ಎಲ್ಲ ವೈದ್ಯರು ವೈದ್ಯ ಪದವಿ ಪಡೆದ ತಕ್ಷಣ ತಮ್ಮ ಸೇವೆಯಲ್ಲಿ ಯಶಸ್ವೀ ವೈದ್ಯನಾಗುವುದಿಲ್ಲ, ಯಶಸ್ವೀ ವೈದ್ಯನಾಗುವುದು ಒಂದು ಕಲೆ. ಈ ಕಲೆಯನ್ನು ಹೊಂದುವುದು ವೈದ್ಯರಿಗೆ ಒಂದು
ಸವಾಲಾಗಿರುತ್ತದೆ. ಅವರು ತಮ್ಮ ತಮ್ಮ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿಷಯದಲ್ಲಿ ಪರಿಣಿತಿ ಹೊಂದಿದ್ದರೂ, ತನ್ನಲ್ಲಿ ಆರೋಗ್ಯ ತಪಾಸಣೆಯ ಸಹಾಯ ಕೇಳಿ ಬರುವ ವ್ಯಕ್ತಿಯನ್ನು ಯಾವ ರೀತಿ ನೋಡುತ್ತಾರೆ ಹಾಗೂ ಮಾತನಾಡುವ ಶೈಲಿ, ಮುಕ್ತವಾಗಿ ನೀಡುವ ಸಲಹೆ, ಮಾರ್ಗದರ್ಶನ, ಜನ ಸಂಪರ್ಕದ ರೀತಿ ಮತ್ತು ಅವರಲ್ಲಿರುವ ಮಾನವೀಯತೆಯ ಗುಣಗಳ ಮೇಲೆ ಆಧಾರವಾಗಿರುತ್ತದೆಯೋ ಹೊರತು, ವೈದ್ಯರ ಶ್ರೀಮಂತಿಕೆ ಹಾಗೂ ವೈದ್ಯರು ಪಡೆದ ಅಂಕ ಅಥವಾ ಚಿನ್ನದ ಪದಕಗಳಿಂದಲ್ಲ.
ಮನೋಚಿಕಿತ್ಸೆ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಸಾಯುವವರನ್ನು ಸಾವಿನ ದವಡೆಯಿಂದ ಹಿಡಿದು ತಂದು, ಬದುಕಿಸುವ ಭರವಸೆಯನ್ನು ಕೊಟ್ಟು, ಜೀವ ಉಳಿಸಿ, ಬದುಕಿನಲ್ಲಿ ಉನ್ನತ ಮಟ್ಟಕ್ಕೆ ಏರುವಂತೆ ಮಾಡಿ, ಜೀವನದಲ್ಲಿ ಸಂತೋಷ, ನೆಮ್ಮದಿಯಿಂದ ಬದುಕನ್ನು ನಡೆಸುವಂತೆ ಮಾಡಿದೆ.
`ಮನೋಚಿಕಿತ್ಸೆ’ ಎನ್ನುವುದು ವೈದ್ಯಕೀಯ ರಂಗದಲ್ಲಿರುವ/ಪದ್ಧತಿಯಲ್ಲಿರುವ ಹಲವಾರು ಚಿಕಿತ್ಸೆಗಳಲ್ಲಿ (ಕಲೆಗಳಲ್ಲಿ) ಇದು ಒಂದು ಚಿಕಿತ್ಸೆ.
ತಪಾಸಣೆಗೆ ಬಂದಂತಹ ವ್ಯಕ್ತಿಯ ಮನಸ್ಸಿನಲ್ಲಿ ಉಂಟಾಗಿರುವ ಅಲ್ಲೋಲ ಕಲ್ಲೋಲ, ಗೊಂದಲ ಹಿಡಿತದಲ್ಲಿರದೆ ಮತ್ತು ಅಸ್ಥಿರತೆ ಇರುವ ಆಂತರಾಳದ ಭಾವನೆಗಳನ್ನು
ಮತ್ತು ಯೋಚನೆಗಳನ್ನು ಹಾಗೂ ಬೆಳವಣಿಗೆಯ ಹಂತದಲ್ಲಿ ಕಂಡುಬರುವ ನ್ಯೂನತೆಗಳನ್ನು ಅರ್ಥಮಾಡಿಕೊಂಡು
ಅದಕ್ಕೆ ತಕ್ಕಂತೆ ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ಕೊಡುವುದೇ `ಮನೋಚಿಕಿತ್ಸೆ’.
