ಮುಂದೊಂದು ದಿನ ಬೆನ್ನ ಹಿಂದೆ ಸಿಲೆಂಡರನ್ನು ಕಟ್ಟಿಕೊಂಡು ಉಸಿರಾಡುವ ಪರಿಸ್ಥಿತಿ ಉಂಟಾಗದಿರಲಿ…

ಜೂನ್ ತಿಂಗಳಲ್ಲಿ ಮುಂಗಾರು ಪ್ರಾರಂಭವಾಗಲಿದ್ದು ಅಂತಹ ಸಂದರ್ಭದಲ್ಲಿ ಮಳೆ ಬೀಳುವುದರಿಂದ ಭೂಮಿಯ ತಾಪಮಾನ ತಣ್ಣಗಿದ್ದು ಆ ಸಮಯದಲ್ಲಿ ಸಸಿಗಳನ್ನು ನೆಡುವುದರಿಂದ ಚನ್ನಾಗಿ ಬೆಳೆಯಲು ಮತ್ತು ನೀರಿನ ಕೊರತೆಯು ಕೂಡ ಇರುವುದಿಲ್ಲ, ಅದೇ ಜನವರಿಯಿಂದ ಮೇ ತಿಂಗಳವರೆಗೆ ಭೂಮಿಯ ತಾಪಮಾನ ಹೆಚ್ಚಾಗಿದ್ದು ನೀರಿನ ಕೊರತೆಯಿಂದ ಸಸಿಗಳು ಒಣಗಿ ಹೋಗುತ್ತವೆ.
ಆ ಕಾರಣದಿಂದಾಗಿ ಜೂನ್ ತಿಂಗಳ 5 ರಂದು ವಿಶ್ವ ಪರಿಸರ ದಿನಾಚರಣೆ ಸೂಕ್ತವಾದ ಸಮಯವು ಹೌದು. ಹಾಗಾಗಿ ಮರಗಳ ಪ್ರಯೋಜನವನ್ನು ನೋಡುವುದಾದರೆ ಮರಗಳು ವಾತಾವರಣದಲ್ಲಿ ಇರುವ ಇಂಗಾಲದ ಡೈ ಆಕ್ಸೈಡ್‌ಅನ್ನು ಹಿರಿಕೊಂಡು ಉತ್ತಮ ಆಮ್ಲಜನಕವನ್ನು ನೀಡುವುದರಿಂದ ಮಾನವ ಮತ್ತು ಸಕಲ ಜೀವ ರಾಶಿಗಳಿಗೊ ಅನುಕೂಲವಾಗಿದೆ. ಆದರೆ ಈಗಿನ ಆಧುನೀಕರಣದಿಂದ ರಸ್ತೆ ಅಗಲಮಾಡುವ ನೆಪದಲ್ಲಿ ಅನೇಕ ವರ್ಷಗಳಿಂದ ನೆರಳಾಗಿ ನಿಂತಿದ್ದ ದೊಡ್ಡ ದೊಡ್ಡ ಮರಗಳನ್ನು ಕಡಿದು ಏನನ್ನು ಸಾಧಿಸಲು ಹೋರಟಿದ್ದಾರೆ ತಿಳಿಯದು. 

ಪಕ್ಷಿಗಳು  ಮರಗಳನ್ನೆ ಆಶ್ರಯಿಸಿಕೊಂಡು ಸಂತನಾಭಿವೃದ್ದಿಗೊಳಿಸಲು ತೊಡಕು ಉಂಟಾಗುವುದರೊಂದಿಗೆ ಪಕ್ಷಿಗಳ ಸಂಕುಲವೇ ನಾಶವಾಗುತ್ತದೆ. 

ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಮಾನವನ ಮೇಲೆ ಪರಿಣಾಮ ಬೀರುತ್ತಿದೆ ಉತ್ತಮ ಆಮ್ಲಜನಕವಿರದೆ ಉಸಿರಾಟದ ತೊಂದರೆಯಿಂದ ನರಳಾಡಬೇಕಾಗುತ್ತದೆ.  ಬಿಸಿಲಿನ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇನ್ನು ಡೊಡ್ಡ ದೊಡ್ಡ ಕಟ್ಟಡಗಳಿಗೆ ಗ್ಲಾಸ್‌ನ್ನು ಅಳವಡಿಸುವುದರಿಂದ ಸೂರ್ಯನ ಶಾಖದಿಂದ ಇನ್ನೊಷ್ಟು ತಾಪಮಾನ ಹೆಚ್ಚಾಗುತ್ತಿದೆ. ಮತ್ತು ವಿಜ್ಞಾನಿಗಳ ಪ್ರಕಾರ ರೆಫರೆಜೇಟರ್, ಹವಾನಿಯಂತ್ರಿತ (A/C ) ಹಾಗೂ ಸುಗಂಧ ದ್ರವ್ಯಗಳಿಂದ ಓಜೋನ್ ಪದರ ಮೇಲೆ ಬೀರುತ್ತಿರುವ ಪರಿಣಾಮದಿಂದ ಓಜೋನ್ ಪದರದಲ್ಲಿ ಸಣ್ಣ ಸಣ್ಣ ರಂಧ್ರಗಳಾಗಿದ್ದು, ಭೂಮಿಯ ಮೇಲೆ ಇನ್ನೊಷ್ಟು ಉಷ್ಣಾಂಶ ಹೆಚ್ಚಾಗುವುದು. 

