Category: ಸುದ್ದಿಗಳು

Home ಸುದ್ದಿಗಳು

ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಹಾಲೇಶಗೌಡ

ಹರಿಹರ : ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಾಲೇಶಗೌಡ ಮತ್ತು ಉಪಾಧ್ಯಕ್ಷರಾಗಿ  ಕೆ. ಜೈಮುನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹೆಚ್.ಸುನೀತಾ ತಿಳಿಸಿದ್ದಾರೆ.

ಜಗಳೂರು : ಪುರ ಪಿತೃಗಳ ನೆರವಿಲ್ಲದೇ ನಾಮಫಲಕ ಅಳವಡಿಕೆ

ಜಗಳೂರು : ಹಲವಾರು ವರ್ಷಗಳಾದರೂ   ಪಟ್ಟಣದ 12ನೇ ವಾರ್ಡ್‍ನಲ್ಲಿರುವ ಜೆಡಿ ಲೇಔಟ್‍ಗೆ ಪ.ಪಂ. ಕೌನ್ಸಲರ್‍ಗಳು ನಾಮ ಫಲಕ ಅಳವಡಿಸದ ಹಿನ್ನೆಲೆಯಲ್ಲಿ ಲೇಔಟ್ ನಿವಾಸಿಗಳೇ ಸದಸ್ಯರು ನಾಚುವಂತೆ ಸ್ವಂತ ಹಣದಲ್ಲಿ  ಜೆಡಿ ಲೇಔಟ್‍ಗೆ ನಾಮ ಫಲಕಗಳನ್ನು ಶುಕ್ರವಾರ ಅಳವಡಿಸಿದರು. 

ಹರಿಹರ : ಆತ್ಮಹತ್ಯೆಗೆ ಯತ್ನಿಸಿದವರ ರಕ್ಷಣೆ

ಹರಿಹರ : ಬಡತನದಿಂದ  ಮನನೊಂದು  ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರು ಎನ್ನಲಾದ ಐವರನ್ನು ನಗರದ ತುಂಗಾರತಿ ಸ್ಥಳದಲ್ಲಿ  ಪ್ರವಾಸೋದ್ಯಮ ಇಲಾಖೆಯ,  ಪ್ರವಾಸಿ ಮಿತ್ರರಾದ  ಹನುಮಂತರಾಜು  ಮತ್ತು ಸಾವಿತ್ರಮ್ಮ  ರಕ್ಷಿಸುವ ಕೆಲಸ ಮಾಡಿದ್ದಾರೆನ್ನಲಾಗಿದೆ.

ಆತ್ಮ ಕಲ್ಯಾಣವಾಗಲು ಗುರುವಿನ ಕಾಯಕ ಅವಶ್ಯಕ

ಹರಪನಹಳ್ಳಿ : ಆತ್ಮ ಕಲ್ಯಾಣವಾಗಲು ಗುರುವಿನ ಕಾಯಕ ಅವಶ್ಯಕ. ಹರ ಮುನಿದರೆ ಗುರು ಕಾಯುವನು.  ಹಾಗಾಗಿ ಗುರುವಿಗಿಂತ ಮಿಗಿಲಾದದ್ದು ಯಾವುದು ಇಲ್ಲವೆಂದು ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ ತಿಳಿಸಿದರು.

ಸ್ವಯಂ ಉದ್ಯೋಗವಾಗಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಿ

ಹರಿಹರ : ಷೇರು ಮಾರುಕಟ್ಟೆಯು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಇರುವ ವೇದಿಕೆಯಾಗಿದ್ದು, ಹಣಕಾಸಿನ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಹೂಡಿಕೆದಾರರೊಂದಿಗೆ ಬಂಡವಾಳ ವನ್ನು ಹುಡುಕುವ ಕಂಪನಿಗಳಿಗೆ ಇದು ಸೇತುವೆಯಾಗಿದೆ.

ಮಕ್ಕಳಲ್ಲಿ ಸರ್ವ ಧರ್ಮಗಳ ಸೌಹಾರ್ದತೆ ಮೂಡಿಸುವುದು ಅವಶ್ಯಕ

ಹರಪನಹಳ್ಳಿ : ಸಮ ಸಮಾಜ ನಿರ್ಮಾಣಕ್ಕೆ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವುದರ ಜತೆಗೆ ಸರ್ವ ಧರ್ಮಗಳ ಕುರಿತು ಸೌಹಾರ್ದತೆ ಮೂಡಿಸುವ ಅವಶ್ಯಕತೆ ಇದೆ ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡದೇ ಕಾಲಹರಣ : ಮನವಿ

ಹೊನ್ನಾಳಿ : ಸುಪ್ರೀಕೋರ್ಟ್‌ನ ತೀರ್ಪುಬಂದು 7 ತಿಂಗಾಳದರೂ ಒಳನಮೀಸಲಾತಿ ಜಾರಿ ಮಾಡದಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಕಾಲಹರಣ ಮಾಡುತ್ತದೆ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘವು ತಹಶೀಲ್ದಾರ್‌ ಪಟ್ಟರಾಜಗೌಡರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಕೊನೆಯಾಗಲಿ

ಜಗಳೂರು : ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಕೊನೆಯಾಗಬೇಕು ಮತ್ತು ಕನ್ನಡಿಗರಿಗೆ ಕಾನೂನು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಯುವ ಕರ್ನಾಟಕ ವೇದಿಕೆ ಶನಿವಾರ ಪ್ರತಿಭಟನೆ ನಡೆಸಿತು.

ಸ್ಪೀಕರ್ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ

ಹರಿಹರ : ವಿಧಾನಸಭೆಯಲ್ಲಿ ನಿನ್ನೆ ಸಭಾಪತಿ ಯು.ಟಿ. ಖಾದರ್ ಅವರು ಬಿಜೆಪಿ ಶಾಸಕರನ್ನು ಪುಡಿ ರೌಡಿಗಳೆನ್ನುವ ರೀತಿಯಲ್ಲಿ ಹೊರಗಡೆ ಎತ್ತಿ  ಹಾಕಿಸಿ ರುವ ಪ್ರವೃತ್ತಿ ಖಂಡನೀಯವಾಗಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್ ಹೇಳಿದರು.

ನೀರಿನ ದಾಹ ನೀಗಿಸಿಕೊಂಡ ಕೋತಿ…

ಬೇಸಿಗೆ ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನ – ಜಾನುವಾರು ಮತ್ತು ಪ್ರಾಣಿ – ಪಕ್ಷಿಗಳು ಸೇರಿದಂತೆ ಸಕಲ ಜೀವ ಸಂಕುಲಕ್ಕೆ ನೀರಿನ ಅಗತ್ಯತೆ ಕೂಡಾ ಹೆಚ್ಚಾಗುತ್ತಿದೆ.

error: Content is protected !!