Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ನಗರಸಭೆ 1.74 ಕೋಟಿ ರೂ. ಉಳಿತಾಯ ಬಜೆಟ್

ರಾಣೇಬೆನ್ನೂರು : ಬಾಕಿ ಉಳಿದ 9 ತಿಂಗಳ ಅವಧಿಗೆ ಅಧ್ಯಕ್ಷ ಗಾದಿಯಲ್ಲಿ ಕುಳಿತಿರುವ ಚಂಪಕ ಬಿಸಲಳ್ಳಿ ಅವರು ತಮ್ಮ ಮೊದಲ ಸಭೆಯಲ್ಲಿಯೇ 2025ರ ಆಯ-ವ್ಯಯ ಮಂಡಿಸಿ, 1.74 ಕೋಟಿ ರೂ. ಉಳಿತಾಯ ಮಾಡುತ್ತಿರುವುದಾಗಿ ಘೋಷಿಸಿದರು.

ಕೊಮಾರನಹಳ್ಳಿ ಬಳಿ ಹೆಚ್ಚಾಗದ ನೀರಿನ ಗೇಜ್ : ಕೊನೆ ಭಾಗಕ್ಕೆ ಸಮರ್ಪಕವಾಗಿ ಹರಿಯದ ನೀರು

ಮಲೇಬೆನ್ನೂರು : ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ಜಮೀನುಗಳಿಗೆ ಇನ್ನೂ ಸಮರ್ಪಕವಾಗಿ ನೀರು ಹರಿದು ಬರುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಹಳೇಪೇಟೆ ಸರ್ಕಾರಿ ಶಾಲೆಯಲ್ಲಿ ಎಫ್ಎಲ್‌ಎನ್ ಕಲಿಕಾ ಹಬ್ಬ

ಕ್ಲಸ್ಟರ್ ಮಟ್ಟದ ಎಫ್ಎಲ್‌ಎನ್ ಕಲಿಕಾ ಹಬ್ಬವು ಸ್ಥಳೀಯ ಹಳೇಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜರುಗಿತು. ಕ್ಲಸ್ಟರ್‌ನ ಸರ್ಕಾರಿ ಶಾಲೆಗಳಿಂದ ಒಂದರಿಂದ ಐದನೇ ತರಗತಿಯ ನೂರಕ್ಕೂ ಹೆಚ್ಚು ಮಕ್ಕಳು ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಶಿವರಾತ್ರಿ ಉತ್ಸವ : ದಾವಣಗೆರೆ ಪ್ರತಿಭೆಗಳ ಕಲಾ ಸ್ಪರ್ಧೆಗಳು

ನಗರದ ಶ್ರೀ ವಿನಾಯಕ ಎಜುಕೇಶನ್‌ ಟ್ರಸ್ಟ್‌, ಅಥಣಿ ಕಾಲೇಜು ಹಾಗೂ `ಚಿರಂತನ ಅಕಾಡೆಮಿ’ ಸಹಯೋಗದಲ್ಲಿ  ಶಿವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 

ನಗರದಲ್ಲಿ ನಾಡಿದ್ದು ಸಿದ್ಧ ಕಣ್ಣಿನ ಹನಿ

ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ನಾಡಿದ್ದು ದಿನಾಂಕ 23 ರ ಭಾನುವಾರ ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ – ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ  ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ. 

ನಟ ಶ್ರೇಯಸ್‌ ಮಂಜು ಕಾರು ಅಪಘಾತ

ಸ್ಯಾಂಡಲ್‌ವುಡ್‌ ನಟ, ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಕೆ. ಮಂಜು ಅವರ ಕಾರು ಅಪಘಾತ ಕ್ಕೀಡಾಗಿದೆ. ವಿಷ್ಣುಪ್ರಿಯ ಚಲನ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿ ನಿಂದ ದಾವಣಗೆರೆಗೆ ಬರುತ್ತಿದ್ದರು.

ಹೆಜ್ಜೇನು ದಾಳಿಗೆ ರೈತನ ಸಾವು

ಹೆಜ್ಜೇನು ದಾಳಿಯಿಂದ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮ ದಲ್ಲಿ ಗುರುವಾರ ನಡೆದಿದೆ. ರೈತ ನಾಗಪ್ಪ (65) ಹೆಜ್ಜೇನು ದಾಳಿಗೆ ಮೃತಪಟ್ಟ ರೈತ.

ಸ್ಥಾಯಿ ಸಮಿತಿ ರಚನೆಯಲ್ಲಿ ಆಡಳಿತಕ್ಕೆ ಹಿನ್ನಡೆ ಕೋರ್ಟ್‌ನತ್ತ ಮುಖಮಾಡುವ ವಿರೋಧಿಗಳು

ರಾಣೇಬೆನ್ನೂರು : ನೂರು ವಿಷಯಗಳ ವಿಷಯ ಪಟ್ಟಿಯ ಸರ್ವ ಸದಸ್ಯರ ಸಾಧಾರಣ ಸಭೆ ಇಂದು ಮಧ್ಯಾಹ್ನ ನಡೆದು 87 ವಿಷಯಗಳು ಅಲ್ಪಸ್ವಲ್ಪ ಚರ್ಚೆಗಳೊಂದಿಗೆ ಸರ್ವ ಸಮ್ಮತದೊಂದಿಗೆ ನಿರ್ಣಯಿಸಲ್ಪಟ್ಟವು.

ಚೌಕಿಪೇಟೆ ಅಕ್ಕಿ ವರ್ತಕರಿಂದ ಪಾದಯಾತ್ರಿಗಳಿಗೆ ಹಣ್ಣು ವಿತರಣೆ

ಇಲ್ಲಿನ ಚೌಕಿಪೇಟೆ ಅಕ್ಕಿ ವರ್ತಕರಿಂದ ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಹೋಗುವ ಭಕ್ತಾದಿಗಳಿಗೆ ಅರಸೀಕೆರೆಯಲ್ಲಿ ಹಣ್ಣು, ನೀರು, ಮಜ್ಜಿಗೆ ವಿತರಣೆ ಮಾಡಲಾಯಿತು.

ವಿವೇಕರ ತತ್ವಾದರ್ಶಗಳು ಯುವ ಜನತೆಗೆ ಸ್ಫೂರ್ತಿ

ಶ್ರೇಷ್ಠ ದಾರ್ಶನಿಕ ಹಾಗೂ ಯುಗಪುರುಷರಾದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಯುವ ಜನತೆಗೆ ಸ್ಫೂರ್ತಿ ನೀಡಲಿವೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ತಿಳಿಸಿದರು.

error: Content is protected !!