Category: ಸುದ್ದಿಗಳು

Home ಸುದ್ದಿಗಳು

ಹೊನ್ನಾಳಿ ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷರಾಗಿ ಅರಬಗಟ್ಟೆ ರಮೇಶ

ಹೊನ್ನಾಳಿ : ತಾಲ್ಲೂಕು  ಪಿಕಾರ್ಡ್‌ ಬ್ಯಾಂಕನ ಅಧ್ಯಕ್ಷರಾಗಿ ಅರಬಗಟ್ಟೆ ಕೆ.ಜಿ. ರಮೇಶ, ಉಪಾಧ್ಯಕ್ಷರಾಗಿ ಹೊಟ್ಯಾಪುರ ರುದ್ರಮ್ಮ ಅವರು ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನವೀನ್‌ ಕುಮಾರ ತಿಳಿಸಿದ್ದಾರೆ.

ಮಕ್ಕಳ ಶೈಕ್ಷಣಿಕ ಬಲವರ್ಧನೆಗೆ ಕಲಿಕಾ ಹಬ್ಬ ಆಚರಣೆ

ಮಲೇಬೆನ್ನೂರು : ಶೈಕ್ಷಣಿಕ ಬಲವರ್ಧನೆಗಾಗಿ ಮಕ್ಕಳಿಗೆ ಪಠ್ಯಕ್ಕೆ ಸೀಮಿತವಾದ ಕಲಿಕೆಗೆ ಆದ್ಯತೆ ನೀಡಲಾಗಿದ್ದು ವಿಶೇಷ ಕಲಿಕಾ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ ಎಂದು ಶಿಕ್ಷಣ ಸಂಯೋಜಕ ಕೆ. ತೀರ್ಥಪ್ಪ ಹೇಳಿದರು.

ಕಳಪೆ ಆಹಾರ ಉತ್ಪಾದನಾ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ

ಹರಿಹರ : ನಗರದ ಹೋಟೆಲ್ ಮತ್ತು ಬೇಕರಿ, ಫುಟ್‍ಪಾತ್‌ನಲ್ಲಿ ವ್ಯವಹರಿಸುತ್ತಿದ್ದ ಎಗ್‍ರೈಸ್ ಗೂಡಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಕಳಪೆ ಗುಣಮಟ್ಟದ ಆಹಾರ ಉತ್ಪಾದಿಸಿ ಗ್ರಾಹಕರಿಗೆ ವಿತರಿಸುತ್ತಿದ್ದ ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದರು.

ಜೋಳದ ಬೆಳೆ ನೆಲ ಸಮಗೊಳಿಸಿದ ದುಷ್ಕರ್ಮಿಗಳು

ಹರಪನಹಳ್ಳಿ : ತಾಲ್ಲೂಕಿನ ಕುಂಚೂರು ಗ್ರಾಮದ ಬಾಣದ ಬಸವರಾಜ್ ಎಂಬ ರೈತನ ಎರಡೂವರೆ ಎಕರೆ ಭೂಮಿಯಲ್ಲಿ ಒಂದೂವರೆ ಎಕರೆಗೂ ಅಧಿಕ ಊಟದ ಜೋಳದ ಸೊಪ್ಪೆಯನ್ನು ನೆಲಕ್ಕೆ ಉರುಳಿಸಿ ಅಮಾನವೀಯ ಕೃತ್ಯವನ್ನು ದುಷ್ಕರ್ಮಿಗಳು ಎಸಗಿದ್ದಾರೆ.

ಹರಿಹರ: ಕೊಟ್ಟೂರು ಪಾದಯಾತ್ರಿಗಳಿಗೆ ಬೀಳ್ಕೊಡುಗೆ

ಹರಿಹರ : ನಗರದ ಶ್ರೀ ಗುರು ಕೊಟ್ಟೂರು ಗುರುಬಸವೇಶ್ವರ ದೇವಸ್ಥಾನ ನಿರ್ಮಾಣ ಸಮಿತಿ ಹಾಗೂ ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ 9ನೇ ವರ್ಷದ ಕೊಟ್ಟೂರು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ

ಜಗಳೂರು : ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ಜಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸ್ಥಿರ ಹಾಗೂ ಸಂಚಾರಿ ಬೀದಿಬದಿ ಚಿಲ್ಲರೆ ವ್ಯಾಪಾರಸ್ಥರ ಸಂಘದ ತಾಲ್ಲೂಕು ಸಮಿತಿ ವತಿಯಿಂದ  ಪ್ರತಿಭಟನೆ ನಡೆಸಲಾಯಿತು.

ಶಾಸಕ ಬಿ.ಪಿ.ಹರೀಶ್ ಪ್ರಯಾಗರಾಜ್‌ನಲ್ಲಿ ಪುಣ್ಯಸ್ನಾನ

ಕುಂಭ ಮೇಳದಲ್ಲಿ ಗಂಗಾ, ಯಮುನಾ, ಸರಸ್ವತಿ ಮೂರು ನದಿಗಳು ಒಂದಾಗಿರುವ ತ್ರಿವೇಣಿ ಸಂಗಮದಲ್ಲಿ ಶಾಸಕ ಬಿ.ಪಿ. ಹರೀಶ್ ಅವರು ತಮ್ಮ ಆತ್ಮೀಯರೊಂದಿಗೆ ಪುಣ್ಯ ಸ್ನಾನ ಮಾಡುವ ಮೂಲಕ ಭಕ್ತಿಯನ್ನು ಸಮರ್ಪಿಸಿ, ಅಘೋರಿ ಬಾಬಾರವರು ಮತ್ತು ಋಷಿಮುನಿಗಳ ಆಶೀರ್ವಾದ ಪಡೆದುಕೊಂಡರು.

ಹರಿಹರದಲ್ಲಿ ಇಂದು ಶ್ರೀ ಊರಮ್ಮ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಹರಿಹರ : ಇಲ್ಲಿನ ಇಂದಿರಾ ನಗರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನಾಳೆ 18ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ್ ಚಿಂಚಲಿ, ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹರಪನಹಳ್ಳಿ ತಾಲ್ಲೂಕಿಗೆ ಕೆಎಸ್ಸಾರ್ಟಿಸಿ 11 ಬಸ್

ಹರಪನಹಳ್ಳಿ : ತಾಲ್ಲೂಕಿನ ಸಾರ್ವ ಜನಿಕರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ವಾಗುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ  ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 11 ಬಸ್ ನೀಡಲಾಗಿದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹರ್ಷ ವ್ಯಕ್ತ ಪಡಿಸಿದರು.

error: Content is protected !!