Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ನೂತನ ರೈಲು ಮಾರ್ಗ ಕಾಮಗಾರಿ ಶೀಘ್ರ ಅಂತ್ಯಗೊಳಿಸಲು ಪ್ರಯಾಣಿಕರ ಸಂಘದ ಮನವಿ

ತುಮಕೂ ರಿನಿಂದ ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆ ಸಂಪರ್ಕಿಸುವ ನೂತನ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಮುಕ್ತಾಯ ಗೊಳಿಸಬೇಕೆಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು, ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಿದೆ.

ವಿಶ್ವ ಭಾರತಿ ವಿದ್ಯಾಪೀಠದಲ್ಲಿ ಗುರುವಂದನೆ, ಸ್ನೇಹ ಸಮ್ಮೀಲನ ಕಾರ್ಯಕ್ರಮ ಯಶಸ್ವಿ

ನಗರದ ವಿಶ್ವ ಭಾರತಿ ವಿದ್ಯಾಪೀಠ ಕಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಸರಸ್ವತಿ ನಗರ ಮುಖ್ಯ ರಸ್ತೆಯಲ್ಲಿ ಗುಂಡಿ : ಸುವರ್ಣ ಕರ್ನಾಟಕ ವೇದಿಕೆ ಪ್ರತಿಭಟನೆ

ಇಲ್ಲಿನ ಸರಸ್ವತಿ ನಗರ ಎಸ್.ಎಸ್. ಹಾಸ್ಪಿಟಲ್‌ಗೆ ಹೋಗುವ ಮಾರ್ಗ ಮಧ್ಯದಲ್ಲಿ ಚರಂಡಿ ಗುಂಡಿ ಬಿದ್ದಿದ್ದು, ಕಳೆದ 20 ದಿನಗಳಿಂದ ಈ ಅವ್ಯವಸ್ಥೆ ಕಂಡು ಬಂದರೂ ಅಲ್ಲಿಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಕಡೆ ಗಮನಹರಿಸಿಲ್ಲ.

ಅಮಿತ್ ಷಾ ಹೇಳಿಕೆ ಖಂಡಿಸಿ ಮುಸ್ಲಿಂ ಒಕ್ಕೂಟದ ಪ್ರತಿಭಟನೆ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಮಾನಕರ ಮಾತುಗಳನ್ನಾಡಿದ ಕೇಂದ್ರ ಸಚಿವ ಅಮಿತ್ ಷಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಮುಸ್ಲಿಂ ಒಕ್ಕೂಟದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕರಾಟೆ : ನಿಧಿಗೆ ಚಿನ್ನ – ಬೆಳ್ಳಿ

ನಗರದ ನೇತಾಜಿ ಸ್ಟೇಡಿಯಂನಲ್ಲಿ ಜರುಗಿದ 5ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್-2024 ಸ್ಪರ್ಧೆಯಲ್ಲಿ ನಗರದ ನಿಧಿ ಬೇತೂರ್, ಕಟಾ ವಿಭಾಗದಲ್ಲಿ ಚಿನ್ನ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ.

`ಆಧ್ಯಾತ್ಮಿಕ ಶುಭಾಶಯ ರತ್ನ’ ಕೃತಿ ಲೋಕಾರ್ಪಣೆ

ನಲ್ಲೂರು ಲಕ್ಷ್ಮಣ್‍ರಾವ್ ನರಹರಿ ರೇವಣಕರ್‌ ಅವರ `ಆಧ್ಯಾತ್ಮಿಕ ಶುಭಾಶಯ ರತ್ನ’ ಬೃಹತ್ ಗ್ರಂಥವನ್ನು ಇತ್ತೀಚಿಗೆ ನಗರದ ವಿನೋಬನಗರದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಉಡುಪಿ ಜಿಲ್ಲೆಯ ಸೊದೆ ಮಠದ ಶ್ರೀ  ವಿಶ್ವವಲ್ಲಭವತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.

