Category: ರಾಜಕೀಯ

ಕುರ್ಕಿಯಲ್ಲಿ ವಿಠಲ ರುಖುಮಾಯಿ ದಿಂಡಿ ಉತ್ಸವ

ಕುರ್ಕಿ ಗ್ರಾಮದ  ಬುಳ್ಳಾಪುರ ಗ್ರಾಮದಲ್ಲಿ ಶ್ರೀ ವಿಠ್ಠಲ ರುಖುಮಾಯಿ ದೇವರ ದಿಂಡಿ ಉತ್ಸವ ಇಂದು ಜರುಗಿತು.  ನೂತನ ವಿಠ್ಠಲ ರುಖುಮಾಯಿ ದೇವರ ದೇವಸ್ಥಾನವನ್ನು ಅತಿ ಶೀಘ್ರದಲ್ಲೇ ಕಾರ್ತಿಕ ಮಾಸದಲ್ಲಿ ನಿರ್ಮಾಣವಾಗಲಿ ಎಂದು ಗ್ರಾಮದ ಎಲ್ಲಾ ಭಕ್ತರು ವಾರಕರಿ ಸಂತರು  ಹಾರೈಸಿ ವಾಗ್ದಾನ ನೀಡಿದರು. 

ಬಸಾಪುರದ ಸರ್ಕಾರಿ ಶಾಲೆಯಲ್ಲಿ ತರಬೇತಿ

ಮಹಾನಗರ ಪಾಲಿಕೆಯ 21ನೇ ವಾರ್ಡ್‌ನ ಬಸಾಪುರದ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರ ತರಬೇತಿ ಕಾರ್ಯಾಗಾರವನ್ನು ಹಿರಿಯ ಸಾಹಿತಿ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ ಉದ್ಘಾಟಿಸಿದರು.

ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯಕ್ಕೆ ಆಗ್ರಹ

ಜಗಳೂರು : ಬಿ.ಇಡಿ ಹಾಗೂ ಪ್ಯಾರಾಮೆಡಿಕಲ್ ಖಾಸಗಿ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನ ಹಾಗೂ ಹಾಸ್ಟೆಲ್ ನೀಡದಿರು ವುದನ್ನು ವಿರೋಧಿಸಿ, ಇಂದು ಪಟ್ಟಣ ದಲ್ಲಿ ಎಸ್ಎಫ್ಐ  ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಿದ್ದರಾಮೇಶ್ವರ ಶ್ರೀಗಳ ಜನ್ಮದಿನಾಚರಣೆ

ಚಿತ್ರದುರ್ಗ : ಭಾರತೀಯ ಮಜ್ದೂರ್ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ಸವಿತಾಭಾಯಿ ಮಲ್ಲೇಶ್ ನಾಯ್ಕ್ ನಾಯಕತ್ವದಲ್ಲಿ ಚಿತ್ರದುರ್ಗದ ಭೋವಿ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಮೇಶ್ವರ ಶ್ರೀಗಳ ಹುಟ್ಟು ಹಬ್ಬ ಆಚರಿಸಲಾಯಿತು.

ಸರ್ಕಾರಿ ನೌಕರರ ಒಕ್ಕೂಟದ ಪ್ರತಿಭಟನೆ

18 ತಿಂಗಳ ತುಟ್ಟಿ ಭತ್ಯೆ ಬಿಡುಗಡೆ, ಉಚಿತ ಲಸಿಕೆ, ಎನ್ ಪಿಎಸ್ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ವ್ಯವಸ್ಥೆ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಿನ್ನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.

ಜಿಲ್ಲೆಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ

ಜಿಲ್ಲೆಯ ಚನ್ನಗಿರಿ ತಾಲ್ಲೂಕು ಸೇರಿದಂತೆ ಐದು ಕಡೆಗಳಲ್ಲಿ ಏಕಕಾಲಕ್ಕೆ ಕೋಲಾರ ಜಿಲ್ಲೆಯ ಮಾಲೂರು ನಗರ ಸಭೆಯ ಯೋಜನಾ ನಿರ್ದೇಶಕ ಹೆಚ್.ಆರ್. ಕೃಷ್ಣಪ್ಪ ಅವರ ಮನೆಗಳು, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡ ಇಂದು ಬೆಳಿಗ್ಗೆ ದಾಳಿ ಮಾಡಿದೆ. 

