುಡುಗು, ಸಿಡಿಲು ಸಮೇತ ಮಳೆ ಬರಲಿದ್ದು ಇನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆ ಹಾನಿಯಾಗುವ ಸಂಭವವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಇದೇ ದಿನಾಂಕ 17ರ ನಂತರ ಬೆಳೆ ಹಾನಿ ಸರ್ವೇ ಮಾಡಲಾಗುತ್ತದೆ.

ಮಾನವ ಜನ್ಮ ಪಾವನಕ್ಕೆ ಪ್ರವಚನ ಅಗತ್ಯ

ರಾಣೇಬೆನ್ನೂರು : ಮಾನವ ಜನ್ಮ ಪಾವನವಾಗಬೇಕಾದರೆ ಪುರಾಣ, ಪ್ರವಚನಗಳನ್ನು, ದೇವತೆಗಳ ಚರಿತ್ರೆಗಳನ್ನು ಆಲಿಸಿ ಪಠಿಸಬೇಕೆಂದು ಮಾತೆ ಅನ್ನಪೂರ್ಣೇಶ್ವರಿ ಹಲಗೇರಿ ಹೇಳಿದರು.

error: Content is protected !!