ಡಾ.ಎಸ್‌.ಕೆ. ನಾಗರಾಜಗೆ ಪ್ರಶಸ್ತಿ

ರಾಣೇಬೆನ್ನೂರು : ಇಲ್ಲಿನ ಸಿದ್ದಗಂಗಾ ಆಸ್ಪತ್ರೆಯ ಫಿಜಿಷಿಯನ್‌ ಡಾ.ಎಸ್‌.ಕೆ. ನಾಗರಾಜ ಅವರಿಗೆ `ವೈದ್ಯ ವಿಭೂಷಣ’ ಪ್ರಶಸ್ತಿ ಲಭಿಸಿದೆ. ಆರೋಗ್ಯ ಸೇವೆಯಲ್ಲಿನ ಶ್ರೇಷ್ಠತೆ, ಜನಪರ ಕಾಳಜಿ, ರಕ್ತದಾನ ಹಾಗೂ ಆರೋಗ್ಯ ಶಿಬಿರ ಸೇರಿದಂತೆ ಇತರೆ ಸೇವೆಗಳನ್ನು ಗುರುತಿಸಿದ ಕರ್ನಾಟಕ ಹೆಲ್ತ್‌ ಕೇರ್‌ ಸಂಸ್ಥೆಯು ಈ ಪ್ರಶಸ್ತಿ ನೀಡಿದೆ.

ವಿವಿಧ ವಾರ್ಡ್ ಗಳಲ್ಲಿನ ತ್ಯಾಜ್ಯ ಸ್ಥಳಾಂತರ

ಮಹಾನಗರ ಪಾಲಿಕೆಯ ವಿವಿಧ ವಾರ್ಡುಗಳಲ್ಲಿ ಬಹಳ ದಿನಗಳಿಂದ ಸಂಗ್ರಹವಾಗಿರುವ ಕಟ್ಟಡ ತ್ಯಾಜ್ಯ ಹಾಗೂ ಇತರೆ ಅನುಪಯುಕ್ತ ತ್ಯಾಜ್ಯಗಳನ್ನು ಗುತ್ತಿಗೆದಾರರ ಮೂಲಕ ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಲಾಗಿದೆ. 

ವ. ಬಸವಾಪುರದಲ್ಲಿ ನಂದೀಶ್ವರ ಶ್ರೀಗಳ ಹುಟ್ಟುಹಬ್ಬ ಆಚರಣೆ

ಮಲೇಬೆನ್ನೂರು : ವಡೆಯರ ಬಸವಾಪುರ ಗ್ರಾಮದಲ್ಲಿ ಗುರುವಾರ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ 56 ನೇ ವರ್ಷದ ಹುಟ್ಟುಹಬ್ಬವನ್ನು ಗ್ರಾಮಗಳ ಭಕ್ತರು ಸೇರಿ ಆಚರಿಸಿದರು. 

ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನ

ನಗರದ ಮಾಗನೂರು ಬಸಪ್ಪ ಪಿಯು ಕಾಲೇಜಿನಲ್ಲಿ ಸಾಮರಸ್ಯ ವೇದಿಕೆ ಇವರ ಸಹಯೋಗದಲ್ಲಿ ಈಚೆಗೆ `ರಾಣಿ ಅಹಲ್ಯಾಬಾಯಿ ಹೋಳ್ಕರ್’ ಅವರ ಜನ್ಮದಿನ ಆಚರಿಸಲಾಯಿತು.

ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು

ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಬೇಕು, ಇಂದಿನ ಆಧುನಿಕ ಯುಗದಲ್ಲಿ ತಂದೆ-ತಾಯಿಗಳಿಗೆ ನೀಡುವ ಗೌರವವನ್ನು ಕನ್ನಡ ಭಾಷೆಗೂ ನೀಡಬೇಕು, ನಮ್ಮದು ವೈವಿಧ್ಯ ಮಯ, ಸಾಂಸ್ಕೃತಿಕ ದೇಶ.

error: Content is protected !!