ಮನೋಚಿಕಿತ್ಸೆಯ ವೃತ್ತಿಯಲ್ಲಿ ಮನೋಚಿಕಿತ್ಸೆಯ ಜೊತೆಗೆ ಆಪ್ತಸಮಾಲೋಚನೆಯನ್ನು ನಡೆಸಿ, ಮನೋರೋಗಿಗಳ ತೊಂದರೆಗಳಿಗೆ ತಕ್ಕಂತೆ ಸೂಕ್ತ ಸಲಹೆಗಳನ್ನು ಕೊಡಲಾಗುತ್ತದೆ. ಮನೋಚಿಕಿತ್ಸೆಯಲ್ಲಿ ಮನೋಚಿಕಿತ್ಸಕನ ಮತ್ತು ರೋಗಿಯ/ವ್ಯಕ್ತಿಯ ನಡುವೆ ನಡೆದ ಎಲ್ಲ ಸಂಭಾಷಣೆಗಳನ್ನು ಅಥವಾ ಇತರೆ ವಿಷಯಗಳನ್ನು ಗೌಪ್ಯವಾಗಿಡಲಾಗುತ್ತದೆ. ಇದು ಪ್ರತಿಯೊಬ್ಬ ವೈದ್ಯರು ಮತ್ತು ಮನೋಚಿಕಿತ್ಸಾ ತಜ್ಞರ ಮನೋಧರ್ಮ. ಮನೋಚಿಕಿತ್ಸೆಯಲ್ಲಿ ಮುಖ್ಯವಾಗಿ ಈ ಕೆಳಗಿನ ವಿಷಯಗಳಿಗೆ ಸಂಬಂಧ ಪಟ್ಟಂತೆ ಸೂಕ್ತ ಸಲಹೆಗಳನ್ನು ಕೊಡಲಾಗುತ್ತದೆ.
* ಮಾನಸಿಕ ರೋಗದಿಂದ ಬಳಲುತ್ತಿರುವವರಿಗೆ.
* ಲೈಂಗಿಕ ತೊಂದರೆಯಲ್ಲಿರುವವರಿಗೆ.
* ಪ್ರೀತಿ-ಪ್ರೇಮದ ಸುಳಿಯಲ್ಲಿ ಸಿಲುಕಿರುವವರಿಗೆ.
* ದುಶ್ಚಟಗಳಿಗೆ ದಾಸರಾಗಿರುವವರಿಗೆ.
* ವಿದ್ಯಾಭ್ಯಾಸದಲ್ಲಿ ಹಿನ್ನಡೆ ಇರುವವರಿಗೆ.
* ಜ್ಞಾಪಕ ಶಕ್ತಿ ಕಡಿಮೆ ಇದೆ ಎಂದು ಯೋಚಿಸುವವರಿಗೆ.
* ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಇಲ್ಲದವರಿಗೆ.
* ಕುಟುಂಬ ಕಲಹದಲ್ಲಿರುವವರಿಗೆ.
* ಗಂಡ-ಹೆಂಡತಿಯಲ್ಲಿರುವ ವೈಮನಸ್ಸು ಮತ್ತು ಭಿನ್ನ-ಭೇದ ಮನಸ್ಸು ಉಳ್ಳವರಿಗೆ.
* ಬಂಜೆತನದಿಂದ ಬಳಲುವವರಿಗೆ.
* ವಿವಾಹ ವಿಚ್ಛೇಧನ ಬಯಸುವವರಿಗೆ.
* ಜೀವನ ಸಾಕಾಗಿದೆ ನಾನು ಆತ್ಮಹತ್ಯೆಮಾಡಿಕೊಳ್ಳುಬೇಕು ಎನ್ನುವವರಿಗೆ.
* ಖಿನ್ನತೆಗೆ ಒಳಗಾದವರಿಗೆ.
ಮನೋಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ಎನ್ನುವುದು ಈ ಮೇಲಿನ ಎಲ್ಲಾ ತೊಂದರೆಗಳಿಂದ ಹೊರ ಬರಲು ವರದಾನವಾಗಿದೆ. ನಮ್ಮ ಭಾರತ ದೇಶದಲ್ಲಿ ಮನೋಚಿಕಿತ್ಸೆಯ (ಸೈಕೋಥೆರಪಿ) ವಿಷಯಕ್ಕೆ ಸಂಬಂಧಪಟ್ಟಂತೆ ಕಲಿಯಲು ಮನೋವೈದ್ಯಕೀಯ ಮಹಾವಿದ್ಯಾಲಯಗಳು ಇವೆ. ಆದರೆ ಮನೋಚಿಕಿತ್ಸಕರು ತಮ್ಮ ವೃತ್ತಿ ನಡೆಸಲು ನೋಂದಾಯಿತರಾಗಲೂ ಮನೋಚಿಕಿತ್ಸೆಯ ವಿಷಯಕ್ಕೆ ಸಂಬಂಧ ಪಟ್ಟಂತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಯಾವುದೇ ಮನೋಚಿಕಿತ್ಸೆಯ ಪರಿಷತ್ತುಗಳು ಕಂಡುಬರುವುದಿಲ್ಲ. ಇದರಲ್ಲಿ ವಿಶೇಷವಾಗಿ ವಿವಿಧ ರೀತಿಯಲ್ಲಿ ಮನೋಚಿಕಿತ್ಸೆ ಹಾಗೂ ಆಪ್ತಸಮಲೋಚನೆ ಮಾಡಲಾಗುತ್ತದೆ.
ಶ್ರೀ ಕರಿಬಸಯ್ಯ ಮಠದ ವೀ
ಮನೋಚಿಕಿತ್ಸೆ ತಜ್ಞರು, ದಾವಣಗೆರೆ.
ಫೋ. : 94810 46501, 98806 30199