
ಪಾಡನ್ನು ಹಾಡನ್ನಾಗಿಸಿ ನಗಿ ಧರಿಸಿ ಬದುಕಿದ ಬೇಂದ್ರೆ ಮಾಸ್ತರ
ಕನ್ನಡ ನವೋದಯ ಸಂದರ್ಭವು ಏಕಕಾಲಕ್ಕೆ ಅನೇಕ ಪ್ರತಿಭಾನಾ ಕ್ರಿಯಾಶೀಲವಾಗಿದ್ದಂತ ಕಾಲ. ಕನ್ನಡ-ಕರ್ನಾಟಕ-ಕನ್ನಡಿಗರ ಏಕೀಕರಣವಾಗಬೇಕೆಂಬ ಆಶಯವು ವೃತದಂತೆ ಸ್ವೀಕೃತವಾಗಿ ಕಾರ್ಯಮಗ್ನರಾದ ಗುರು-ಶಿಷ್ಯ-ಸ್ನೇಹಿತ ಪರಂಪರೆಯೊಂದು ಈ ಮಣ್ಣಿನಲ್ಲಿ ರೂಪಗೊಂಡಿತು.