ವಾರ ಭವಿಷ್ಯ – ದಿನಾಂಕ : 21.05.2023 ರಿಂದ 27.05.2023

ವಾರ ಭವಿಷ್ಯ – ದಿನಾಂಕ : 21.05.2023 ರಿಂದ 27.05.2023

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಹಿಡಿದ ಕಾರ್ಯವೆಲ್ಲವನ್ನೂ ಸಾಧಿಸುತ್ತಾ ಹೋಗುವ ನಿಮಗೆ ಅತಿಯಾದ ಆತ್ಮವಿಶ್ವಾಸ ಮೂಡಲಿದೆ. ಆದರೆ  ಮುಂದೆ ಆತಂಕ ಉಂಟುಮಾಡಬಹುದು. ಕುಟುಂಬಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು, ಚಿಂತೆಯನ್ನುಂಟು ಮಾಡಬಹುದು. ಹಣಕಾಸಿನ ಹರಿವು ಸಾಧಾರಣವಾಗಿರುವುದ ರಿಂದ, ಯಾವುದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು  ಯತ್ನಿಸಬೇಡಿ. ಅಡುಗೆ ಮಾಡುವವರಿಗೆ ಅಥವಾ ಪಾಕ ಪ್ರವೀಣರಿಗೆ ಬೇಡಿಕೆ ಹೆಚ್ಚಿ, ಅಧಿಕ ಸಂಪಾದನೆಯಾಗಲಿದೆ. ಭಾನು-ಸೋಮ-ಮಂಗಳ-ಶುಭ ದಿನಗಳು

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಕೌಟುಂಬಿಕ ವಿಚಾರದಲ್ಲಿ ಒಬ್ಬೊಂಟಿಯಾಗಿದ್ದ ನಿಮಗೆ, ಹಲವರ ಬೆಂಬಲ ಸಿಗಲಿದೆ. ಯುವಕರು ಆತ್ಮವಿಶ್ವಾಸದೊಂದಿಗೆ ಮುನ್ನಡೆದು ಗುರಿ ಸಾಧಿಸುವರು. ನಾಟಿ ವೈದ್ಯರಿಗೆ ಅಥವಾ ಗಿಡಮೂಲಿಕೆ ಔಷಧಿ ತಯಾರಕರಿಗೆ ಬೇಡಿಕೆ ಹೆಚ್ಚಲಿದೆ. ಜೊತೆಗೆ ಲಾಭಾಂಶವೂ ವೃದ್ಧಿಸಲಿದೆ. ಆಸ್ತಿ ವಿಚಾರದಲ್ಲಿ ಕೋರ್ಟ್, ಕಛೇರಿಯೆಂದು ವೃಥಾ ಅಲೆದಾಡಿದಲ್ಲಿ, ಸಂಪಾದನೆ ಕರಗುತ್ತಾ ಹೋಗಬಹುದು. ಆದಾಯದ ಮೂಲದಲ್ಲಿ ತುಸು ಹೆಚ್ಚಾಗಲಿದೆ. ಗುರುಗಳ ಸೇವೆಯನ್ನು ಮಾಡಿ. ಮಂಗಳ-ಗುರು-ಶುಕ್ರ-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಹಲವರು ಹಲವು ರೀತಿಯಲ್ಲಿ ವ್ಯಕ್ತಪಡಿಸುವ ವಿಚಾರಗಳು ನಿಮಗೆ ಸರಿಹೋಗದೇ, ಭಿನ್ನಾಭಿಪ್ರಾಯ ಮೂಡಬಹುದು. ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಮೇಲು. ಕುಲದೇವತಾರಾಧನೆ ವಿಚಾರದಲ್ಲಿ ಸಾಂಪ್ರದಾಯಿಕ ಭಿನ್ನಾಭಿಪ್ರಾಯಗಳು ಮೂಡಿಬರಲಿವೆ. ವೈಯಕ್ತಿಕ ವಿಚಾರಗಳನ್ನು ಅನಾಪ್ತರಲ್ಲಿ ಹಂಚಿಕೊಂಡಲ್ಲಿ, ಸ್ನೇಹಿತರ ಮಧ್ಯೆ ನಗೆಪಾಟಲಿಗೀಡಾಗುವಿರಿ. ಸಾಂಬಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಲಿದೆ. ಮಂಗಳ-ಬುಧ-ಗುರು-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಪ್ರಾಯಕ್ಕೆ ಬಂದ, ವಿದ್ಯಾವಂತ ಯುವಕರನ್ನು ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಅನುಭವವೂ ಹೆಚ್ಚಿ ನಿಮಗೆ ತುಸು ವಿಶ್ರಾಂತಿಯೂ ದೊರೆಯಲಿದೆ. ತಪ್ಪು ಅಭಿಪ್ರಾಯಗಳನ್ನು ಮುಕ್ತ ಮಾತುಕತೆಗಳ ಮುಖಾಂತರ ಬಗೆಹರಿಸಿಕೊಳ್ಳುವುದು ಮೇಲು. ಹಂಗಾಮಿ ಕೆಲಸ ಖಾಯಂ ಆಗುವ ಶುಭ ಸಮಾಚಾರ ಇಷ್ಟರಲ್ಲೇ ಕೇಳಿಬರಲಿದೆ. ರಾಜಕಾರಣಿಗಳಿಗೆ ಡೋಲಾಯಮಾನ ಪರಿಸ್ಥಿತಿ ಎದುರಾಗಬಹುದು. ಸರ್ಕಾರಿ ನೌಕರರಿಗೆ ಬಯಸಿದ ಜಾಗಗಳಿಗೆ ವರ್ಗಾವಣೆಯಾಗಲಿದೆ. ವಿದ್ಯಾಥಿಗಳಿಗೆ ಉತ್ತಮ ದಿನಗಳು. ಸೋಮ-ಬುಧ-ಶುಕ್ರ-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಸಲ್ಲಬೇಕಾಗಿರುವ ಬಾಕಿ ಹಣ ಕೈ ಸೇರಲು ತುಸು ವಿಳಂಬವಾಗಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾರಗಳನ್ನು ಕೂಡಲೇ ತೆಗೆದುಕೊಳ್ಳುವುದರಿಂದ ಕಾರ್ಯ ವಿಳಂಬವನ್ನು ತಪ್ಪಿಸಬಹುದು. ಪದವೀಧರರು ಉದ್ಯೋಗ ನಿಮಿತ್ತ ದೂರದೂರುಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಉಂಟಾಗಲಿದೆ. ಸಾಧ್ಯವಾದಷ್ಟು ಮತ್ತೊಬ್ಬರ ಮರ್ಜಿಯನ್ನು ಕಾಯದಿರುವುದು ಮೇಲು. ಯಾವುದೇ ಕಾರಣಕ್ಕೂ ವೈಯುಕ್ತಿಕ ಕಾಯಿಲೆಗಳನ್ನು ಕಡೆಗಣಿಸಬೇಡಿ. ಸಾಧು ಸಜ್ಜನರ ದರ್ಶನ ಅನಿರೀಕ್ಷಿತವಾಗಿ ಆಗಲಿದೆ. ಭಾನು-ಬುಧ-ಗುರು-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಮತ್ತೊಬ್ಬರ ಹಣಕಾಸಿನ ವಿಚಾರದಲ್ಲಿ ಅರಿವಿಲ್ಲದೇ ಪ್ರವೇಶಿಸುವ ನಿಮಗೆ ತೊಂದರೆ ತಪ್ಪಿದ್ದಲ್ಲ. ಈ ವಿಚಾರದಲ್ಲಿ ಮುನ್ನೆಚ್ಚರದಿಂದಿರುವುದು ಉತ್ತಮ. ಗೃಹೋಪಕರಣ ಹಾಗು ಗೃಹ ನಿರ್ಮಾಣ ಉಪಕರಣಗಳ ಮಾರಾಟಗಾರರಿಗೆ ಉತ್ತಮ ವಹಿವಾಟು. ವಿದ್ಯಾರ್ಥಿಗಳ ವಿದೇಶಾಧ್ಯಯನ ಕೋರಿಕೆ ಈಡೇರುವ ಸಂಭವವಿದೆ. ಕೈಗಾರಿಕೋದ್ಯಮಿಗಳು ತಮ್ಮ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ಹೊಸ ತಂತ್ರಜ್ಞಾನಕ್ಕೆ ಮೊರೆ ಹೋಗದೇ ಬೇರೆ ಮಾರ್ಗೋಪಾಯವಿಲ್ಲ. ಇದಕ್ಕಾಗಿ ಸಹೋದ್ಯಮಿಗಳಿಂದ ಉತ್ತಮ ಸಲಹೆ ದೊರೆಯಲಿದೆ. ಭಾನು-ಮಂಗಳ-ಬುಧ-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ನಿವೃತ್ತಿ ಹೊಂದುವವರು