ಲಯನ್ಸ್‌ನಿಂದ ಆಹಾರದ ಕಿಟ್‌ ವಿತರಣೆ

ಲಯನ್ಸ್‌ ಕ್ಲಬ್‌ ಆಶ್ರಯದಲ್ಲಿ ಸಿ.ಜಿ. ಆಸ್ಪತ್ರೆ ಮತ್ತು ಚಾಮರಾಜಪೇಟೆಯ ಹೆರಿಗೆ ಆಸ್ಪತ್ರೆ ಮತ್ತು ಯುನಿಟಿ ಹೆಲ್ತ್‌ ಸೆಂಟರ್‌ನಲ್ಲಿ  6ನೇ ದಿನದ ಆಹಾರ ಪೊಟ್ಟಣ ಮತ್ತು ನೀರಿನ ಬಾಟಲ್‌ಗಳನ್ನು ಲಯನ್ಸ್‌ ಕ್ಲಬ್‌ ಉಪಾಧ್ಯಕ್ಷ ಎನ್‌.ಆರ್‌. ನಾಗಭೂಷಣ್‌ ರಾವ್‌ ನೇತೃತ್ವದಲ್ಲಿ ವಿತರಿಸಲಾಯಿತು. 

ಮಹಿಳೆಗೆ ಸಾಧನೆಯೊಂದಿಗೆ ಅಸಮಾನತೆ ನಿವಾರಿಸುವ ಸವಾಲಿದೆ : ಶಾಂತಕುಮಾರಿ

ಮಹಿಳೆಯರು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಬೀತುಪಡಿಸುತ್ತಿದ್ದಾಳೆ. ಮಹಿಳಾ ಸ್ವಾತಂತ್ರ್ಯವನ್ನು ಧನಾತ್ಮಕವಾಗಿ ಹಾಗೂ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಬಳಸಿಕೊಂಡು ಮುನ್ನಡೆಯ ಬೇಕಿದೆ

ಪಾದಯಾತ್ರೆ ತೆರಳದ ಭಕ್ತರಿಂದ ಪೂಜೆ

ಹೊನ್ನಾಳಿ : ಪ್ರತಿವರ್ಷ ಕೊಟ್ಟೂರು ಜಾತ್ರೆ ಅಂಗವಾಗಿ ಪಾದ ಯಾತ್ರೆ ತೆರಳುತ್ತಿದ್ದ ಹೊನ್ನಾಳಿ ಭಕ್ತರು ಇಂದು ಪಟ್ಟಣದ ಗೌಡರ ಬೀದಿಯಲ್ಲಿನ ಕೊಟ್ಟೂರು ಶ್ರೀ ಗುರು ಬಸವೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶೇಷ ಪೂಜೆ ಸಲ್ಲಿಸಿದರು.

ಬೇಯಿಸದಿದ್ದರೂ ಬಾಯಿಗೆ ರುಚಿ…ದೇಹಕ್ಕೆ ಹಿತ ನಮ್ಮೀ ಅಡುಗೆ

ಅಡುಗೆ ಮಾಡಲು ಮುಖ್ಯವಾಗಿ ಬೇಕಾಗಿರುವುದು ಸ್ಟೌವ್. ರೋಟರಿ ಬಾಲಭವನದಲ್ಲಿ ಸೇರಿದ್ದ ಮಹಿಳಾ ಬಳಗ ಇಂದು ಒಲೆ ಹಚ್ಚದೆ, ರುಚಿ-ಶುಚಿಯಾದ ಹಾಗೂ ಪೌಷ್ಠಿಕಾಂಶವುಳ್ಳ ಆಹಾರವನ್ನು ತಯಾರಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಗರ್ಭಾವಸ್ಥೆಯಲ್ಲಿ ರಕ್ತನಾಳಗಳ ತೊಂದರೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿ ಗೌರಿಯು (ಹೆಸರು ಬದಲಾಯಿಸಲಾಗಿದೆ)   ತೀವ್ರ ನಂಜಿನಿಂದ ಪೋಸ್ಟ್ ಪಾರ್ಟಮ್ ನಿಂದ (ಹೆರಿಗೆ ಸಂದರ್ಭದಲ್ಲಿ ಶರೀರದಲ್ಲಾಗುವ ವಿಪರೀತ ಬದಲಾವಣೆ) ತೀವ್ರ ಮೂತ್ರಪಿಂಡ ವೈಫಲ್ಯ, ಪಾಶ್ವವಾಯು, ಅಪಸ್ಮಾರ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ  ಪ್ರಾಣಾಪಾಯಕ್ಕೆ ಸಿಲುಕಿದ್ದಳು.

error: Content is protected !!