Category: ಅಪರಾಧ

Home ಅಪರಾಧ

ನಾಲೆಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಬಸವಾಪಟ್ಟಣ ಠಾಣಾ ವ್ಯಾಪ್ತಿಯ ಸೂಳೆಕೆರೆ ಸಿದ್ದನ ನಾಲೆಯಲ್ಲಿ ಅಪರಿಚಿತ ಮಹಿಳೆಯೋರ್ವಳ ಮೃತದೇಹ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕಿಸಲಾಗಿದೆ. 

ಮನೆಗಳ್ಳನ ಬಂಧನ : 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳ ವಶ

ಮನೆಗಳ್ಳನೋರ್ವನನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು, ಎರಡು ಪ್ರಕರಣಗಳನ್ನು ಪತ್ತೆ ಮಾಡಿ, 3.25 ಲಕ್ಷ ರೂ. ಮೌಲ್ಯದ 73 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ರೈತನನ್ನು ಅಡ್ಡಗಟ್ಟಿ ದರೋಡೆ

ರೈತನೋರ್ವನನ್ನು ಅಡ್ಡಗಟ್ಟಿದ ದುಷ್ಕರ್ಮಿ ಗಳು ನಗದು ಹಣ, ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾದ ಘಟನೆ ತಾಲ್ಲೂಕಿನ ಚಿಕ್ಕ ಬೂದಿಹಾಳ್ ಗ್ರಾಮದ ಸಮೀಪ ನಡೆದಿದೆ. 

ಕಾರು ವಂಚಿಸಿದ ಪ್ರಕರಣದಲ್ಲಿ ಬಂಧನ

ಮೋಸದಿಂದ ಕಾರು ತೆಗೆದುಕೊಂಡು ಹೋಗಿದ್ದ ಆರೋಪಿತನನ್ನು ಬಂಧಿಸಿ‌, ಕಾರು ವಶಪಡಿಸಿಕೊಳ್ಳುವಲ್ಲಿ ಸ್ಥಳೀಯ ಕೆಟಿಜೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. 

ವಿಮೆ ಮಾಡಿಸುವ ನೆಪದಲ್ಲಿ ವಂಚನೆ

ವಿಮೆ ಮಾಡಿಸುವುದಾಗಿ ಬ್ಯಾಂಕ್ ಖಾತೆ ತೆರೆದು, ನಕಲಿ ಸಹಿ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಇಲ್ಲಿನ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ನಲ್ಲಿ 13.45 ಲಕ್ಷ ವಂಚನೆ

ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಬ್ಲಾಕ್ ಆಗಿದೆ ಎಂದು ಕಸ್ಟಮರ್ ಕೇರ್‌ಗೆ ಫೋನ್ ಮಾಡಿದ ವ್ಯಕ್ತಿಯಿಂದ ಒಟಿಪಿ ನಂಬರ್ ಪಡೆದು ವಂಚನೆ ಮಾಡಿದ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. 

ಅಪರಿಚಿತ ಮಹಿಳೆ ಶವ ಪತ್ತೆ

ಅಮರಾವತಿ ಕಾಲೋನಿ-ಹರಿಹರ ರೈಲು ನಿಲ್ದಾಣಗಳ ಮಧ್ಯೆ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ಹೆಂಗಸಿನ ಶವ ಪತ್ತೆಯಾಗಿದೆ.

ನವ ವಿವಾಹಿತೆಯ ಸಾವು : ವರದಕ್ಷಿಣೆ ಕಿರುಕುಳ ಆರೋಪ

ನವ ವಿವಾಹಿತೆ ಸಾವಿಗೀಡಾಗಿದ್ದು, ಇದು ವರದಕ್ಷಿಣೆ ಕಿರುಕುಳ ಎಂದು ಆರೋಪಿಸಲಾಗಿದೆ.ಹೊಸ ಕುಂದವಾಡ ಗ್ರಾಮದ ರೂಪಾ (23) ಸಾವಿಗೀಡಾಗಿರುವ ನವ ವಿವಾಹಿತೆ. ಹನುಮನಹಳ್ಳಿ ಗ್ರಾಮದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಈಕೆಯ ಶವ ಪತ್ತೆಯಾಗಿದೆ.

ವರದಕ್ಷಿಣೆ ಸಾವು : ದೂರು ದಾಖಲು

ಕೊಟ್ಟೂರು : ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಮೃತ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ವರದಕ್ಷಿಣೆ ಸಾವು : ದೂರು ದಾಖಲು

ಕೊಟ್ಟೂರು : ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಮೃತ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈಜಲು ಹೋಗಿ ಬಾಲಕ ಸಾವು

ಕೂಡ್ಲಿಗಿ ತಾಲ್ಲೂಕಿನ ಶಿವಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ, ಕಲ್ಲಿನ ಕ್ವಾರಿಯ  ಗುಂಡಿಯಲ್ಲಿ  ಕೂಡ್ಲಿಗಿಯ ರಾಜೀವ್ ಗಾಂಧಿ ನಗರದ ಅಫ್ರಿದ್ (15) ಎಂಬ ಬಾಲಕನು ನೀರಿನಲ್ಲಿ ಈಜಲು ಹೋಗಿ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

error: Content is protected !!