ತಮ್ಮ ಗಳಿಕೆಯನ್ನು ಹೂಡಿಕೆ ಮಾಡುವ ಮೊದಲು ಮತ್ತೊಮ್ಮೆ ಯೋಚಿಸುವುದು ಉತ್ತಮ. ರಾಜಕಾರಣಿಗಳು ತಮ್ಮ ಭರವಸೆಗಳನ್ನು ಈಡೇರಿಸುವುದರಲ್ಲಿ ಕರಾಮತ್ತು ತೋರುವರು. ಗೃಹಿಣಿಯರು ಅಪರಿಚಿತರೊಂದಿಗೆ ಮಾಡುವ ಚೀಟಿ ವ್ಯವಹಾರಗಳ್ಳಲ್ಲಿ ಭಾರೀ ಮೊತ್ತದ ಹಣವನ್ನು ಕಳೆದುಕೊಳ್ಳುವ ಪ್ರಸಂಗ ಬರಬಹುದು. ಹೊಸದಾಗಿ ವಿವಾಹಿತರಾದವರು, ವಿದೇಶಕ್ಕೆ ಹೋಗುವ ಅವಕಾಶ ಕೂಡಿಬರಲಿದೆ. ಗೋ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಗುರು-ಶುಕ್ರ-ಶನಿ-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ಬಂಧುಗಳ ಮನೆಯಲ್ಲಿ ನಡೆಯಲಿರುವ ಶುಭ ಸಮಾರಂಭದಲ್ಲಿ ಉಡುಗೊರೆಗಳ ವಿನಿಮಯವಾಗಲಿದೆ. ರಾಜಕೀಯ ವ್ಯಕ್ತಿಗಳೊಂದಿಗೆ ಎಷ್ಟೇ ಒಡನಾಟವಿದ್ದರೂ ಪ್ರಯೋಜನಕ್ಕೆ ಬಾರದು. ಸೃಜನಶೀಲ ಯೋಜನೆಗಳಲ್ಲಿ ತೊಡಗಿಕೊಳ್ಳುವವರಿಗೆ ಸಾಮಾಜಿಕ ಬೆಂಬಲ ದೊರೆಯಲಿದೆ. ಬಿಡುವಿಲ್ಲದ ಕೆಲಸ, ಕಾರ್ಯಗಳ ನಡುವೆಯೂ ಮಡದಿ ಮಕ್ಕಳೊಂದಿಗೆ ಕಳೆಯಲು ತುಸು ಸಮಯವನ್ನು ಹೊಂದಿಸಿಕೊಳ್ಳುವುದು ಮೇಲು. ಸಹೋದ್ಯೋಗಿಗಳನ್ನು ಯಾವುದೇ ಕಾರಣಕ್ಕೂ ಎದುರು ಹಾಕಿಕೊಳ್ಳಬೇಡಿ. ಭಾನು-ಮಂಗಳ-ಶುಕ್ರ-ಶುಭದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಆಮದು ಮತ್ತು ರಫ್ತು ವ್ಯಾಪಾರಿಗಳಿಗೆ ವಹಿವಾಟು ಆರಂಭದಲ್ಲಿ ಜೋರಾಗಿಯೇ ನಡೆದರೂ, ಮಧ್ಯಂತರದಲ್ಲಿ ಕುಸಿತ ಕಾಣಬಹುದು. ಶಿಲ್ಪಿಗಳಿಗೆ ಅದರಲ್ಲೂ ಮರದ ಕೆತ್ತನೆ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚಲಿದೆ. ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಯುವಕರಿಗೆ ಅಡ್ಡಿ ಆತಂಕಗಳು ಸಹಜ, ಅದನ್ನು ಮೆಟ್ಟಿ ಮುಂದುವರೆಯುವುದರಲ್ಲೇ ಅವರ ಜಾಣತನವಡಗಿದೆ. ಆರ್ಥಿಕ ಪರಿಸ್ಥಿತಿ ಮಂದಗತಿಯಲ್ಲಿದ್ದರೂ, ದೈನಂದಿನ ಜೀವನಕ್ಕೇನೂ ಕೊರತೆಯಿಲ್ಲ. ಗುರುಗಳನ್ನು ಆರಾಧಿಸಿ. ಸೋಮ-ಬುಧ-ಗುರು-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಪರರ ತಪ್ಪುಗಳನ್ನೇ ಸದಾ ಹುಡುಕುವ ನಿಮಗೆ, ನಿಮ್ಮ ತಪ್ಪಿನ ಅರಿವಾಗದಿರುವುದು ಆಶ್ಚರ್ಯ. ಔಷಧಿ ಸಂಶೋಧನಾ ರಂಗದಲ್ಲಿ ಮಹತ್ತರದ ಬದಲಾವಣೆಯಾಗಲಿದೆ. ಕೃಷಿ ಕಾರ್ಯಭರದಿಂದ ಸಾಗಿದರೂ, ಕೂಲಿ ಕಾರ್ಮಿಕರ ಕೊರತೆ ಕಂಡುಬರಲಿದೆ. ಸ್ವಯಂ ಉದ್ಯೋಗವನ್ನು ಆರಂಭಿಸುವವರಿಗೆ, ಮುಕ್ತ ಮಾರುಕಟ್ಟೆಯಲ್ಲಿ ಅವಕಾಶ ದೊರೆಯಲಿದೆ. ಸರ್ಕಾರದಲ್ಲಿ ಅತ್ಯಂತಾನುಭವಿಗಳಾದ ಇಂಜಿನಿಯರ್‍ಗಳಿಗೆ ಅನಿರೀಕ್ಷಿತ ಬದಲಾವಣೆ, ವರ್ಗಾವಣೆಯಾಗಬಹುದು. ಬುಧ-ಗುರು-ಶನಿ-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಪದವೀಧರರಿಗೆ ಬದುಕಿನಲ್ಲಿ ಅತ್ಯುತ್ತಮ ಅವಕಾಶಗಳು ಮೇಲಿಂದ ಮೇಲೆ ಬರಲಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಿ. ಸುಗಂಧ ದ್ರವ್ಯಗಳು ಹೇರಳವಾಗಿ ಮಾರಾಟವಾಗಲಿದ್ದು, ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಹೆಚ್ಚು ಹೆಚ್ಚು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಷ್ಟೂ, ವೈಯಕ್ತಿಕ ಜೀವನದಿಂದ ಅಷ್ಟೇ ದೂರವಾಗುವಿರಿ ಎಂಬುದನ್ನು ಮರೆಯಬೇಡಿ. ರಾಜಕಾರಣಿಗಳ ಪಕ್ಷೀಯ ಚಟುವಟಿಕೆಗಳಿಗೆ ವರಿಷ್ಠರಿಂದ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ಗೋ ಸೇವೆ ಮಾಡಿ. ಭಾನು-ಬುಧ-ಶನಿ-ಶುಭ ದಿನಗಳು.

ವಾರ ಭವಿಷ್ಯ - ದಿನಾಂಕ : 21.05.2023 ರಿಂದ 27.05.2023 - Janathavaniಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.) 

ತಾಯಿಯು ತನ್ನ ತಪ್ಪು ತಿಳುವಳಿಕೆಯಿಂದ ನಿಮ್ಮನ್ನು ನಿಂದಿಸಬಹುದು. ಸರ್ಕಾರಿ ನೌಕರಿಯಲ್ಲಿದ್ದಾಗ ವಿನಾಕಾರಣ ನಿಮ್ಮ ಮೇಲೆ ಬಂದಿದ್ದ ಆಪಾದನೆಗಳೆ ಲ್ಲವೂ ಸಾಕ್ಷಿಯಿಲ್ಲದೇ ಇರುವುದರಿಂದ, ಕ್ರಮೇಣ ಬಿದ್ದು ಹೋಗಲಿವೆ. ಇದರಿಂದಾಗಿ ಕಳೆದು ಹೋಗಿದ್ದ ಗೌರವ, ಘನತೆ ಮರಳಿಬರಲಿದೆ. ಕೃಷಿಕ ಮಿತ್ರರು ಬೇಸಾಯ ದಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು. ಬಿಡಿಸಲಾಗದ ಸಮಸ್ಯೆಗಳಿದ್ದಲ್ಲಿ, ಅನುಭವಿಗಳಾದ ಹಿರಿಯರಿಂದ ಸಲಹೆ, ಸೂಚನೆಗಳನ್ನು ಪಡೆಯಿರಿ. ಹಣಕಾಸಿನ ಸಮಸ್ಯೆಗಳಿಗೆ ಮಡದಿಯಿಂದ ಸುಲಭೋಪಾಯವೊಂದು ಸಿಗಲಿದೆ. ವಿಷ್ಣು ಸಹಸ್ರನಾಮವನ್ನು ಪಠಿಸಿರಿ. ಸೋಮ-ಗುರು-ಶನಿ-ಶುಭ ದಿನಗಳು.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]

error: Content is protected !!