Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು

ತುಂಗಭದ್ರೆಯಲ್ಲಿ ಹೆಚ್ಚಿದ ಹರಿವು

ಹರಿಹರ : ಆಗುಂಬೆ, ಶೃಂಗೇರಿ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಮಳೆ ಹೆಚ್ಚಾಗಿ ಸುರಿಯುತ್ತಿರುವ ಕಾರಣ  ನಗರದ ತುಂಗಭದ್ರಾ ನದಿಯಲ್ಲಿ, ದಿನದಿಂದ ದಿನಕ್ಕೆ, ನೀರಿನ ಹರಿವಿನ ಪ್ರಮಾಣವು ಹೆಚ್ಚಾಗುತ್ತಾ ಸಾಗಿದೆ. 

ಸ್ಥಾನಮಾನಗಳು ಸಮಾಜ ಸೇವೆಗೆ ದೊರೆತ ಅವಕಾಶ

ಸಾರ್ವಜನಿಕ ಜೀವನದಲ್ಲಿ ಸ್ಥಾನಮಾನಗಳು, ಸಮಾಜ ಸೇವೆಗೆ ದೊರೆತ ಅವಕಾಶ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

ಅಪ್ರತಿಮ ಆಡಳಿತಗಾರ ಕೆಂಪೇಗೌಡ: ಡಿಸಿ

ಸರ್ವಜಾತಿ ಸಮನ್ವಯ, ಸರ್ವಧರ್ಮ ಪಾಲಕರು, ವಿಶಾಲ ನೀರಾವರಿ ಯೋಜನೆಗಳು ಹಾಗೂ ಬೃಹತ್ ಬೆಂಗಳೂರು ನಿರ್ಮಾಣದಂತಹ ಕಾರ್ಯಗಳಿಂದ ಕೆಂಪೇಗೌಡರು ನಾಡಪ್ರಭು ಎಂಬ ಪ್ರಖ್ಯಾತಿ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಹೇಳಿದರು.

ಮಲೆನಾಡಿನಲ್ಲಿ ಮಳೆ ಪ್ರಾರಂಭ ಭದ್ರಾ ಒಳಹರಿವು ಹೆಚ್ಚಳ

ಶಿವಮೊಗ್ಗ : ಮಲೆನಾಡಿನಲ್ಲಿ ಮುಂಗಾರು ಮಳೆ ಪ್ರಾರಂಭ ವಾಗಿದ್ದು, ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಬುಧವಾರ 2276 ಕ್ಯೂಸೆಕ್ಸ್ ಇದ್ದ ಒಳಹರಿವು ಗುರುವಾರ 4082 ಕ್ಯೂಸೆಕ್ಸ್‌ಗೆ ಏರಿಕೆ ಕಂಡಿದೆ.

ಕಾವ್ಯಕ್ಕೆ ಎಂದೂ ಸಾವಿಲ್ಲ, ಕವಿಗೆ ಮುಪ್ಪಿಲ್ಲ

ಕಾವ್ಯ ಎಂದರೆ ಭಾವನೆ ಮತ್ತು ಭಾವನೆಯ ಆಲೋಚನೆಗಳನ್ನು ಕಂಡುಕೊಳ್ಳುವುದು. ಅದೊಂದು ಸಂಸ್ಕೃತಿ. ಕಾವ್ಯಕ್ಕೆ ಎಂದೂ ಸಾವಿಲ್ಲ. ಕವಿಗೆ ಮುಪ್ಪಿಲ್ಲ ಎಂದು ಹಿರಿಯ ಕವಯತ್ರಿ, ವೈಚಾರಿಕ ಬರಹಗಾರ್ತಿ ಶಶಿಕಲಾ ವಸ್ತ್ರದ್ ಹೇಳಿದರು.

ದೃಶ್ಯಕಲಾ ಮಹಾವಿದ್ಯಾಲಯಕ್ಕೆ 60 ವರ್ಷ : ವರ್ಷವಿಡೀ ವಜ್ರ ಮಹೋತ್ಸವ

ದೃಶ್ಯಕಲಾ ಮಹಾವಿದ್ಯಾಲಯಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಜುಲೈ ತಿಂಗಳಿನಿಂದ ಒಂದು ವರ್ಷ ಕಾಲ ವಜ್ರ ಮಹೋತ್ಸವ ಆಚರಿಸಲಾಗುವುದು ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ತಿಳಿಸಿದರು.

ಮಳೆ ನೀರು ಶುದ್ಧ, ಸಂಗ್ರಹಿಸುವುದೂ ಸುಲಭ

ಮುಂದಿನ ಪೀಳಿಗೆಗೆ ನೀರು ಸಂಗ್ರಹಿಸಿಟ್ಟುಕೊಡದೆ ಕೋಟ್ಯಂತರ ರೂಪಾಯಿ ಆಸ್ತಿ, ಬಂಗಲೆ ನಿರ್ಮಿಸಿದರೂ ಪ್ರಯೋಜನವಿಲ್ಲ ಎಂದು ಮಳೆ ನೀರು ಕೊಯ್ಲು ಸಲಹೆಗಾರ ವಿಜಯರಾಜ್ ಸಿಸೋದ್ಯಾ ಹೇಳಿದರು.

ವಿಂಡ್ ಫ್ಯಾನ್, ಸೋಲಾರ್ ಅಳವಡಿಕೆ ತಡೆಗೆ ಆಗ್ರಹ

ಜಗಳೂರು : ತಾಲ್ಲೂಕಿನಾದ್ಯಂತ ಬಹುರಾಷ್ಟ್ರೀಯ ಕಂಪನಿಗಳು ಸ್ಥಾಪಿಸುತ್ತಿರುವ ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಬೃಹತ್ ಘಟಕಗಳನ್ನು  ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನಂಜುಂಡಸ್ವಾಮಿ ಬಣದ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ರೈತರು ಪ್ರತಿಭಟನೆ‌ ನಡೆಸಿದರು.

ವಾಲ್ಮೀಕಿ ನಿಗಮದ ವ್ಯಾಪಕ ಭ್ರಷ್ಟಾಚಾರ ಖಂಡಿಸಿ ನಾಳೆ ಪ್ರತಿಭಟನೆ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸರ್ಕಾರಿ ಅನುದಾನದ ಹಣ  ವರ್ಗಾವಣೆಯಲ್ಲಿನ ವ್ಯಾಪಕ ಭ್ರಷ್ಟಾಚಾರ ವಿರೋಧಿಸಿ ನಾಡಿದ್ದು ದಿನಾಂಕ 28 ರ ಶುಕ್ರವಾರ ಬೆಳಿಗ್ಗೆ 10.30 ಕ್ಕೆ ನಗರದ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ

ಶಾಸಕ ಪ್ರಕಾಶ ಕೋಳಿವಾಡ ಜನಸ್ಪಂದನ ಕಾರ್ಯಕ್ರಮದಲ್ಲಿ ನೂರಾರು ಅಹವಾಲು

ರಾಣೇಬೆನ್ನೂರು : ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಇಂದು ನಡೆದ ಜನಸ್ಪಂದನ ಕಾರ್ಯ ಕ್ರಮಕ್ಕೆ ಆಗಮಿಸಿದ್ದ ಗ್ರಾಮೀಣ ಭಾಗದ ನೂರಾರು ಜನರು ತಮ್ಮ ವೈಯಕ್ತಿಕ ಹಾಗೂ ಸಾರ್ವತ್ರಿಕ ಅಹವಾಲುಗಳನ್ನು  ಅರ್ಜಿ ಮೂಲಕ ಸಲ್ಲಿಸಿದರು.

error: Content is protected !!