ಸೂರ್ಯನ ಕಿರಣಗಳು ನೇರವಾಗಿ ಮನುಷ್ಯನ ದೇಹದ ಮೇಲೆ ಬೀಳುವುದರಿಂದ ಚರ್ಮ ರೋಗಗಳು ಬರುವ ಸಾಧ್ಯತೆ ಹೆಚ್ಚು. ಜಲಮಾಲಿನ್ಯವು ಕೈಗಾರಿಕೆಗಳಿಂದ ಹೊರ‌ ಸೊಸುವ ವಿಷಕಾರಿ ರಾಸಾಯನಿಕ ಮಿಶ್ರಿತ ನೀರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ದಿನ ನಿತ್ಯ ಪ್ಲಾಸ್ಟಿಕ್ ಬಳಿಕೆಯಿಂದ ಪರಿಸರ ಆಳಾಗುವುದಲ್ಲದೆ ಪ್ರಾಣಿ, ಪಕ್ಷಿಗಳ ಜೀವಕ್ಕೂ ಹಾನಿಕಾರಕ ಮತ್ತು ಪ್ಲಾಸ್ಟಿಕ್ ಚರಂಡಿಗಳಲ್ಲಿ ಕಟ್ಟುವುದರಿಂದ ನೀರು ಸರಾಗವಾಗಿ ಹರಿಯದೆ ನಿಂತ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ಸಂಕ್ರಾಮಿಕ ರೋಗಗಳು ಹರಡುತ್ತದೆ. ಹೀಗೆ ಪರಿಸರ ಹಾಳಾದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.   ಹಾಗಾಗಿ ಪರಿಸರ ಉಳುವಿಗಾಗಿ ಹೋರಾಡುವುದು ನಮ್ಮ ನಿಮ್ಮ ಕರ್ತವ್ಯವಾಗಿದೆ.

ಪರಿಸರ ಪ್ರೇಮಿಗಳು ಪ್ರತಿ ವರ್ಷ ಸಾವಿರಾರು ಸಸಿಗಳನ್ನು ಹಾಕುವುದರ ಮೂಲಕ ಪರಿಸರವನ್ನು ಕಾಪಾಡಲು ಶ್ರಮಿ‌ಸುತ್ತಿದ್ದಾರೆ. ಪರಿಸರ ಚನ್ನಾಗಿದ್ದರೆ ಮಾತ್ರ   ಸಕಲರೂ ಚೆನ್ನಾಗಿರುತ್ತಾರೆ. ಪರಿಸರವನ್ನು ನಾಶಗೊಳಿಸಿದರೆ ಅದು ನಮ್ಮನ್ನು ನಾಶಗೊಳಿಸುತ್ತದೆ. ಆದ ಕಾರಣ ಎಲ್ಲರೂ ಪರಿಸರವನ್ನು ಉಳಿಸಿ, ಗಿಡ-ಮರಗಳನ್ನು ಬೆಳೆಸೋಣ, ಇಲ್ಲವಾದರೆ ಮುಂದೆ ಒಂದು ದಿನ ಪ್ರತಿಯೊಬ್ಬರು ಬೆನ್ನ ಹಿಂದೆ ಸಿಲೆಂಡರನ್ನು ಕಟ್ಟಿಕೊಂಡು ಉಸಿರಾಡುವ ಪರಿಸ್ಥಿತಿ ಉಂಟಾಗುವುದರಲ್ಲಿ ಸಂದೇಹವಿಲ್ಲ.

ಈ ನಿಟ್ಟಿನಲ್ಲಿ ಸರ್ಕಾರವು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಸಂಘ-ಸಂಸ್ಥೆಗಳಿಗೆ ಸಹಕಾರಿಯಾಗಬೇಕು.  ಮುಂದಾಗುವ ಅನಾಹುತವನ್ನು ತಪ್ಪಿಸಲು ಇದೇ ಜಾಗೃತರಾಗಬೇಕಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು…


ಎನ್. ಕೆ. ಕೊಟ್ರೇಶ್  
ಸಾಹಸ ಕ್ರೀಡಾ ತರಬೇತುದಾರ, ದಾವಣಗೆರೆ.
ಮೊ.9844206869

[email protected]

error: Content is protected !!