Category: ಜಗಳೂರು

ಜಗಳೂರಿಗೆ ನೂತನ ಎಎಸ್ಪಿ ಬಿ.ಮಂಜುನಾಥ್ ಭೇಟಿ

ಜಗಳೂರು : ಜಿಲ್ಲೆಯ ನೂತನ ಪೊಲೀಸ್ ಉಪ ಅಧೀಕ್ಷಕರಾಗಿ ಬಿ.ಮಂಜುನಾಥ್ ಅವರು ಅಧಿಕಾರ ವಹಿಸಿಕೊಂಡ ನಂತರ ಪ್ರಥಮವಾಗಿ ತಾಲ್ಲೂಕಿನ ಬಿಳಿಚೋಡು ಮತ್ತು ಜಗಳೂರು ಪೊಲೀಸ್ ಠಾಣೆಗಳಿಗೆ ನಿನ್ನೆ ಭೇಟಿ ನೀಡಿ ಪರಿಶೀಲಿಸಿದರು.

ಕ್ರಿಸ್‌ಮಸ್, ಸರ್ವಧರ್ಮ ಸಮ್ಮೇಳನದಿಂದ ಸಾಮರಸ್ಯ

ಜಗಳೂರು : ಆಧುನಿಕ ಸಮಾಜದಲ್ಲಿ ಸಾಮರಸ್ಯಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ  ಪ್ರೇರಣಾ ಟ್ರಸ್ಟ್ ತಾಲ್ಲೂಕಿನಲ್ಲಿ ಸಮಾಜ‌ಮುಖಿ ಕಾರ್ಯಕ್ರಮಗಳ ಜೊತೆಗೆ ಪ್ರತಿವರ್ಷ ಕ್ರಿಸ್‌ಮಸ್ ಹಬ್ಬದಂದು ಸರ್ವಧರ್ಮ ಸಮ್ಮೇಳನ ಆಯೋಜಿಸಿ ಸಾಮರಸ್ಯ ಕಾಪಾಡುತ್ತಿರುವುದು ಶ್ಲ್ಯಾಘನೀಯ

ಕ್ರೀಡೆ ದೈಹಿಕ, ಮಾನಸಿಕ ಸದೃಢತೆಗೆ ಪೂರಕ

ಜಗಳೂರು : ಕ್ರೀಡೆಗಳು ದೈಹಿಕ, ಮಾನಸಿಕ ಸದೃಢತೆಗೆ ಪೂರಕವಾಗಿವೆ.ಐಪಿಎಲ್, ಕೆಪಿಎಲ್, ಮಾದರಿಯಲ್ಲಿ ಜೆಪಿಎಲ್ ಕ್ರಿಕೆಟ್ಟನ್ನು ಪಟ್ಟಣದಲ್ಲಿ ಆಯೋಜಿಸಿರುವ ಪ್ರಾಂಚೈಸಿಗಳ  ಹಾಗೂ ಆಯೋಜಕರ ಕಾರ್ಯ ಶ್ಲ್ಯಾಘನೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ಪ್ರಶಂಸಿದರು.

ಜಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಜಗಳೂರು : ಯುವಕರಿಗೆ, ವಿದ್ಯೆ ಮತ್ತು ಉದ್ಯೋಗ ಎರಡೂ ಮುಖ್ಯವಾಗಿದ್ದು, ಜಿ.ಎಂ. ಟ್ರಸ್ಟ್ ವತಿಯಿಂದ ಸಾವಿರಾರು ಉದ್ಯೋಗ ಕಲ್ಪಿಸಿ ಕೊಡಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೊತ್ಸಾಹಿಸಬೇಕು

ಜಗಳೂರು : ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರದಲ್ಲಿ ಸಾಮಾರ್ಥ್ಯವನ್ನು  ಗುರುತಿಸಿ ಪ್ರೊತ್ಸಾಹಿಸಬೇಕು. ಕಠಿಣ ಪರಿಶ್ರಮದಿಂದ ಸಾಧನೆ ಸುಲಭ ಎಂದು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಗೋವಿಂದರಾಜ್ ಅಭಿಮತ ವ್ಯಕ್ತಪಡಿಸಿದರು.

