ಮಳಲ್ಕೆರೆ ಸಹಕಾರಕ್ಕೆ ವೆಂಕಟೇಶ್ ಅಧ್ಯಕ್ಷ
ತಾಲ್ಲೂಕಿನ ಮಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಹೆಚ್.ವೆಂಕಟೇಶ್, ಉಪಾಧ್ಯಕ್ಷರಾಗಿ ಶ್ರೀಮತಿ ಎಂ.ಜಿ.ಗೀತಾ ಅವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಮಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಹೆಚ್.ವೆಂಕಟೇಶ್, ಉಪಾಧ್ಯಕ್ಷರಾಗಿ ಶ್ರೀಮತಿ ಎಂ.ಜಿ.ಗೀತಾ ಅವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
ನಗರದ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ವೃತ್ತಿಪರ ನಿರ್ದೇಶಕರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಮತ್ತು ಬ್ಯಾಂಕಿನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಹರಪನಹಳ್ಳಿಯ ಹಿರಿಯ ಲೆಕ್ಕ ಪರಿಶೋಧಕ ಜಿ.ನಂಜನಗೌಡರು ನೇಮಕಗೊಂಡಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಅಡವಿಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಮುಮ್ತಾಜ್ ಬೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ರಾಷ್ಟ್ರೀಯ ಗೋ ಸೇವಾ ಸಂಘ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಂ.ಡಿ. ಚೈನ್ರಾಜ್, ಉಪಾಧ್ಯಕ್ಷರಾಗಿ ಕಡ್ಲೆಬಾಳು ಬಸವರಾಜ್, ಕಾಶೀಪುರ ಸಿದ್ದೇಶ್, ಸಚಿವರಾಗಿ ಸುರೇಶ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಕೆ.ದೇವರಾಜ್, ಕಾರ್ಯದರ್ಶಿಗಳಾಗಿ ರುದ್ರೇಶ್ ತೆಲಗಿ, ಕೆ.ಜಿ.ಶರತ್, ಪ್ರಭು ಗೊಲ್ಲರಹಳ್ಳಿ, ಖಜಾಂಚಿಯಾಗಿ ಜಿ.ಎಸ್.ಶ್ಯಾಮ್, ಲೆಕ್ಕ ಪರಿಶೋಧಕರಾಗಿ ಕೆ.ಎಸ್.ಕಲ್ಲಪ್ಪ, ಮಾಧ್ಯಮ ಉಸ್ತುವಾರಿಯಾಗಿ ಆರ್.ಎಲ್.ಯೋಗೇಶ, ವಕ್ತಾರರಾಗಿ ಶೇಖರ್ ನಾಯ್ಕ ನೇಮಕಗೊಂಡಿದ್ದಾರೆ.
ವಾಸವಿ ಕ್ಲಬ್ ದೇವನಗರಿಗೆ 2022ನೇ ಸಾಲಿನ ಅಧ್ಯಕ್ಷರಾಗಿ ಕೆ.ವಿ.ರಂಗನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಬಿ.ಸಿ.ವರಮಹಾಲಕ್ಷ್ಮಿ, ಖಜಾಂಚಿಯಾಗಿ ಪಿ.ಎಸ್. ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಲೇಬೆನ್ನೂರು : ಇಲ್ಲಿನ ಪ್ರತಿಷ್ಠಿತ ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ. ಬಿ. ಚಂದ್ರಶೇಖರ್, ಉಪಾಧ್ಯಕ್ಷರಾಗಿ ಯಲವಟ್ಟಿ ಆಂಜನೇಯ ಅವರು ಸೋಮವಾರ ನಡೆದ ಚುನಾವಣೆಯಲ್ಲಿ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರಪನಹಳ್ಳಿ : ನೂತನ ವಿಜಯನಗರ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಸುವರ್ಣ ಆರುಂಡಿ ನಾಗರಾಜ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಲೇಬೆನ್ನೂರು : ಇಲ್ಲಿನ ಶ್ರೀ ನಂದಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಜಿಗಳಿಯ ಇಂದೂಧರ್ ಎನ್. ರುದ್ರೇಗೌಡ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಮಲೇಬೆನ್ನೂರು : ಯಲವಟ್ಟಿ ಗ್ರಾ.ಪಂ. ಅಧ್ಯಕ್ಷರಾಗಿ ಕಮಲಾಪುರದ ಕೆ.ಬಿ.ರಮೇಶ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಜಂಟಿ ಕಾರ್ಯದರ್ಶಿಯಾಗಿ ನಗರದ ಕೆ.ರಾಘವೇಂದ್ರ ನಾಯರಿ ನೇಮಕಗೊಂಡಿದ್ದಾರೆ.
ಜಗಳೂರು, ಜ.11- ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲೊಲಾಕ್ಷಮ್ಮ, ಉಪಾಧ್ಯಕ್ಷರಾಗಿ ಗೀತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷರಾಗಿ ಸಾವಿತ್ರಮ್ಮ ಸಿದ್ದಪ್ಪ, ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕುಸುಮಾ ಲೋಕೇಶ್, ಉಪಾಧ್ಯಕ್ಷರಾಗಿ ನಿರ್ಮಲ ಶಿವಕುಮಾರ್, ಕಾರ್ಯ ದರ್ಶಿ ಯಾಗಿ ಚಂದ್ರಿಕಾ ಮಂಜುನಾಥ್, ಖಜಾಂಚಿ ಯಾಗಿ ವಿಜಯಲಕ್ಷ್ಮಿಬಸವರಾಜ್, ಸಹ ಕಾರ್ಯ ದರ್ಶಿಯಾಗಿ ವಾಣಿ ರಾಜ್ ಆಯ್ಕೆಯಾಗಿದ್ದಾರೆ.