ಹೊಸ ನಾಯಕತ್ವ ಸೃಷ್ಟಿಯಾಗಬೇಕು

ಜಗಳೂರು : ಗ್ರಾಮೀಣ ಪ್ರದೇಶದ ಜನರ ಬವಣೆ ಮತ್ತು ಅಭಿವೃದ್ಧಿ, ಬಡತನ, ನಿರುದ್ಯೋಗ, ಶೈಕ್ಷಣಿಕ ಪ್ರಗತಿ, ವಿಚಾರಗಳನ್ನು ಜನರೊಂದಿಗೆ ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆಯೇ ವಿನಃ, ಯಾವುದೇ ಲಾಭಕ್ಕಲ್ಲ

ಕಿರಾಣಿ ಅಂಗಡಿ ಮೇಲೆ ದಾಳಿ : ಮದ್ಯ ವಶ

ಜಗಳೂರು : ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿಗೆ ಸೇರಿದ ಕಿರಾಣಿ ಅಂಗಡಿ ಮೇಲೆ ಹರಿಹರ ವಲಯ ಹಾಗೂ ದಾವಣಗೆರೆ ವಲಯ 1 ಮತ್ತು 2ರ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ರೂ.10,110 ಮೌಲ್ಯದ ಅಕ್ರಮ ಮಾರಾಟದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ವಿದ್ಯಾರ್ಥಿಗಳ ಮನವಿ

ಜಗಳೂರು : ತಾಲ್ಲೂಕಿನ  ಗೌಡಗೊಂಡನಹಳ್ಳಿ ಗ್ರಾಮದ ವಿದ್ಯಾರ್ಥಿಗಳು  ಸರ್ಕಾರಿ ಬಸ್ಸು ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಛೇರಿಗೆ ಆಗಮಿಸಿ  ಮನವಿ ಪತ್ರ ಸಲ್ಲಿಸಿದರು.

ಸೊಕ್ಕೆ ಗ್ರಾಮದಲ್ಲಿ ಸಿಲಿಂಡರ್, ಗ್ಯಾಸ್ ಸ್ಟೌವ್ ವಿತರಣೆ

ಜಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ಸಹಾಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು  ಎಂದು  ವಿಕಾಸ್‌ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸ್ವಯ ಸೇವಾ ಸಂಸ್ಥೆ ಅಧ್ಯಕ್ಷರಾದ ಕೆ. ಮಹಾಲಕ್ಷ್ಮಿ ತಿಳಿಸಿದರು.

ಜಗಳೂರು : ಕೆನರಾ ಬ್ಯಾಂಕ್‌ನಿಂದ ಬೆಂಚ್ ಪೂರೈಕೆ

ಜಗಳೂರು : ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿ ಯೋಜನೆಯಡಿ ಪ್ರತಿ ವರ್ಷ ಬ್ಯಾಂಕ್ ವತಿಯಿಂದ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಕೆನರಾ ಬ್ಯಾಂಕ್, ವಿಜಯಪುರ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕ ಕಿರಣ್ ಎನ್.ಎಸ್ ಹೇಳಿದರು.

ವಕೀಲ ಈರನಗೌಡ ಹತ್ಯೆಗೆ ಖಂಡನೆ

ಜಗಳೂರು : ಕಲಬುರಗಿ ಜಿಲ್ಲೆಯ ವಕೀಲ ಈರನಗೌಡ ಪಾಟೀಲ್ ಅವರ ಬರ್ಬರ ಹತ್ಯೆ ಖಂಡಿಸಿ, ತಾಲ್ಲೂಕು ನ್ಯಾಯವಾದಿಗಳ ಸಂಘದಿಂದ ತಹಶೀ ಲ್ದಾರ್ ಅವರಿಗೆ ಮನವಿ ಸಲ್ಲಿಸಿದರು‌.

ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ನಬಾರ್ಡ್ ನೆರವು

ಜಗಳೂರು : ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮತ್ತು  ರೈತರ ಅಭ್ಯುದಯಕ್ಕಾಗಿ ನಬಾರ್ಡ್ ಸಂಸ್ಥೆಯಿಂದ ವಿವಿಧ ಯೋಜನೆಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದ್ದು, ಸದುಪಯೋಗ ಪಡೆದು ಕೊಳ್ಳಬೇಕು ಎಂದು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ರಶ್ಮಿ ರೇಖಾ ತಿಳಿಸಿದರು.

error: Content is protected !!